ಶಿವಮೊಗ್ಗದಲ್ಲಿ ಹಿಂದು ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಮತಾಂಧರು ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದ್ದರೂ ಇಲ್ಲಿ ನರಸತ್ತ ಸರ್ಕಾರ ಇರೋದ್ರಿಂದ ಕ್ರಮ ಕೈಗೊಳ್ಳಲು ಮುಂದೆ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಂದೋಲಶ್ರೀ ವಾಗ್ದಾಳಿ ನಡೆಸಿದರು.
ಯಾದಗಿರಿ (ಅ.4): ಶಿವಮೊಗ್ಗದಲ್ಲಿ ಹಿಂದು ಮನೆಗಳ ಮೇಲೆ ಕಲ್ಲು ತೂರಾಟ ಆಗಿದೆ. ಮತಾಂಧರು ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದ್ದರೂ ಇಲ್ಲಿ ನರಸತ್ತ ಸರ್ಕಾರ ಇರೋದ್ರಿಂದ ಕ್ರಮ ಕೈಗೊಳ್ಳಲು ಮುಂದೆ ಬರುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಂದೋಲಶ್ರೀ ವಾಗ್ದಾಳಿ ನಡೆಸಿದರು.
ಯಾದಗಿರಿಯಲ್ಲಿ ಹಿಂದು ಮಹಾಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಆಂದೋಲಶ್ರೀ, ಶಿವಮೊಗ್ಗ ಗಲಾಟೆಯಲ್ಲಿ ಹಿಂದುಗಳ ಮನೆಗಳ ಮೇಲೆ ಕಲ್ಲೂ ತೂರಾಟ ಮಾಡಿದ್ದಲ್ಲದೆ ಹಿಂದು ಮಹಿಳೆಯರಿಗೆ ಎಚ್ಚರಿಕೆ ಕೊಡ್ತಾರೆ ಅಂದ್ರೆ ಏನರ್ಥ ಇಂಥ ದುಷ್ಟರ ವಿರುದ್ಧ ಕ್ರಮಕೈಗೊಳ್ಳಲಾಗದ ನರಸತ್ತ ಸರ್ಕಾರ ಇರೋದ್ರಿಂದಲೇ ಅಟ್ಟಹಾಸ ಮೆರಿತಿದ್ದಾರೆ ಎಂದು ಕಿಡಿಕಾರಿದರು.
ಮಸೀದಿ ಎದುರು ಹಿಂದೂ ಕಾರ್ಯಕರ್ತರಿಂದ ಮಂಗಳಾರತಿ: ಸ್ಥಳದಲ್ಲಿ ಡಿಸಿ, ಎಸ್ಪಿ ಮೊಕ್ಕಂ ಹೂಡಿ ಪರಿಸ್ಥಿತಿ ಹತೋಟಿಗೆ
ಹಿಂದುಗಳನ್ನ ಕೆಣಕಬೇಡಿ ಎಚ್ಚರಿಕೆ:
ನೀವು ಸುಮ್ನನೆ ಇದ್ರೆ ಸರಿ ಇಲ್ಲಂದ್ರೆ ರೇಪ್ ಮಾಡ್ತಿವಿ ಅಂತಾ ಎಚ್ಚರಿಕೆ ಕೊಡ್ತಾರೆ. ಏಯ್ ದುಷ್ಟ ಸಾಬ್ರೇ ಹಿಂದುಗಳನ್ನು ಕೆಣಕಬೇಡಿ ನಿಮ್ಮ ಹತ್ರ ಮಂಡ್ ತಲ್ವಾರ್ ಇರಬಹುದು. ಮಂಡ್ ತಲ್ವಾರ್‌ನಿಂದ ಎದುರಿಸಲು ಬರಬೇಡಿ. ನಮ್ಮ ಹತ್ರ ಕಿತ್ತೂರು ರಾಣಿ ಚನ್ನಮ್ಮಳ ಖಡ್ಗ, ಛತ್ರಪತಿ ಶಿವಾಜಿ ಖಡ್ಗವಿದೆ. ಹೊಡೆದ್ರೆ ಏಕ್ ಮಾರ್ ದೋ ತುಕಡಾ. ಒಂದು ಬಾರಿ ಹೊಡೆದ್ರೆ ಎರಡು ತುಕಡಿಯಾಗ್ತಿರಿ. ಒಂದು ಭಾಗ ಪಾಕಿಸ್ತಾನಕ್ಕೆ ಹೋಗಬೇಕು, ಇನ್ನೊಂದು ಭಾಗ ಬಾಂಗ್ಲಾದೇಶಕ್ಕೆ ಹೋಗಬೇಕು. ಪದೇಪದೆ ಕೆಣಕಿದ್ರೆ ಕರ್ನಾಟಕದಲ್ಲಿ ಎರಡನೇ ಗೋದ್ರಾ ಆಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಆಂದೋಲಶ್ರೀ.
ಮೋದಿ ಇಲ್ಲದೆ ಭಾರತವಿಲ್ಲ, ಯತ್ನಾಳ ಇಲ್ಲದೆ ಕರ್ನಾಟಕ ಇಲ್ಲ:
ಭಾರತ, ಸನಾತನ ಧರ್ಮ ಉಳಿಯಬೇಕು ಅಂದ್ರೆ ಹಿಂದುಗಳು ಜಾಗೃತರಾಗಬೇಕು.ಭಗತ್ ಸಿಂಗ್ ಹೇಳಿದ ಹಾಗೆ ಪ್ರತಿಯೊಬ್ಬರೂ ಮನೆಯಲ್ಲಿ ಬಂದೂಕು ಇಟ್ಟುಕೊಳ್ಳಬೇಕು. ಬಂದೂಕು ಮನೆಯಲ್ಲಿ ಇಟ್ಟು ಕೊಂಡರೆ ಭಾರತ ಸುರಕ್ಷಿತವಾಗಿ ಇರುತ್ತದೆ. ಪಾಕಿಸ್ತಾನ ಸದೆ ಬಡೆಯುವ ನೇತಾರರು ಬೇಕಾಗಿದ್ದಾರೆ. ಹೀಗಾಗಿ 2024 ರಲ್ಲಿ ಮತ್ತೆ ಮೋದಿ ಅವರನ್ನು ಪಿಎಂ ಮಾಡಬೇಕು. ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ ಇಲ್ಲದೇ ಕರ್ನಾಟಕವಿಲ್ಲ ಎಂದರು.
ಕೇಸರಿ ಬಾವುಟ ತೆರವಿನಿಂದ ಗೊಂದಲ: ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ
ಗೃಹ ಸಚಿವ ಪರಮೇಶ್ವರ ವಿರುದ್ಧ ಕೆಂಡ:
ಶಿವಮೊಗ್ಗ ಗಲಾಟೆ ಕುರಿತು ಗೃಹ ಸಚಿವ ಪರಮೇಶ್ವರ ಅದೊಂದು ಸಣ್ಣ ಗಲಾಟೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಾಳೆ ಇದೇ ಮುಸ್ಲಿಮರು ನಿಮ್ಮ ಮನೆಗೆ ಬಂದು ನಿಮ್ಮ ಹೆಣ್ಮಕ್ಕಳಿಗೆ ಬೆದರಿಕೆ ಹಾಕಿದ್ರೆ ನಿಮ್ಮ ಸ್ಥಿತಿ ಹೇಗಿರುತ್ತೆ? ಎಂದು ಪ್ರಶ್ನಿಸಿದರು ಮುಂದುವರಿದು, ಅವರ ಗುರಿ ಸ್ಪಷ್ಟವಾಗಿದೆ 2047 ಕ್ಕೆ ಭಾರತ ಇಸ್ಲಾಂ ಮಾಡುವುದಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಯೋಗಿ ಇರುವವರೆಗೆ ಭಾರತ ಇಸ್ಲಾಂ ಮಾಡುವ ಮತಾಂಧರ ಕನಸು ಈಡೇರುವುದಿಲ್ಲ ಎಂದರು.
ಆಂದೋಲಶ್ರೀ ಹೇಳಿಕೆ ವಿವಾದ ರೂಪ ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.