* ಸರಿಯಾಗಿ ನೀರು, ಆಹಾರ ಸಿಗುತ್ತಿಲ್ಲ
* ಬಂಕರ್, ಮೆಟ್ರೋ ನಿಲ್ದಾಣದಲ್ಲಿ ಸಿಲುಕಿ ನೆಗಡಿ, ಜ್ವರದಂತಹ ಅನಾರೋಗ್ಯದ ಸಮಸ್ಯೆ
* ಖಾರ್ಕೀವ್‌ನಲ್ಲಿ ಅತಂತ್ರರಾಗಿರುವ ಕರ್ನಾಟದಕ ವೈದ್ಯ ವಿದ್ಯಾರ್ಥಿಗಳ ಗೋಳಾಟ
ಅಥಣಿ/ಮಹಾಲಿಂಗಪುರ(ಮಾ.01): ಯುದ್ಧಪೀಡಿತ ಉಕ್ರೇನ್‌ನ(Ukraine) ಖಾರ್ಕೀವ್ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗ ವಿದ್ಯಾರ್ಥಿಗಳು(Students) ಇದೀಗ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಆಹಾರ, ನೀರಿನ ಕೊರತೆ ನಡುವೆ ಅನಾರೋಗ್ಯದIillness) ಸಮಸ್ಯೆಯೂ ವಿದ್ಯಾರ್ಥಿಗಳನ್ನು ಕಾಡಲು ಶುರುವಾಗಿದೆ. ಕಳೆದ ಕೆಲ ದಿನಗಳಿಂದ ಬಂಕರ್, ಮೆಟ್ರೋ ನಿಲ್ದಾಣಗಳಲ್ಲೇ ದಿನ ಕಳೆಯುತ್ತಿರುವ ಕೆಲವರಲ್ಲಿ ಶೀತ-ಜ್ವರದಂಥ ಸಾಂಕ್ರಾಮಿಕ ರೋಗಗಳೂ(Infectious Disease) ಬಾಧಿಸುತ್ತಿರುವುದು ಆತಂಕ ಮೂಡಿಸಿದೆ.
‘ನಾವೆಲ್ಲ ಖಾರ್ಕೀವ್ ನಗರದ ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ನಲ್ಲಿ ರಕ್ಷಣೆ ಪಡೆದಿದ್ದೇವೆ. ಇಲ್ಲಿ 350 ಕನ್ನಡಿಗರು(Kannadigas) ಸೇರಿ ಭಾರತೀಯ(India) ಮೂಲದ 4 ಸಾವಿರ ಜನರಿದ್ದೇವೆ. ಆಹಾರ, ನೀರಿನ ಕೊರತೆಯೊಂದಿಗೆ ಎಲ್ಲರೂ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ಬೆಳಗಾವಿ(Belagavi) ಜಿಲ್ಲೆಯ ಅಥಣಿ ತಾಲೂಕಿನ ರಕ್ಷಿತ್ ಗಣಿ ಮತ್ತು ಐವರು ಕನ್ನಡಿಗ ಸಹಪಾಠಿಗಳು ಅವಲತ್ತುಕೊಂಡಿದ್ದಾರೆ.
News Hour : ಮುಗಿಯದ ಯುದ್ಧ.. ಬಂಕರ್‌ಗಳಲ್ಲಿ ಕನ್ನಡಿಗರ ಪರದಾಟ
ಖಾರ್ಕೀವ್‌ನ ರಾಷ್ಟ್ರೀಯ ವೈದ್ಯಕೀಯ ವಿವಿಯಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ಗೆ ಸ್ಥಳಾಂತರಿಸಲಾಗಿದೆ. ಖಾರ್ಕಿವ್ ನಗರದಲ್ಲಿ ಉಕ್ರೇನ್ ಮತ್ತು ರಷ್ಯಾ ಯೋಧರ ನಡುವೆ ತೀವ್ರ ಕಾದಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಭೀಕರ ಬಾಂಬ್(Bomb), ಶೆಲ್ ದಾಳಿ ನಡೆಯುತ್ತಿದೆ. ಇದರಿಂದ ವ್ಯಾಪಿಸಿದ ಮಾಲಿನ್ಯದಿಂದಾಗಿ ಇಕ್ಕಟ್ಟಿನ ಬೇಸ್‌ಮೆಂಟ್‌ನಲ್ಲಿರುವ ವಿದ್ಯಾರ್ಥಿಗಳಲ್ಲಿ ಅನೇಕರಲ್ಲಿ ಕೆಮ್ಮು, ತಲೆನೋವು, ಅಲರ್ಜಿಯಂಥ ಸಮಸ್ಯೆ ಶುರುವಾಗಿದೆ. ಇದರ ಜತೆಗೆ ಕುರಿಮುಂದೆಯಂತೆ ಒಂದೇ ಕಡೆ ಜನ ಸೇರಿರುವ ಹಿನ್ನೆಲೆಯಲ್ಲಿ ಜ್ವರದಂಥ ಸಾಂಕ್ರಾಮಿಕ ರೋಗಗಳೂ ಕಾಡಲು ಶುರುವಾಗಿದೆ. ಚಿಕಿತ್ಸೆ ಪಡೆಯೋಣವೆಂದರೆ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಬಹುತೇಕ ಎಲ್ಲ ಮೆಡಿಕಲ್ಗಳು ಬಂದ್ ಆಗಿರುವುದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಈವರೆಗೆ ನಮಗೆ ಭಾರತೀಯ ರಾಯಭಾರಿ ಕಚೇರಿಯಿಂದ(Indian Embassy) ರಕ್ಷಣೆಗೆ ಸಂಬಂಧಿಸಿ ಯಾವುದೇ ಸಂದೇಶ ಬಂದಿಲ್ಲ. ಯಾರನ್ನೂ ಸಂಪರ್ಕಿಸಲು ಸಾಧ್ಯವೂ ಆಗುತ್ತಿಲ್ಲ. ಆದರೆ, ಸರ್ಕಾರ ನಮ್ಮ ನೆರವಿಗೆ ಧಾವಿಸಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇವೆ. ನಾವಿರುವ ಪ್ರದೇಶದ ಸುತ್ತಮುತ್ತಲೂ ನಿರಂತರವಾಗಿ ಮದ್ದು, ಗುಂಡು ಹಾಗೂ ಬಾಂಬ್‌ಗಳ ಸುರಿಮಳೆಯಾಗುತ್ತಿವೆ. ಕ್ಷಣಕ್ಷಣಕ್ಕೂ ಎದೆನಡುಗಿಸುವ ಭಯಾನಕ ಸ್ಫೋಟದ ಸದ್ದು ಕೇಳಿಬರುತ್ತಿದೆ. ಟ್ಯಾಂಕರ್‌ಗಳು, ಯುದ್ಧ ವಿಮಾನಗಳು, ಸೈರನ್ ಶಬ್ದಕ್ಕೆ ಬೆಚ್ಚಿಬೀಳುವಂತಾಗಿದೆ. ನಮಗೆ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ದಯವಿಟ್ಟು ನಮ್ಮನ್ನು ಶೀಘ್ರವೇ ಇಲ್ಲಿಂದ ರಕ್ಷಿಸಿ, ಕರೆದೊಯ್ಯಲು ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಉಕ್ರೇನ್ ಪೊಲೀಸರಿಂದ ಭಾರತೀಯರಿಗೆ ಕಿರುಕುಳ
ಕೀವ್: ಯುದ್ಧಪೀಡಿತ ಉಕ್ರೇನ್‌ನಿಂದ ಪಾರಾಗಲು ಪೋಲೆಂಡ್ ಗಡಿಗೆ ತೆರಳುತ್ತಿದ್ದಾಗ ಉಕ್ರೇನ್ ಪೊಲೀಸರು ತಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ಹಲವು ಭಾರತೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪೊಲೀಸರು(Police) ನಮ್ಮ ಮೇಲೆ ಮೆಣಸಿನ ಪುಡಿ ಎರಚಿದ್ದಾರೆ. ಅವರ ದಾಳಿಯಿಂದ ನಮ್ಮಲ್ಲಿ ಅನೇಕರು ಮೂರ್ಛೆ ಹೋಗಿದ್ದಾರೆ. ಸಹಾಯಕ್ಕಾಗಿ ಸ್ಲೊವೇಕಿಯಾದ ರಾಯಭಾರ ಕಚೇರಿ ಸಂಪರ್ಕಿಸಿದ್ದೇವೆ. ಯಾವುದೇ ಸಹಾಯವಾಣಿಗಳು ಕೆಲಸ ಮಾಡುತ್ತಿಲ್ಲ ಎಂದು ಮಾಳವಿಕಾ ಎಂಬ ವಿದ್ಯಾರ್ಥಿನಿ ಹೇಳಿದ್ದಾರೆ.
Russia Ukraine Crisis: ಉಕ್ರೇನ್‌ಗೆ ಶಸ್ತ್ರಾಸ್ತ್ರ ನೆರವಿನ ಮಳೆ!
ಕರ್ನಾಟಕದ 13 ಮಂದಿ ವಾಪಸ್:
ಬೆಂಗಳೂರು: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಆಪರೇಷನ್ ಗಂಗಾ’ ಏರ್‌ಲಿಫ್ಟ್‌ನಲ್ಲಿ ಸೋಮವಾರ ಕರ್ನಾಟಕ ಮೂಲದ 13 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ. ಇದರೊಂದಿಗೆ ಈವರೆಗೆ ರಾಜ್ಯದ 44 ವಿದ್ಯಾರ್ಥಿಗಳು ಸುರಕ್ಷಿತವಾಗಿ ಆಗಮಿಸಿದಂತಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವುದಾಗಿ 451 ಕನ್ನಡಿಗರು ಈವರೆಗೆ ನೋಂದಣಿ ಮಾಡಿಸಿದ್ದಾರೆ. ಹೀಗಾಗಿ ಇನ್ನೂ 407 ಕನ್ನಡಿಗರು ಅಲ್ಲೇ ಉಳಿದಂತಾಗಿದೆ.
ನಾವೆಲ್ಲ ಖಾರ್ಕೀವ್ ನಗರದ ಅಂಡರ್‌ಗ್ರೌಂಡ್ ಮೆಟ್ರೋ ಸ್ಟೇಷನ್‌ನಲ್ಲಿ ರಕ್ಷಣೆ ಪಡೆದಿದ್ದೇವೆ. ಇಲ್ಲಿ 350 ಕನ್ನಡಿಗರು ಸೇರಿ 4 ಸಾವಿರ ಭಾರತೀಯರಿದ್ದೇವೆ. ಆಹಾರ, ನೀರಿನ ಕೊರತೆಯೊಂದಿಗೆ ಎಲ್ಲರೂ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದೇವೆ ಅಂತ ಬೆಳಗಾವಿಯ ಅಥಣಿ ಮೂಲದ ವಿದ್ಯಾರ್ಥಿ ರಕ್ಷಿತ್ ಗಣಿ ತಿಳಿಸಿದ್ದಾರೆ.