ಕಳೆದ ವರ್ಷಕ್ಕಿಂತ ಈ ಬಾರಿ ಬೆಂಗಳೂರು ತಾಪಮಾನ ಹೆಚ್ಚಳ; ವೈದ್ಯರು ಕೊಟ್ಟ ಎಚ್ಚರಿಕೆ ಏನು?

By Ravi JanekalFirst Published Feb 19, 2024, 10:31 AM IST
Highlights

ಸಿಲಿಕಾನ್ ಸಿಟಿ ಬೆಂಗಳೂರು ಜನರು ಈ ಬಾರಿ ಫೆಬ್ರವರಿ ತಿಂಗಳ ಚಳಿಗಾಲ ಮುಗಿಯುವ ಮೊದಲೇ ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ ನೆತ್ತಿ ಚುರ್ರ ಎನಿಸುವಷ್ಟು ಪ್ರಖರ ಬಿಸಿಲು. ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ.

ಬೆಂಗಳೂರು (ಫೆ.19): ಸಿಲಿಕಾನ್ ಸಿಟಿ ಬೆಂಗಳೂರು ಜನರು ಈ ಬಾರಿ ಫೆಬ್ರವರಿ ತಿಂಗಳ ಚಳಿಗಾಲ ಮುಗಿಯುವ ಮೊದಲೇ ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ ನೆತ್ತಿ ಚುರ್ರ ಎನಿಸುವಷ್ಟು ಪ್ರಖರ ಬಿಸಿಲು. ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ.

 

ಕಾಡ್ಗಿಚ್ಚು ತಡೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 2000ಕಿಮೀ ಫೈರ್‌ಲೈನ್! ಏನಿದು ಅಗ್ನಿರೇಖೆ?

ಇಷ್ಟು ದಿನ ಚಳಿಯಿಂದ ನಡುಗುತ್ತಿದ್ದ ಬೆಂಗಳೂರಿನ ಜನ, ಇದೀಗ ಬಿಸಿಲಿನ ಝಳಕ್ಕೆ ಬೆವತು ಎಳನೀರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫೆಬ್ರವರಿ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ವೇಳೆ ಗರಿಷ್ಠ ಉಷ್ಠಾಂಶ 30 ಡಿಗ್ರಿ ಸೆಲ್ಸಿಯೆಸ್ ಹಾಗೂ ಕನಿಷ್ಠ ಉಷ್ಠಾಂಶ 19 ಡಿ.ಸೆ. ದಾಖಲಾಗಿತ್ತು. ಸಾಮಾನ್ಯವಾಗಿ ಶಿವರಾತ್ರಿ ಕಳೆಯುವವರೆಗೆ ರಾಜ್ಯದಲ್ಲಿ ಚಳಿಗಾಲ ಇರುತ್ತದೆ. ಆದರೆ ಈ ವರ್ಷ ಚಳಿಗಾಲ ಮುಗಿಯುವ ಮೊದಲೇ ಬೇಸಗೆ ಬಿಸಿಲು ಹೆಚ್ಚಾಗಿದೆ. ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಆಗುತ್ತಿದ್ದ ಬಿಸಿಲು ಈಗಲೇ ಹೆಚ್ಚಾಗಿದೆ. ಕಳೆದ 10 ದಿನಗಳಿಂದ ಸತತವಾಗಿ ಉಷ್ಣತೆ ಏರಿಕೆಯಾಗುತ್ತಿದೆ. ಇದರಿಂದದ ಜನರು ಬಿಸಿಲಿನ ಝಳಕ್ಕೆ ಪರದಾಡುತ್ತಿದ್ದಾರೆ.

ನೆತ್ತಿ ಸುಡುತ್ತಿದೆ ಬಿಸಿಲು!

ಫೆಬ್ರವರಿ 14   -   31.2 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
ಫೆಬ್ರವರಿ 15     - 31.4 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
ಫೆಬ್ರವರಿ 16     - 30 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
ಫೆಬ್ರವರಿ 17   ‌‌‌‌-    32 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌
ಫೆಬ್ರವರಿ 18  -    32.6 ಡಿಗ್ರಿ ಸೆಲ್ಸಿಯೆಸ್ ತಾಪಮಾನ‌

ಬಿಸಲು ಏರಿಕೆಗೆ ಕಾರಣ

1. ಮಳೆ ಮತ್ತು ಚಳಿಯ ಪ್ರಮಾಣ ಕಡಿಮೆ ಇದ್ದು, ತಾಪಮಾನ ಹೆಚ್ಚಿದೆ
2. ವಾಹನಗಳ ಸಂಖ್ಯೆಯಲ್ಲಿಏರಿಕೆ. ಸಮತೋಲನಕ್ಕೆ ಬೇಕಾದ ಮರಗಳ ಪ್ರಮಾಣದಲ್ಲಿಇಳಿಕೆ
3. ನಿರಂತರ ಅರಣ್ಯ ನಾಶದಿಂದ ಭೂಮಿಯಲ್ಲಿ ತೇವಾಂಶದ ಕೊರತೆ.
4.  ವಾತಾವರಣದಲ್ಲಿ ತೇವಾಂಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವುದು

 

ಬೇಸಗೆ ಬಿಸಿಲು ಧಗೆ ಹೆಚ್ಚಾದಂತೆ ಬಿಯರ್ ಗೆ ಫುಲ್ ಡಿಮ್ಯಾಂಡ್! ದರ ಏರಿಕೆ ನಡುವೆ ಮುಗಿಬಿದ್ದು ಖರೀದಿಸುತ್ತಿರುವ ಮದ್ಯಪ್ರಿಯರು!

ವೈದ್ಯರಿಂದ ಎಚ್ಚರಿಕೆ ಸಂದೇಶ:

ಹೆಚ್ಚಿನ ತಾಪಮಾನದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಹೀಗಾಗಿ ಬಿಸಿಲಿಗೆ ಓಡಾಟ ಕಡಿಮೆ ಮಾಡಿ ಎಂದು  ಎಚ್ಚರಿಕೆ ಕೊಡುತ್ತಿರುವ ವೈದ್ಯರು. ಬಿಸಿಲ ಝಳ ಹೆಚ್ಚಿರುವುದರಿಂದ ದೇಹದಲ್ಲಿನ ನೀರಿನಂಶ ಸಾಕಷ್ಟು ಕಡಿಮೆಯಾಗುತ್ತದೆ. ಹೀಗಾಗಿ ಬೇಸಗೆಯಲ್ಲಿ ತಂಪಾಗಿರಲು ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಕುಡಿಯದಿದ್ದರೆ ಉರಿ ಮೂತ್ರದ ಸಮಸ್ಯೆ, ಜತೆಗೆ ಕಿಡ್ನಿ ಸ್ಟೋನ್ ಸಮಸ್ಯೆ ಉಲ್ಬಣಿಸೋ‌ ಸಾಧ್ಯತೆ. ಈ ಸಮಯದಲ್ಲಿ ಅಲರ್ಜಿ ಕೂಡ ಹೆಚ್ಚಾಗಿ ಜನರನ್ನು ಕಾಡುತ್ತದೆ‌ ಎಚ್ಚರ ಅಂತಾರೆ ತಜ್ಞರು. ಬಿಸಿಲ ಬೇಗೆಯಿಂದ ಪಾರಾಗಲು ಜನ ತಂಪು ಪಾನೀಯ, ಮಜ್ಜಿಗೆ, ಎಳನೀರು, ಹಣ್ಣು, ಜ್ಯೂಸ್ ಕುಡಿಯುವುದು ಒಳ್ಳೆಯದು. ಜನರು ಈಗಾಗಲೇ. ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳುವುದಕ್ಕಾಗಿ ಛತ್ರಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನು ಮಾರ್ಚ್ ವೇಳೆಗೆ ಸಿಲಿಕಾನ್ ಸಿಟಿ ಮಂದಿಗೆ ಬಿಸಿಲಿಗೆ ಅಕ್ಷರಶಃ ಕುದ್ದು ಹೋಗಲಿದ್ದಾರೆ.

click me!