ಒಬ್ಬ ಮಹಿಳೆಯನ್ನು ಒಬ್ಬನೇ ವ್ಯಕ್ತಿ ಹೇಗೆ ರೇಪ್ ಮಾಡಲು ಸಾಧ್ಯವಾಗುತ್ತದೆ. ಒಬ್ಬನೇ ವ್ಯಕ್ತಿಯಾಗಿ ಬ್ರಹಮನಿಂದಲೂ ಮಹಿಳೆಯನ್ನು ರೇಪ್ ಮಾಡುವುದಕ್ಕೆ ಆಗುವುದಿಲ್ಲ.
ಕೊಪ್ಪಳ (ನ.20): ಒಬ್ಬ ಮಹಿಳೆಯನ್ನು ಒಬ್ಬನೇ ವ್ಯಕ್ತಿ ಹೇಗೆ ರೇಪ್ ಮಾಡಲು ಸಾಧ್ಯವಾಗುತ್ತದೆ. ಒಬ್ಬನೇ ವ್ಯಕ್ತಿಯಾಗಿ ಬ್ರಹಮನಿಂದಲೂ ಮಹಿಳೆಯನ್ನು ರೇಪ್ ಮಾಡುವುದಕ್ಕೆ ಆಗುವುದಿಲ್ಲ. ಒಬ್ಬಳನ್ನ ಕಳಸ್ತಿನಿ, ಒಬ್ಬನ್ನ ಕರಕೊಂಡ ಬಾ ರೇಪ್ ಮಾಡ್ಲಿ ನಾನು ನೋಡ್ತಿನಿ, ಇದು ಸಾದ್ಯನಾ..? ಎಂದು ಮಾಜಿ ಶಾಸಕ ಅಮರೇಗೌಡ ಬಯ್ಯಾಪೂರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗ್ರಾಮವೊಂದರ ಮಹಿಳೆ ಮೇಲೆ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡನ ಪರವಾಗಿ ಮಾತನಾಡಿರುವ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಅತ್ಯಾಚಾರ ಆರೋಪಿಯ ರಕ್ಷಣೆಗೆ ಮುಂದಾಗಿದ್ದಾರಾ ಎಂಬ ಅನುಮಾನ ಎದುರಾಗಿದೆ. ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ಅಮೆರೇಗೌಡ ಪಾಟೀಲ್ ಭಯ್ಯಾಪುರ ಅವರು, ಒಬ್ಬರಿಂದ ಹೇಗೆ ರೇಪ್ ಮಾಡಲು ಸಾದ್ಯ ಎಂದು ಸಂತ್ರಸ್ಥೆಯ ಮಾವನಿಗೆ ಪ್ರಶ್ನೆ ಮಾಡಿದ್ದಾರೆ.
ರಾಜ್ಯದ 4 ಲಕ್ಷ ವಿದ್ಯಾರ್ಥಿಗಳಿಗೆ ಶಾಕ್: ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ರದ್ದುಗೊಳಿಸಿದ ಸರ್ಕಾರ
ಒಬ್ಬಳನ್ನ ರೇಪ್ ಮಾಡಲು ನಾಲ್ಕು ಜನ ಬೇಕು. ಒಬ್ಬಳನ್ನ ರೇಪ್ ಒಬ್ಬನಿಂದ ಅಲ್ಲ ಭ್ರಹ್ಮನಿಂದ ಮಾಡಲು ಸಾದ್ಯ ಇಲ್ಲ. ಒಬ್ಬಳನ್ನ ಕಳಸ್ತಿನಿ, ಒಬ್ಬನ್ನ ಕರಕೊಂಡ ಬಾ ರೇಪ್ ಮಾಡ್ಲಿ ನಾನು ನೋಡ್ತಿನಿ, ಇದು ಸಾದ್ಯನಾ..? ರೇಪ್ ಮಾಡಲಿ ಹೇಗೆ ಮಾಡ್ತಾರೆ. ಇದೆಲ್ಲಾ ಸಾಧ್ಯವಿಲ್ಲದ ಮಾತು. ನೀವು ಸುಮ್ಮನೆ ಕೇಸ್ ಮಾಡಿ ಮರ್ಯಾದೆ ಕಳೆದುಕೊಂಡು ಮನೆಗೆ ಹೋಗ್ತಿರಿ. ನೀವು ಯಾವುದೇ ಕೇಸ್ ಮಾಡದೇ ಮನೆಗೆ ಹೋಗಿ ಎನ್ನುವ ಮಾತನ್ನು ನ್ಯಾಯ ಕೇಳಿಕೊಂಡು ಬಂದ ಸಂತ್ರಸ್ತೆ ಹಾಗೂ ಆಕೆಯ ಮಾವನಿಗೆ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಎಂದು ದಿಕ್ಕು ತಪ್ಪಿಸುವ ಕೆಲಸ ಮಾಡಿದಂತೆ ಕಂಡುಬರುತ್ತಿದೆ.
ಸಿಎಂ, ಡಿಸಿಎಂ ಹಿಂಬಾಲಕ ಅನ್ನೋ ಕಾರಣಕ್ಕೆ ರೌಡಿ ಶೀಟರ್‌ಗೂ ಸಿಕ್ಕಿತಾ ರಾಜ್ಯೋತ್ಸವ ಪ್ರಶಸ್ತಿ!
ಅಮರೇಗೌಡ ಭಯ್ಯಾಪೂರ ಬೆಂಬಲಿಗ ಸಂಗನಗೌಡ ಮಾಲಿ ಪಾಟೀಲ್ ಅವರು ಗ್ರಾಮವೊಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಆರೋಪ ತಾವರಗೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣದ ಬಗ್ಗೆ ಕೇಸ್ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ನಾವು ತಾವರಗೇರಾ ಠಾಣೆಗೆ ಹೋಗಿ ದೂರು ನೀಡಿದ್ದೇವೆ. ಈಗ ಕಾಂಗ್ರೆಸ್ ಮುಖಂಡ ತನ್ನ ಪ್ರಭಾವ ಬಳಸಿ ಏನಾದರೂ ತೊಂದರೆ ಮಾಡಬಹುದು ಅಥವಾ ಕೇಸ್ ವಿಚಾರಣೆಯನ್ನು ಮುಚ್ಚಿ ಹಾಕಬಹುದು ಎಂದು ಅತ್ಯಾಚಾರ ಎಸಗಿದರ ವಿರುದ್ದ ನ್ಯಾಯಕ್ಕಾಗಿ ಮಾಜಿ ಶಾಸಕರ ಬಳಿ ಸಹಾಯ ಕೇಳಿದ ಕುಟುಂಬ ಸದಸ್ಯರನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಕೇಳಿಬಂದಿದೆ,