* ಸಿ.ಟಿ.ರವಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು
* ಆಜಾನ್ ವಿವಾದಕ್ಕೆ ಬಿಜೆಪಿಯಿಂದಲೇ ಕುಮ್ಮಕ್ಕು
* ಖುರಾನ್ ಕಾಲದಲ್ಲಿ ಮೈಕ್ ಬಳಸುತ್ತಿದ್ದೀರಾ?
ಹಿರಿಯೂರು(ಏ.06): ಖುರಾನ್(Quran) ಕಾಲದಲ್ಲಿ ಮೈಕ್ ಇತ್ತಾ ಎಂದು ಪ್ರಶ್ನಿಸೋದು ಸರಿಯಲ್ಲ. ಆ ಸಮಯದಲ್ಲಿ ವಿದ್ಯುತ್ ಕೂಡ ಇರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿಕೆಗೆ ತಿರುಗೇಟು ನೀಡಿದರು.
ಖುರಾನ್ ಕಾಲದಲ್ಲಿ ಮೈಕ್ ಬಳಸುತ್ತಿದ್ದೀರಾ? ಎಂಬ ಸಿ.ಟಿ.ರವಿ ಹೇಳಿಕೆ ಕುರಿತು ಹಿರಿಯೂರಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ತಂತ್ರಜ್ಞಾನ ಬೆಳೆದಂತೆ ಹೊಸ ಆವಿಷ್ಕಾರ ಬರುತ್ತವೆ. ಹೀಗಾಗಿ ಖುರಾನ್ ಬರೆಯುವಾಗ ಮೈಕ್ ವ್ಯವಸ್ಥೆ ಇರಲಿಲ್ಲ ಎಂದು ವಾದಿಸೋದು ತಪ್ಪು. ಈಗ ದೇಗುಲ, ಮಸೀದಿ ಎರಡರಲ್ಲೂ ಧ್ವನಿವರ್ಧಕ ಬಳಸುತ್ತಾರೆ. ಅಷ್ಟಕ್ಕೂ ಧ್ವನಿವರ್ಧಕ ಬಳಕೆಯಿಂದ ಜನರಿಗೆ ಏನು ತೊಂದರೆ ಆಗಿದೆ ಎಂದು ಪ್ರಶ್ನಿಸಿದರು.
ಆಜಾನ್ ವಿಚಾರದಲ್ಲಿ ಡಿಕೆ ಶಿವಕುಮಾರ್ ಎಚ್ಚರಿಕೆ ನಡೆ
ಬಿಜೆಪಿಗೆ(BJP) ಸಮಾಜದ ಸಾಮರಸ್ಯಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ. ಬಿಜೆಪಿ ಕುಮ್ಮಕ್ಕಿನಿಂದಲೇ ಹಿಜಾಬ್, ಆಜಾನ್ ವಿವಾದ ಸೃಷ್ಟಿಯಾಗಿದೆ. ಬಿಜೆಪಿಗೆ ಮಾತನಾಡಲು ಜನಪರವಾದ ವಿಷಯಗಳಿಲ್ಲ. ಅಭಿವೃದ್ಧಿ ಮಾಡಿಲ್ಲ, ಬೆಲೆ ಗಗನಕ್ಕೇರಿವೆ, ಪೆಟ್ರೋಲ್, ಡೀಸೆಲ್ ದರ ಕೂಡ ಹೆಚ್ಚಿದೆ. ವಿದ್ಯುತ್, ಜನೌಷಧಿ ದರ ಎಲ್ಲವೂ ಏರಿಕೆ ಆಗಿದೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲೆಂದೇ ಹಿಜಾಬ್(Hijab), ಜಾತ್ರೆಯಲ್ಲಿ ವ್ಯಾಪಾರ ನಿರ್ಬಂಧ, ಹಲಾಲ್(Halal), ಭಗವದ್ಗೀತೆ, ಆಜಾನ್ ವಿವಾದ ಸೃಷ್ಟಿಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮಸೀದಿಗಳಲ್ಲಿ ನಿನ್ನೆ, ಮೊನ್ನೆಯಿಂದ ಅಲ್ಲ, ಹಿಂದಿನಿಂದಲೂ ಆಜಾನ್ ಮೊಳಗಿಸುತ್ತಿದ್ದಾರೆ. ಇದೀಗ ಚುನಾವಣೆಗಾಗಿ(Election) ಬಿಜೆಪಿಯವರು ಆಜಾನ್(Aajan) ವಿವಾದ ಸೃಷ್ಟಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಇಲ್ಲದೆ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಆಗಲ್ಲ. ಕಳೆದೆರಡು ವರ್ಷದಿಂದ ಬಂಡವಾಳ ಹೂಡಿಕೆದಾರರು ಬಂದಿಲ್ಲ. ಇರುವ ಕಂಪನಿಗಳೆಲ್ಲ ಬೇರೆ ರಾಜ್ಯಗಳಿಗೆ ಹೋಗುತ್ತಿವೆ ಎಂದರು.
ಕರ್ನಾಟಕದಲ್ಲಿ ಆಝಾನ್ ಸೌಂಡ್: ಸರ್ಕಾರ ಯಾವುದೇ ಹೊಸ ಅದೇಶ ಹೊರಡಿಸಿಲ್ಲ ಎಂದ ಸಿಎಂ
ಬೆಂಗಳೂರು: ಹಿಜಾಬ್ ಆಯ್ತು , ಹಲಾಲ್ ಆಯ್ತು ಈಗ ಆಝಾನ್ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇದ್ರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ನಮ್ಮ ಸರ್ಕಾರ ಯಾವುದೇ ಹೊಸ ಅದೇಶಗಳನ್ನ ಹೊರಡಿಸಿಲ್ಲ, ಎಲ್ಲಾ ಹಳೆ ಅದೇಶಗಳೇ. ಇವೆಲ್ಲಾ ಹಿಂದಿನಿಂದ ಬಂದಿರುವ ವಿಚಾರಗಳು. ಈಗ ಹೊಸದಾಗಿ ಬಂದಿಲ್ಲ, ಎಲ್ಲಾ ಹಳೆಯ ಆದೇಶಗಳೇ ಆಗಿವೆ ಎಂದು ಸ್ಪಷ್ಟಪಡಿಸಿದ್ದರು.
ಮಸೀದಿ ಧ್ವನಿವರ್ಧಕ ತೆಗೆಸಿ ಎಂದಿದ್ದ ರಾಜ್ ಠಾಕ್ರೆಗೆ ಬಿಗ್ ಶಾಕ್, ಪಕ್ಷಕ್ಕೆ ಭಾರೀ ಹಿನ್ನಡೆ!
ನಿನ್ನೆ(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟಿನ ತೀರ್ಪುಗಳು ಕೂಡ ಹಳೆಯವು. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ. ನಾವು ಎಲ್ಲವುಗಳನ್ನು ಗಮನದಲ್ಲಿರಿಸಿಕೊಂಡು ಯಾವುದೇ ಸಮಾಜ ಆಗಲಿ ಯಾವುದೇ ಸಂಘಟನೆ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ. ಯಾವುದೇ ಭೇದಭಾವವಿಲ್ಲದೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು.
ಆಝಾನ್ ಗೆ ಡೆಸಿಬಲ್ ಪ್ರಮಾಣ ನಿಗದಿ ಮಾಡಿದೆ..
ಆಝಾನ್ ಕುರಿತು ಈಗಾಗಲೇ ಹೈಕೋರ್ಟ್ ಆದೇಶವಿದೆ. ಯಾಕೆ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದೆ...ಆಝಾನ್ ಗೆ ಡೆಸಿಬಲ್ ಪ್ರಮಾಣ ನಿಗದಿಗೊಳಿಸಿದೆ. ಡೆಸಿಬಲ್ ತಪಾಸಣೆ ಮಾಡುವ ಯಂತ್ರ ಖರೀದಿ ಮಾಡುವ ಹಾಗು ಹೈಕೋರ್ಟ್ ಆದೇಶಗಳನ್ನು ಹಂತಹಂತವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ...ಇದು ಒತ್ತಾಯದಿಂದ ಮಾಡುವ ಕೆಲಸವಲ್ಲ..ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿರುವ ಕೆಲಸ ಇದು..ಹಲವಾರು ಸಂಘಟನೆಗಳನ್ನು ಪೊಲೀಸ್ ಠಾಣೆಯಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಈಗಾಗಲೇ ಸಭೆಗಳನ್ನು ಮಾಡಿದ್ದೇವೆ ಮುಂದೆಯೂ ಸಭೆಗಳನ್ನು ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.