
ಕಲಬುರಗಿ (ನ.20): ಪ್ರಿಯಾಂಕ್ ಖರ್ಗೆ ಸಚಿವರಾದ ಬಳಿಕ ಕಲಬುರಗಿಯಲ್ಲಿ ಗೂಂಡಾಗಿರಿ ಪ್ರವೃತ್ತಿ ಹೆಚ್ಚಾಗಿದೆ ಎಂದು ಕಲಬುರಗಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಮೇಲೆ ಖರ್ಗೆ ಬೆಂಬಲಿಗರು ಮಾರಾಣಾಂತಿಕವಾಗಿ ಹಲ್ಲೆ ನಡೆಸಿರುವ ವಿಚಾರ ಸಂಬಂಧ ಇಂದು ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದರು.
ಬಿಜೆಪಿಗರು ಸತ್ಯಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದೋರು ತರ ಆಡ್ತಾರೆ: ಲಕ್ಷ್ಮಣ್ ಸವದಿ
ಚಿತ್ತಾಪುರದಲ್ಲಿ ಬಹಳಷ್ಟು ಅಕ್ರಮ ನಡೆಯುತ್ತಿದೆ ಅದಕ್ಕೆಲ್ಲ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿದೆ. ಕಲಬುರಗಿಯಲ್ಲಿ ದುಷ್ಟಶಕ್ತಿಗಳ ಅಟ್ಟಹಾಸ ಮಿತಿಮೀರಿದೆ. ಪ್ರಜಾಪ್ರಭುತ್ವ ಕಗ್ಗೊಲೆಯಾಗಿ ಗೂಂಡಾ ಪ್ರಭುತ್ವ ಹೆಚ್ಚಾಗಿದೆ. ಅಕ್ರಮ ಮರಳು ಲಾರಿಗಳನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಮಣಿಕಂಠ ಮೇಲೆ ರಾಬರಿ ಕೇಸ್ ಹಾಕಿದ್ದಾರೆ, ಆಸ್ಪತ್ರೆ ಶುಚಿತ್ವದ ಬಗ್ಗೆ ಪ್ರಶ್ನೆ ಮಾಡಿದ್ರೆ ಕರ್ತವ್ಯಕ್ಕೆ ಅಡ್ಡಿ ಆಂತಾ ಮಣಿಕಂಠ ಮೇಲೆ ಕೇಸ್ ಹಾಕುತ್ತಾರೆ. ಹಾಗಾದ್ರೆ ಈ ಜಿಲ್ಲೆಯಲ್ಲಿ ಹೋರಾಟನೇ ಮಾಡಬಾರದಾ? ಪ್ರಿಯಾಂಕ ಖರ್ಗೆ ಅವರದ್ದು ಯಾವ ಸಂವಿಧಾನ ಇದೆ? ಇವರ ಅಕ್ರಮ, ಭ್ರಷ್ಟಾಚಾರ, ಅವ್ಯವಸ್ಥೆ ವಿರುದ್ಧ ಪ್ರಶ್ನಿಸಿದರೆ ಕ್ರಿಮಿನಲ್ ಕೇಸ್ ಹಾಕುತ್ತಾರೆ. ಪುಂಡ ರಾಜಕಾರಣಿಗಳಿಂದ ಹಲ್ಲೆ ಮಾಡಿಸುತ್ತಾರೆಂದರೆ ಊಹಿಸಿ ಇವರು ಎಷ್ಟರ ಮಟ್ಟಿಗೆ ಕ್ರಿಮಿನಲ್ಗಳನ್ನು ಪೋಷಿಸುತ್ತಿದ್ದಾರೆ, ಅಕ್ರಮ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.
ಮುರುಘಾಶ್ರೀ ವಿರುದ್ಧ ಬಂಧನ ವಾರಂಟ್; ಕಳೆದ ವಾರ ಬಿಡುಗಡೆಯಾಗಿರುವ ಶ್ರೀಗಳಿಗೆ ಮತ್ತೆ ಬಂಧನ ಭೀತಿ!
ಮಣಿಕಂಠ ರಾಠೋಡ್ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನ ಶೀಘ್ರ ಬಂಧಿಸಬೇಕು. ಇಲ್ಲದಿದ್ರೆ ಕಲಬುರಗಿ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ