Karnataka Buses: ಸರ್ಕಾರಿ ಬಸ್ ಹತ್ತೋ ಮುನ್ನ ಚಿಲ್ಲರೆ ಇಟ್ಕೊಳ್ಳಿ, ಜಗಳ ಮಾಡಿದ್ರೆ 3 ವರ್ಷ ಜೈಲೇ ಗತಿ!

By Suvarna NewsFirst Published Dec 8, 2021, 11:47 AM IST
Highlights

* ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಹತ್ತೋ ಮುನ್ನ ಇದನ್ನೊಮ್ಮೆ ಓದಿ

* ಬಸ್‌ ಹತ್ತಿ ಸಿಬ್ಬಂದಿ ಬಳಿ ಚಿಲ್ಲರೆಗಾಗಿ ಚರ್ಚೆ ಮಾಡಿದ್ರೆ ಕಂಬಿ ಎಣಿಸೋದು ಗ್ಯಾರಂಟಿ

* ಚಿಲ್ಲರೆಗಾಗಿ ಚಕಾರವೆತ್ತಿದ್ರೆ ಸರ್ಕಾರಿ ನೌಕರನ ಸೇವೆಗೆ ಅಡ್ಡಿ ಮಾಡಿದಂತೆ

ಬೆಂಗಳೂರು(ಡಿ.08): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ತನ್ನ ಎಲ್ಲಾ ಬಸ್‌ಗಳಲ್ಲಿ 'ಚಿಲ್ಲರೆ' (Change) ಕೇಳುವುದನ್ನು ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಂದು ಪರಿಗಣಿಸಬಹುದು ಮತ್ತು ತಪ್ಪಿತಸ್ಥರಾದರೆ, ಕಾನೂನು 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂದು ಪೋಸ್ಟರ್‌ಗಳನ್ನು ಹಾಕಿದೆ. NWKRTC ಆರು ಜಿಲ್ಲೆಗಳನ್ನು ಒಳಗೊಂಡಿದೆ ಮತ್ತು ಎಂಟು ವಿಭಾಗಗಳನ್ನು ಹೊಂದಿದೆ, ಇದು ರಾಜ್ಯದ 4,428 ಹಳ್ಳಿಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ, ಪ್ರಯಾಣಿಕರು ಮತ್ತು ಸಾರಿಗೆ ಸಿಬ್ಬಂದಿ ನಡುವೆ ಚಿಲ್ಲರೆಗಾಗಿ ಜಗಳವಾಗುವುದು, ಹೊಡೆದಾಟ ಹೊಸದೇನಲ್ಲ. ಹಣದಲ್ಲಿ ಹೆಚ್ಚಿನ ಆಯ್ಕೆ ಇಲ್ಲದಿರುವುದು ಈ ಘರ್ಷಣೆಗೆ ಕಾರಣವಾಗುತ್ತದೆ ಹಾಗೂ ಈ ಜಗಳ ಕಾವೇರುವಂತೆ ಮಾಡುತ್ತದೆ. ಇದು ಸಾಮಾನ್ಯವಾಗಿ ಗಂಟೆಗಟ್ಟಲೆ ಬಸ್‌ಗಳನ್ನು ನಿಲ್ಲಿಸುವಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಎಲ್ಲಾ ಪುನರಾವರ್ತಿತ ಸನ್ನಿವೇಶಗಳಿಂದ ಬೇಸರಗೊಂಡ NWKRTC ತನ್ನ ಎಲ್ಲಾ ಬಸ್‌ಗಳಲ್ಲಿ ಈ ಪೋಸ್ಟರ್‌ಗಳನ್ನು ಹಾಕಿ, ಇಂತಹುದ್ದೊಂದು ಕ್ರಮ ಜಾರಿಗೊಳಿಸಲು ಮುಂದಾಗಿದೆ.

ಪುತ್ತೂರು-ಬೆಂಗಳೂರು ನಡುವೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸಂಚಾರ

ಬಸ್‌ಗಳನ್ನು ಹತ್ತಿದ ಪ್ರಯಾಣಿಕರು ಈ ಪೋಸ್ಟರ್‌ಗಳನ್ನು ನೋಡಿ ಗಾಬರಿಗೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಯಾಣಿಕ, ಬಾಗಲಕೋಟೆಯ ಶಾಲಾ ಶಿಕ್ಷಕ ಕೆಂಪಣ್ಣ ಹವಾಲ್ದಾರ್ 'ನನ್ನ ಬಳಿ ನಿಖರವಾದ ಮೊತ್ತವಿದೆಯೇ ಎಂದು ನಾನು ನನ್ನ ಪರ್ಸ್ ಅನ್ನು ಪರಿಶೀಲಿಸಿದ್ದೇನೆ. ದೃಢಪಡಿಸಿದ ನಂತರ, ನಾನು ನನ್ನ ಪ್ರಯಾಣವನ್ನು ಮುಂದುವರಿಸಲು ನಿರ್ಧರಿಸಿದೆ. ಚಿಲ್ಲರೆಗಾಗಿ ಮೂರು ವರ್ಷ ಜೈಲುವಾಸ, ನಿಜವಾಗಿಯೂ? ಆರ್‌ಟಿಸಿ ಇದೇ ನಿಯಮ ಮುಂದುವರಿಸಿದರೆ ಜನ ಖಾಸಗಿ ಬಸ್‌ಗಳ ಮೊರೆ ಹೋಗುತ್ತಾರೆ’ಎಂದು ಹೇಳಿದ್ದಾರೆ. ಅವರು ಪ್ರತಿದಿನ NWKRTC ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ.

“ಭಾರತೀಯ ದಂಡ ಸಂಹಿತೆಯ ಸೆಕ್ಷನ್ 21 ರ ಅಡಿಯಲ್ಲಿ, ಸುಪ್ರೀಂ ಕೋರ್ಟ್ NWKRTC ಚಾಲಕರು ಮತ್ತು ಕಂಡಕ್ಟರ್‌ಗಳನ್ನು ಸಾರ್ವಜನಿಕ ಸೇವಕರು ಎಂದು ಗುರುತಿಸಿದೆ. ಆದ್ದರಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ಚಾಲಕ ಅಥವಾ ಕಂಡಕ್ಟರ್ ಕರ್ತವ್ಯ ನಿರ್ವಹಿಸದಂತೆ ಹಲ್ಲೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸೆಕ್ಷನ್ 332 ಮತ್ತು 353 ರ ಅಡಿಯಲ್ಲಿ, ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಐಪಿಸಿಯ ಸೆಕ್ಷನ್ 186 ರ ಅಡಿಯಲ್ಲಿ, ಅನುಸರಿಸದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬಹುದು, ”ಎಂದು ಕನ್ನಡದಲ್ಲಿ ಕೊಟ್ಟ ವಿವರಣೆಯಲ್ಲಿ ತಿಳಿಸಲಾಗಿದೆ.

Bengaluru; ಬೇಡಿಕೆಗೆ ಮಣಿದ BMRCL, ನಮ್ಮ ಮೆಟ್ರೋ ರಾತ್ರಿ 11ರವರೆಗೆ

ಚಿಲ್ಲರೆಗಾಗಿ ನಡೆಯುವ ಜಗಳ ತಪ್ಪಿಸಲು ಕರ್ನಾಟಕದಾದ್ಯಂತ ವಿವಿಧ RTC ನಗದು ರಹಿತ ಸೇವೆ ಜಾರಿಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಆದರೆ ಇದು ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತದೆ. ಹೀಗಿರುವಾಗ ಸಾರ್ವಜನಿಕರು ಸೂಕ್ತ ಚಿಲ್ಲರೆ ನೀಡಿ ಸಹಕರಿಸುವಂತೆ ಸಿಬ್ಬಂದಿ ಕೋರಬಹುದು ಎಂದು ಹುಬ್ಬಳ್ಳಿಯ ಎನ್‌ಡಬ್ಲ್ಯುಕೆಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಬೋರ್ಡ್‌ಗಳನ್ನು ಆದಷ್ಟು ಬೇಗ ತೆಗೆದುಹಾಕಲಾಗುವುದು ಎಂದು ಅವರು ಹೇಳಿದ್ದಾರೆ. 

ಮಲೆನಾಡಿನಲ್ಲಿ ಸಹಕಾರ ಸಾರಿಗೆ ಬಸ್ ನಿಂತು 3 ವರ್ಷ, ಬೇಕು ಸಹಕಾರ

ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಯ  ಸಹಕಾರ ಸಾರಿಗೆ (Public Transport) ಕೇವಲ ನಾಲ್ಕು ಚಕ್ರದ ಬಸ್ಸಲ್ಲ,  ಮಲೆನಾಡಿಗರ ಪಾಲಿನ ರಥ. ಮಕ್ಕಳನ್ನ ಶಾಲೆಗೆ, ವೃದ್ಧರನ್ನ ಆಸ್ಪತ್ರೆಗೆ ಸೇರಿದಂತೆ ಲಕ್ಷಾಂತರ ಜನರನ್ನ ಸಮಯಕ್ಕೆ ಸರಿಯಾಗಿ ಮುಟ್ಟಬೇಕಾದ ಜಾಗ ಮುಟ್ಟಿಸಿದ ಸಮಯ ಸಾಧಕ.

ಜೊತೆಗೆ, ಏಷ್ಯಾ (Asia) ಖಂಡದಲ್ಲೇ ಹಲವು ಮೊದಲುಗಳಿಗೆ ಸಾಕ್ಷಿಯಾದ ಕಾರ್ಮಿಕರ ಬೆವರಿನ ಸಂಸ್ಥೆ. ಆದರೆ, ಇಂತಹಾ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಅಸಹಕಾರ ಸಿಕ್ಕಿದ್ದರಿಂದ ಬೀಗ ಹಾಕಿ (Shut Down) 3 ವರ್ಷಗಳೇ ಕಳೆದಿದೆ. ಸಂಸ್ಥೆಯನ್ನ ಭೋಗ್ಯಕ್ಕೆ ಅಥವ ಮಾರಾಟಕ್ಕೆ ಕಾರ್ಮಿಕರು ಚಿಂತಿಸಿದ್ದರೂ ಕೊಂಡುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ.ಇದು ಕಾರ್ಮಿಕರಿಗೆ ಚಿಂತೆ ಗೆ ಮತ್ತಷ್ಟು ಕಾರಣವಾಗಿದೆ. 

ಈ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗಾದ  (Shivamogga) ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನ ನೋಡಿವೆ. ಕಾರ್ಮಿಕರ ಬೆವರಲ್ಲಿ ಜನ್ಮ ತಾಳಿದ ಈ ಸಂಸ್ಥೆ ಮಲೆನಾಡ ಕುಗ್ರಾಮಗಳ ಮನೆ-ಮನಗಳಲ್ಲಿ ಬೆಸೆದ ಕೊಂಡಿಯ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತ್ತು. 

ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್‌ನಿಂದ 76 ಬಸ್‌ಗೆ ತಂದಿದ್ದರು. ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ. (KSRTC) ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ಗಾದೆಯೂ ಜನ್ಮ ತಾಳಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಷ್ಟು ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಕಾರ್ಮಿಕರ ಸಂಸ್ಥೆಯದ್ದು.

ಅಂತಹಾ ಸಂಸ್ಥೆ ಸರ್ಕಾರದ ರೀತಿ-ನೀತಿ-ರಿವಾಜುಗಳಿಂದ ಕಾರ್ಮಿಕರಿಗೆ ಸಂಬಳ (Salary) ಕೊಡಲಾಗದೆ ಕಳೆದ ಮೂರು ವರ್ಷಗಳಿಂದ ಬೀಗ ಹಾಕಿದೆ. . ಇದರಿಂದ ಕಾರ್ಮಿಕರ ಜೀವನ ನಡೆಸುವುದೇ ದುಸ್ಥಿರವಾದ್ರೆ ಡಿಪೋದಲ್ಲಿ ನಿಂತಲ್ಲೇ ನಿಂತಿರುವ ಬಸ್ ಗಳು ತುಕ್ಕು ಹಿಡಿಯುತ್ತಿವೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

click me!