ಸರ್ಕಾರ ಇಸ್ಲಾಮಿಕ್ ಶಕ್ತಿಗಳ ಪರ ನಿಂತರೆ, ಹಿಂದು ಸಮಾಜ ತನ್ನದೇ ದಾರಿ ಹುಡುಕಿಕೊಳ್ಳುತ್ತೆ: ಜಗದೀಶ್ ಕಾರಂತ ಎಚ್ಚರಿಕೆ

By Ravi JanekalFirst Published Oct 4, 2023, 1:36 PM IST
Highlights

ಶಿವಮೊಗ್ಗದಲ್ಲಿ ಇಸ್ಲಾಮಿಕರಣ ನೀತಿ ಶುರುವಾಗಿದೆ. ರಾಗಿ ಗುಡ್ಡದಲ್ಲಿ ಇರುವ ಹಿಂದುಗಳನ್ನು ವಲಸೆ ಹೋಗುವಂತೆ ಮಾಡಿ ಇಡೀ ವಾರ್ಡ್  ಇಸ್ಲಾಮಿಕರಣ ನಡೆಸುವ ಪ್ರಯತ್ನ ನಡೆಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಜಗದೀಶ್ ಕಾರಂತ್ ಗಂಭೀರ ಆರೋಪ ಮಾಡಿದರು.

ಶಿವಮೊಗ್ಗ (ಅ.4): ಶಿವಮೊಗ್ಗದಲ್ಲಿ ಇಸ್ಲಾಮಿಕರಣ ನೀತಿ ಶುರುವಾಗಿದೆ. ರಾಗಿ ಗುಡ್ಡದಲ್ಲಿ ಇರುವ ಹಿಂದುಗಳನ್ನು ವಲಸೆ ಹೋಗುವಂತೆ ಮಾಡಿ ಇಡೀ ವಾರ್ಡ್  ಇಸ್ಲಾಮಿಕರಣ ನಡೆಸುವ ಪ್ರಯತ್ನ ನಡೆಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಜಗದೀಶ್ ಕಾರಂತ್ ಗಂಭೀರ ಆರೋಪ ಮಾಡಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 1982 ರಲ್ಲಿ ಶಿವಮೊಗ್ಗದಲ್ಲಿ ಹಿಂದೂ ಯುವಕನ ಹತ್ಯೆ ಮಾಡಲಾಗಿತ್ತು. ಅಂದಿನ ಘಟನೆ ನಂತರ ಶಿವಮೊಗ್ಗದಲ್ಲಿ ಇಸ್ಲಾಮಿಕರಣದ ಬೆಳವಣಿಗೆ ಶೇಕಡಾ 25ರಷ್ಟು ಹೆಚ್ಚಾಗಿದೆ. ಇದೇ ಇಂದಿನ ಘಟನೆ ಗೆ ಕಾರಣವಾಗಿದೆ. ಸಾವರ್ಕರ್ ಫ್ಲೆಕ್ಸ್ ಕಿತ್ತು ಹಾಕಿದ ಮುಸ್ಲಿಂ ಯುವಕನ ಸೊಕ್ಕು ಎನಿತ್ತು ಅದು ಶಿವಮೊಗ್ಗದಲ್ಲಿ ಇಸ್ಲಾಮಿಕರಣ ನೀತಿ ಶುರುವಾಗಿರುವುದರ ಸೂಚನೆ ಎಂದರು.

Latest Videos

ಉಡುಪಿ ಕಾಲೇಜಿನ ಕೇಸ್ ತನಿಖೆ ಎಲ್ಲಿಗೆ ಬಂತು..?: ಸಣ್ಣ ಘಟನೆ ಎಂದ ಗೃಹಸಚಿವರು ಈಗ ಏನು ಹೇಳ್ತಾರೆ..?

ಇಸ್ಲಾಮಿಕ್ ಶಕ್ತಿಗಳಿಗೆ ಸಿದ್ದರಾಮಯ್ಯ ಸರ್ಕಾರ ಬೆಂಬಲ:

ಶಿವಮೊಗ್ಗದಲ್ಲಿ ನಡೆದ ಗಲಭೆ ಬಗ್ಗೆ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೃಹಮಂತ್ರಿ ಪರಮೇಶ್ವರ್ ತೆಗೆದುಕೊಂಡಿರುವ ನಿರ್ಣಯಗಳು ಸಂಪೂರ್ಣ ಪಕ್ಷಪಾತದಿಂದ ಕೂಡಿದೆ. ಹಿಂದೆ ಶಿವಮೊಗ್ಗ ಹಾಗೂ ಹಾಸನದಲ್ಲಿ ಪಿ ಎಫ್ ಐ ವಿರುದ್ಧ ದಾಖಲಿಸಿದ ಎಲ್ಲಾ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ದೇಶ ವಿಭಜಕ ಇಸ್ಲಾಮಿಕ್ ಶಕ್ತಿಗಳನ್ನು ಬೆಂಬಲಿಸುವ ಕೆಲಸದಲ್ಲಿ ಸಿದ್ದರಾಮಯ್ಯ ಸರ್ಕಾರ ನಿರತವಾಗಿದೆ. ನೀವು ಏನು ಬೇಕಾದರೂ ಮಾಡಬಹುದು ಎಂಬ ಸರ್ಕಾರದ ನಿರ್ಧಾರದಿಂದ ಇಸ್ಲಾಂಮಿಕ್  ಶಕ್ತಿಗಳ ಬಲ ಹೆಚ್ಚಾಗಿದೆ. 2047 ಕ್ಕೆ ಭಾರತವನ್ನು ಇಸ್ಲಾಂ ದೇಶ ಮಾಡುವ ಪ್ರಯತ್ನ ಈಗಲೇ ಶುರುವಾಗಿದೆ ಎಂದರು.

ಶಿವಮೊಗ್ಗ ಗಲಭೆ ಬಳಿಕ ಸಿಎಂ, ಡಿಸಿಎಂ, ಗೃಹಸಚಿವ ಮೂವರೂ ಪಕ್ಷಪಾತದ ಹೇಳಿಕೆ ನೀಡುತ್ತಿದ್ದಾರೆ. ನಾಯಕರು ಹೇಳಿಕೆ ನೀಡುವ ಮೊದಲು ಬುದ್ಧಿ ಎಲ್ಲಿ ಇಟ್ಟಿದ್ದಾರೆ. ಇವರ ಹೇಳಿಕೆ ಬೇಲಿಯೇ ಎದ್ದು ಹೊಲ ಮೇಯ್ದಂತಿದೆ. ಇನ್ನು ಘಟನೆ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಇದ್ದುದು ಇದ್ದ ಹಾಗೆ ಹೇಳಬೇಕಿತ್ತು. ಆದರೆ ಅವರ ಮೇಲೆ ಸರ್ಕಾರದ ಒತ್ತಡ ಇದೆ. ಅಧಿಕಾರಕ್ಕಾಗಿ ದುಷ್ಟಶಕ್ತಿಗಳನ್ನು ಬೆಂಬಲಿಸುವ ಸಿದ್ದರಾಮಯ್ಯನಂತವರು ಬಹಳ ಹುಟ್ಟಿದ್ದಾರೆ, ಸತ್ತಿದ್ದಾರೆ ಇದರಿಂದ ಸಮಾಜಕ್ಕೆ ಏನೂ ಆಗಿಲ್ಲ.

ರಾಜ್ಯದಲ್ಲಿ ನರಸತ್ತ ಸರ್ಕಾರ ಇರೋದ್ರಿಂದ ಮತಾಂಧರು ಹಿಂದುಗಳ ಮನೆಮೇಲೆ ಕಲ್ಲು ತೂರಿದ್ದಾರೆ: ಆಂದೋಲಶ್ರೀ

ಆತ್ಮರಕ್ಷಣೆ ನಮ್ಮ ಮೂಲಭೂತ ಅಧಿಕಾರ:

ಸಿದ್ದರಾಮಯ್ಯ ಸರ್ಕಾರ ಇಸ್ಲಾಮಿಕ್ ಶಕ್ತಿಗಳ ಪರ ನಿಂತರೆ ಹಿಂದು ಸಮಾಜ ತನ್ನದೇ ದಾರಿ ಹುಡುಕಬೇಕಾಗುತ್ತದೆ. ಸರ್ಕಾರ ಬೇಕಾದಷ್ಟು ರಾಜಕೀಯ ಮಾಡಲಿ. ಆದರೆ ಇಸ್ಲಾಮಿಕ್ ಶಕ್ತಿಗಳ ಪರ ನಿಲ್ಲಬೇಡಿ. ಇದು ಹೀಗೆ ಮುಂದುವರಿದರೆ ಭಾರತ ದೇಶ ಮತ್ತೊಂದು ಪಾಕಿಸ್ತಾನವಾಗಲು ಬಿಡುವುದಿಲ್ಲ. ಆತ್ಮರಕ್ಷಣೆ ನಮ್ಮ ಮೂಲಭೂತ ಅಧಿಕಾರ ಎಂದು ಎಚ್ಚರಿಕೆ ನೀಡಿದರು.

click me!