
ಬೆಂಗಳೂರು (ಫೆ.19): ಸಾಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲೆಗಳ ಪ್ರವೇಶದ್ವಾರದಲ್ಲಿರುವ ಘೋಷವಾಕ್ಯ ಬದಲಾವಣೆ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೊದಲು ಶಾಲೆಗಳ ಪ್ರವೇಶದ್ವಾರದಲ್ಲಿದ್ದ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ" ಘೋಷವಾಕ್ಯ. ಇದೀಗ ಈ ಘೋಷವಾಕ್ಯ ಬದಲು 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು' ಎಂದು ಬದಲಾವಣೆ ಮಾಡಲಾಗಿದೆ.
ಘೋಷವಾಕ್ಯ ಬದಲಾವಣೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶವಿಲ್ಲ. ಆದೇಶ ನೀಡಿದರೆ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದೆಂದುದ ಆದೇಶವಿಲ್ಲದೆ ಕೇವಲ ಮೌಖಿಕವಾಗಿ ಸೂಚನೆ ನೀಡಿರುವ ಹಿನ್ನೆಲೆ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಸೂಚನೆ ಮೇರೆಗೆ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ತುಮಕೂರು : ಮಾದರಿ ಶಾಲೆಗಳ ಮಾರ್ಗದರ್ಶಿ: 5 ಶಾಲೆಗಳು ಆಯ್ಕೆ
ಘೊಷವಾಕ್ಯ ಬದಲಾವಣೆ ಒಂದು ತಿಂಗಳ ಹಿಂದೆಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದೇಶ ಮಾಡಿದರೆ ವಿವಾದಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿ ಎಲ್ಲ ಶಾಲೆಗಳಿಗೆ ಮೌಖಿಕ ಸಂದೇಶ ನೀಡಲಾಗಿದೆ. ಈ ವಿಚಾರ ಸಚಿವರ ಗಮನಕ್ಕೆ ಇತ್ತಾ ಇಲ್ವಾ ಎಂಬುದೇ ಪ್ರಶ್ನೆಯಾಗಿದೆ. ಸಚಿವ ಮಹದೇವಪ್ಪ ಅವರ ಗಮನಕ್ಕೆ ಇಂದು ಅಧಿಕಾರಿಗಳು ತಂದಿದ್ದಾರೆ ಎಂಬ ಮಾಹಿತಿ ಇದೆ.
ಈಗಾಗಲೇ ಬಹುತೇಕ ಶಾಲೆಗಳು ಘೊಷವಾಕ್ಯ ಬದಲು ಮಾಡಿವೆ. ಶಿವಮೊಗ್ಗ ಸೇರಿ ಕೆಲವಡೆ ಯಾವುದೇ ಆದೇಶ ಹೊರಡಿಸದ ಕಾರಣ ಘೋಷವಾಕ್ಯ ಬದಲಾವಣೆ ಮಾಡಲು ಮುಂದಾಗಿಲ್ಲ. ಇನ್ನು ಈ ಬದಲಾವಣೆ ವಿಚಾರಕ್ಕೆ ವಿರೋಧಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿವೆ.
ಕುವೆಂಪು ರಚನೆಯನ್ನೇ ಬದಲಿಸಿದ್ದಾರೆ: ಕೋಟಾ ಶ್ರೀನಿವಾಸ ಖಂಡನೆ
ಶಾಲೆಯ ಪ್ರವೇಶದ್ವಾರಗಳಲ್ಲಿ 'ದೇವಾಲಯವಿದು ಕೈಮುಗಿದು ಬನ್ನಿ' ಬದಲಿಸಿ 'ಪ್ರಶ್ನಿಸಿ' ಹೊಸ ಹೆಸರು ಕೊಟ್ಟಿದ್ದಾರೆ. ಕೈಮುಗಿದುಕ ಅನ್ನೋ ಶಬ್ದ ಹಿಂದೂಗಳಿಗೆ ಕೈಮುಗಿದು ಅನ್ನೋ ರೀತಿ ಅರ್ಥಮಾಡಿಕೊಂಡಿದ್ದಾ? ಹೀಗೆ ಬದಲಾವಣೆ ಮಾಡಿರೋದು ವಿಕೃತಕಾರಿ ಮನಸ್ಸು ಇದನ್ನು ನಾನು ಖಂಡಿಸುತ್ತೇನೆ. ಸದನದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿಕೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ