Karnataka Budget: ಎಸ್ಸಿ, ಎಸ್ಟಿಗೆ ಸೂಕ್ತ ಅನುದಾನ ಕೊಡದಿದ್ದರೆ ಹೋರಾಟ: ಸಿದ್ದು

By Kannadaprabha News  |  First Published Mar 1, 2022, 5:48 AM IST

*  ಬಜೆಟ್‌ಗೂ ಮುನ್ನ ಸಿಎಂಗೆ ವಿಪಕ್ಷ ನಾಯಕ ಪತ್ರ
*  ವರ್ಷದಿಂದ ವರ್ಷಕ್ಕೆ ಅನುದಾನ ಕಡಿಮೆ
*  ಅನ್ಯಾಯ ಪುನರಾವರ್ತನೆಯಾದರೆ ಹೋರಾಟ ನಡೆಸಲಾಗುವುದು 


ಬೆಂಗಳೂರು(ಮಾ.01):  ಬಜೆಟ್‌ನಲ್ಲಿ(Budget) ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ(SC, ST) ಜನರ ಕಲ್ಯಾಣಕ್ಕೆ ನ್ಯಾಯಯುತ ಅನುದಾನ(Grants) ಒದಗಿಸದೆ ನಿರ್ಲಕ್ಷಿಸಿದರೆ ಸರ್ಕಾರದ ವಿರುದ್ಧ ತೀವ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಪತ್ರ ಬರೆದಿರುವ ಅವರು, 2011ರ ಜನಗಣತಿಯಂತೆ ಶೇ.24.1ರಷ್ಟುಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ರಾಜ್ಯದಲ್ಲಿದ್ದಾರೆ. ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟಿರುವ ಈ ದಮನಿತರ ಕಲ್ಯಾಣಕ್ಕಾಗಿ 2013ರಲ್ಲಿ ನಮ್ಮ ಸರ್ಕಾರ ಇದ್ದಾಗ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ (SCP) ಮತ್ತು ಬುಡಕಟ್ಟು ಉಪ ಹಂಚಿಕೆಯ (TSP) 2013 ನಿಯಮಗಳನ್ನು ಜಾರಿಗೆ ತಂದೆವು. ಜನಸಂಖ್ಯೆಗೆ ಅಗನುಗುಣವಾಗಿ ಅನುದಾನವನ್ನು ಒದಗಿಸಿ, ಅದೇ ವರ್ಷ ಖರ್ಚು ಮಾಡುವ ಶಾಸನಬದ್ಧ ಅನಿವಾರ್ಯತೆಯನ್ನು ಈ ಕಾನೂನಿನ ಮೂಲಕ ರೂಪಿಸಿದೆವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ವರ್ಗಗಳ ಕಲ್ಯಾಣಕ್ಕೆ ವಿವಿಧ ಇಲಾಖೆಗಳಿಗೆ ನೀಡುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Latest Videos

undefined

Mekedatu Padayatra: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಕಾಮಗಾರಿಗಳ ಗುತ್ತಿಗೆಗಳಲ್ಲಿ 50 ಲಕ್ಷ ರು.ವರೆಗೆ ಕಾಮಗಾರಿಗಳಿಗೆ ಮೀಸಲಾತಿಯನ್ನು ಜಾರಿಗೆ ತಂದಿದ್ದೆವು. ಆದರೆ ಬಿಜೆಪಿ ಸರ್ಕಾರ ಕುತಂತ್ರ ಮಾಡಿ 2 ಕೋಟಿ ರು.ವರೆಗೆ ಟೆಂಡರನ್ನೇ ಕರೆಯದೆ ಕಾಮಗಾರಿ ನಡೆಸುವ ನಿಯಮ ಮಾಡಿಕೊಂಡಿದೆ. ಇಂತಹ ಅನ್ಯಾಯಗಳು ಪುನರಾವರ್ತನೆಯಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೇಕೆದಾಟು ಕುರಿತು ಸಿದ್ದರಾಮಯ್ಯ ಪುಸ್ತಕ ಲೋಕಾರ್ಪಣೆ: ಪಾದಯಾತ್ರೆ ಬಳಿಕವೂ ಹೋರಾಟ ಎಂದ ಸಿದ್ದು!

ರಾಮನಗರ: ಮೇಕೆದಾಟು ಪಾದಯಾತ್ರೆ ಬಳಿಕವೂ ಹೋರಾಟ: ಬಿಜೆಪಿಯವರು ಮೇಕೆದಾಟು ಯೋಜನೆ (Mekedatu Project) ಬಗ್ಗೆ ಸುಳ್ಳುಗಳನ್ನು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ. ಯೋಜನೆ ಜಾರಿಗೆ ಪ್ರಸ್ತುತ ಯಾವುದೇ ಅಡ್ಡಿ ಇಲ್ಲ. ಹೀಗಿದ್ದರೂ ಬಿಜೆಪಿ ಸರ್ಕಾರ (BJP Government) ವಿಳಂಬ ಮಾಡಿದರೆ ಪಾದಯಾತ್ರೆ ಬಳಿಕವೂ ಹೋರಾಟ ಮುಂದುವರೆಯಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. 

Karnataka News: SDPI ಬ್ಯಾನ್ ಮಾಡೋದಾದ್ರೆ ಮಾಡಿ, ನಾವು ಬೇಡ ಅಂದಿದ್ದೇವಾ.? ಸಿದ್ದರಾಮಯ್ಯ

ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗಲೇ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ದೊರಕಿಸಿಕೊಡದೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದ ಜನತೆಗೆ ವಿಳಂಬ ದ್ರೋಹ ಎಸಗಿವೆ ಎಂದು ದೂರಿದ್ದರು. 

ಯೋಜನೆಗೆ ಯಾವುದೇ ಅಡ್ಡಿ ಇಲ್ಲ. ಯೋಜನೆಯಿಂದ 400ಕ್ಕೂ ಹೆಚ್ಚು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ ಆಗಲಿದೆ. ಅಲ್ಲದೆ ಮುಂದಿನ 50 ವರ್ಷ ಬೆಂಗಳೂರು ನಗರ ವಾಸಿಗಳಿಗೆ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ನೀರು ಪೂರೈಕೆಯಾಗಲಿದೆ. ಹೀಗಿದ್ದರೂ ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಯೋಜನೆ ಬಗ್ಗೆ ಹೇಳುವುದು ನೂರಕ್ಕೆ ನೂರರಷ್ಟು ಸುಳ್ಳು. 
2018ರಲ್ಲಿ ಕಾವೇರಿ ವಿವಾದದ ಬಗ್ಗೆ ಅಂತಿಮ ತೀರ್ಪು ಬಂದಿದೆ. ನಾವು ಅದಕ್ಕೂ ಮೊದಲೇ ಡಿಪಿಆರ್‌ ಸಿದ್ಧಪಡಿಸಿ ನೀಡಿದ್ದೇವೆ. ತಮಿಳುನಾಡು ಸರ್ಕಾರ ಡಿಪಿಆರ್‌ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರೂ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಯೋಜನೆ ಜಾರಿಗೆ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ. ಪರಿಸರ ಇಲಾಖೆ ಅನುಮತಿ ನೀಡುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಹೇಳಿದ್ದರು. 
 

click me!