Covid 19 Vaccine: ರಾಜ್ಯದ ಪಾಸಿಟಿವಿಟಿ ದರ ದಕ್ಷಿಣ ಭಾರತದಲ್ಲೇ ಕಮ್ಮಿ..!

Kannadaprabha News   | Asianet News
Published : Dec 08, 2021, 10:39 AM ISTUpdated : Dec 08, 2021, 10:45 AM IST
Covid 19 Vaccine: ರಾಜ್ಯದ ಪಾಸಿಟಿವಿಟಿ ದರ ದಕ್ಷಿಣ ಭಾರತದಲ್ಲೇ ಕಮ್ಮಿ..!

ಸಾರಾಂಶ

*  0.37% ಪಾಸಿಟಿವಿಟಿ ದರ ದಾಖಲು  ಪ್ರಕರಣಗಳು ಹೆಚ್ಚಿದ್ದರೂ ಸೋಂಕು ನಿಯಂತ್ರಣದಲ್ಲಿದೆ *  ಧಾರವಾಡ ಸೇರಿ ಕೆಲವೆಡೆ ಕ್ಲಸ್ಟರ್‌ಮಟ್ಟದಲ್ಲಿ ಸೋಂಕು ಸ್ಫೋಟ *  ದಕ್ಷಿಣದ ಇತರೆ ರಾಜ್ಯಗಳಲ್ಲಿ ಎಷ್ಟಿದೆ ಪಾಸಿಟಿವಿಟಿ ದರ?  

ಜಯಪ್ರಕಾಶ್ ಬಿರಾದಾರ್

ಬೆಂಗಳೂರು(ಡಿ.08):  ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೊರೋನಾ(Coronavirus) ಪರೀಕ್ಷೆಗೆ ಒಳಗಾಗುತ್ತಿರುವ ಪ್ರತಿ 300 ಮಂದಿಯಲ್ಲಿ ಒಬ್ಬರಿಗೆ ಮಾತ್ರ ಸೋಂಕು ದೃಢಪಡುತ್ತಿದೆ. ವಿಶೇಷವೆಂದರೆ, ರಾಜ್ಯದ 10 ಜಿಲ್ಲೆಗಳಲ್ಲಿ ಪರೀಕ್ಷೆಗೆ ಒಳಪಡುವ ಸರಾಸರಿ ಒಂದು ಸಾವಿರ ಮಂದಿಯ ಪೈಕಿ ಒಬ್ಬರಲ್ಲಿಯೂ ಸೋಂಕು ಪತ್ತೆಯಾಗುತ್ತಿಲ್ಲ. ಇದು ರಾಜ್ಯದಲ್ಲಿ ಸೋಂಕು ಹತೋಟಿಯಲ್ಲಿದೆ ಎಂಬುದಕ್ಕೆ ಸಾಕ್ಷಿ ಎನ್ನುತ್ತಾರೆ ಆರೋಗ್ಯ ತಜ್ಞರು. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳ ಮತ್ತು ಒಮಿಕ್ರೋನ್‌(Omicron) ರೂಪಾಂತರಿ ಆತಂಕವಿದ್ದರೂ, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ(Positivity Rate) ಮಾತ್ರ ಹತೋಟಿಯಲ್ಲಿಯೇ ಇದೆ. ಅದರಲ್ಲೂ ದಕ್ಷಿಣ ಭಾರತದ(South India) ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ(Karnataka) ಅತ್ಯಂತ ಕಡಿಮೆ ಅಂದರೆ ಶೇ.0.37ರಷ್ಟು ಪಾಸಿಟಿವಿಟಿ ದರವಿದೆ.

"

ಕೋವಿಡ್ ಪರೀಕ್ಷೆಗೆ(Covid Test) ಒಳಗಾಗುವ ಸರಾಸರಿ 100 ಮಂದಿಯ ಪೈಕಿ ಎಷ್ಟು ಜನರಲ್ಲಿ ಸೋಂಕು ಪತ್ತೆಯಾಗುತ್ತದೆ ಎಂಬುದೇ ಪಾಸಿಟಿವಿಟಿ ದರ. ಮೊದಲ ಅಲೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.15ಕ್ಕೆ ತಲುಪಿತ್ತು. ಎರಡನೇ ಅಲೆ ವೇಳೆ ಬರೋಬ್ಬರಿ ಶೇ.36ಕ್ಕೆ ಹೆಚ್ಚಳವಾಗಿತ್ತು. ಆ ಸಂದರ್ಭದಲ್ಲಿ100 ಮಂದಿ ಪರೀಕ್ಷೆಗೊಳಗಾದರೆ 36 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಡಿ.1ರಿಂದ ಡಿ.7ವರೆಗೂ ರಾಜ್ಯದಲ್ಲಿ ಸರಾಸರಿ ಶೇ.0.37ರಷ್ಟು ಮಾತ್ರ ಪಾಸಿಟಿವಿಟಿ ದಾಖಲಾಗಿದೆ. 

Omicron Threat: ಒಮಿಕ್ರೋನ್‌ ಸೋಂಕಿತ ಎಸ್ಕೇಪ್‌: ಹೋಟೆಲ್‌ ವಿರುದ್ಧ ಕೇಸ್‌

ವೈರಾಣು ತಜ್ಞ ಡಾ.ವಿ.ರವಿ ಪ್ರಕಾರ, ‘ಪ್ರದೇಶವೊಂದರ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರಬೇಕು. ಒಂದು ವೇಳೆ ಹೆಚ್ಚಿದ್ದರೆ ಆ ಪ್ರದೇಶ ಅಪಾಯದಲ್ಲಿದೆ ಎಂದರ್ಥ. ಆ ಹಂತ ತಲುಪಿದಾಗ ಲಾಕ್‌ಡೌನ್(Lockdown) ಸೇರಿದಂತೆ ಹಲವು ನಿರ್ಬಂಧಗಳ ಜಾರಿ ಅವಶ್ಯಕವಾಗಿರುತ್ತದೆ.’ ಸದ್ಯ ರಾಜ್ಯದಲ್ಲಿ ಚಿಕ್ಕಮಗಳೂರು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿಯೂ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದೆ.

111 ದಿನಗಳಿಂದ ಶೇ.1ಕ್ಕಿಂತ ಕಡಿಮೆ: 

ಎರಡನೇ ಅಲೆ ಉತ್ತುಂಗ ತಲುಪಿದ್ದ ಮೇ ತಿಂಗಳಿನಲ್ಲಿ ಶೇ.36ರಷ್ಟಿದ್ದ ಪಾಸಿಟಿವಿಟಿ ದರ ಇಳಿಕೆಯಾಗುತ್ತಾ ಆಗಸ್ಟ್‌ 16ಕ್ಕೆ ಶೇ.1ಕ್ಕೆ ತಗ್ಗಿತ್ತು. ಕಳೆದ 111 ದಿನಗಳಿಂದಲೂ ಶೇ.1ಕ್ಕಿಂತಲೂ ಕಡಿಮೆಯೇ ವರದಿಯಾಗುತ್ತಿದೆ. ನವೆಂಬರ್ ಮೊದಲ ವಾರ ಶೇ.0.2ಕ್ಕೆ ಇಳಿದಿತ್ತು. ಇತ್ತ ಕಳೆದ ಒಂದು ವಾರದಿಂದ ಒಮಿಕ್ರೋನ್‌ ಪತ್ತೆ, ಹೊಸ ಪ್ರಕರಣಗಳ ತುಸು ಹೆಚ್ಚಳ, ಬೆಂಗಳೂರು, ಧಾರವಾಡ ಸೇರಿ ಕೆಲವೆಡೆ ಕ್ಲಸ್ಟರ್‌ಮಟ್ಟದಲ್ಲಿ ಸೋಂಕು ಸ್ಫೋಟಗೊಂಡು ರಾಜ್ಯದಲ್ಲಿ  ಸೋಂಕಿನ ಆತಂಕ ಎದುರಾಗಿತ್ತು. ಆದರೆ, ಈ ಅವಧಿಯಲ್ಲಿಯೂ ಪಾಸಿಟಿವಿಟಿ ದರ ಹತೋಟಿಯಲ್ಲಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. 

Omicron variant : ಎಚ್ಚರ ತಪ್ಪಿದರೆ 3 ನೇ ಅಲೆ, ಅಂಕಿ ಅಂಶ ನೋಡಿ!

ಸೋಂಕು ಹತೋಟಿಯಲಿದೆ

ಸೋಂಕಿನ ಹೊಸ ಪ್ರಕರಣಗಳ ಹೆಚ್ಚಳಕ್ಕಿಂತಲೂ ಪಾಸಿಟಿವಿಟಿ ದರವು ಆ ಪ್ರದೇಶದ ಸೋಂಕಿನ ತೀವ್ರತೆಯನ್ನು ಎತ್ತಿಹಿಡಿಯುತ್ತದೆ. ಸದ್ಯ ಶೇ.1ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದೆ ಎಂದರೆ ಸೋಂಕು ಹತೋಟಿಯಲ್ಲಿದೆ ಎಂದರ್ಥ. ಮುಂದಿನ ದಿನಗಳಲ್ಲಿಯೂ ಶೇ.1ಕ್ಕಿಂತ ಕಡಿಮೆ ಇರುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕ ಅಂತ ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ. 

ದಕ್ಷಿಣದ ಇತರೆ ರಾಜ್ಯಗಳಲ್ಲಿ ಎಷ್ಟಿದೆ ಪಾಸಿಟಿವಿಟಿ ದರ?

ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆ ಇದೆ. ಸದ್ಯ ಕೇರಳದಲ್ಲಿ(Kerala) ಶೇ.7, ಮಹಾರಾಷ್ಟ್ರದಲ್ಲಿ(Maharashtra) ಶೇ.1.1, ತೆಲಂಗಾಣ(Telangana) ಮತ್ತು ಆಂಧ್ರದಲ್ಲಿ(Andhra Pradesh) ತಲಾ ಶೇ.0.5 ರಷ್ಟು, ತಮಿಳುನಾಡಿನಲ್ಲಿ(Tamil Nadu) ಶೇ.0.7ರಷ್ಟಿದೆ. ಇನ್ನು ನಿತ್ಯ ವರದಿಯಾಗುವ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ಆಂಧ್ರ ಮತ್ತು ತೆಲಂಗಾಣದಲ್ಲಿ 150ರ ಆಸುಪಾಸಿನಲ್ಲಿದ್ದರೆ, ಕೇರಳದಲ್ಲಿ ಸುಮಾರು ನಾಲ್ಕು ಸಾವಿರ, ಮಹಾರಾಷ್ಟ್ರದಲ್ಲಿ 600, ತಮಿಳುನಾಡಿನಲ್ಲಿ 700 ಪ್ರಕರಣಗಳು ವರದಿಯಾಗುತ್ತಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್