ವರವಾಗುವ ಬದಲು ವಿದ್ಯಾರ್ಥಿಗಳಿಗೆ ಶಾಪವಾದ ಶಕ್ತಿ ಯೋಜನೆ! ಬಸ್‌ನಲ್ಲಿ ಅಪಾಯಕಾರಿ ಪ್ರಯಾಣ ವೈರಲ್!

By Ravi Janekal  |  First Published Jun 21, 2024, 10:45 AM IST

ಶಕ್ತಿ ಯೋಜನೆಯಿಂದ ಮಹಿಳೆಯರಿಗಷ್ಟೇ ಅಲ್ಲ, ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ವಿದ್ಯಾರ್ಥಿಗಳ ಪಾಲಿಗೆ ವರವಾಗುವ ಬದಲು ಶಾಪವಾದಂತಾಗಿದೆ. ಯಾದಗಿರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ಸಿನ ಬಾಗಿಲ ಬಳಿ ನಿಂತು ಪ್ರಯಾಣಿಸುವ ವಿಡಿಯೋ ಗಾಬರಿ ಹುಟ್ಟಿಸುತ್ತದೆ.


ಯಾದಗಿರಿ (ಜೂ.21): ಶಕ್ತಿ ಯೋಜನೆಯಿಂದ ಮಹಿಳೆಯರಿಗಷ್ಟೇ ಅಲ್ಲ, ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ವಿದ್ಯಾರ್ಥಿಗಳ ಪಾಲಿಗೆ ವರವಾಗುವ ಬದಲು ಶಾಪವಾದಂತಾಗಿದೆ. ಯಾವುದೇ ಬಸ್ ಹತ್ತಿದರೂ ಒಳಗಡೆ ಹೋಗಲಾಗದಷ್ಟು ತುಂಬಿತುಳುಕುತ್ತಿವೆ. ಇನ್ನು ಕೆಲವು ಬಸ್ ಕಂಡಕ್ಟರ್‌ಗಳೇ ಬಸ್‌ಗಳಲ್ಲಿ ಹತ್ತಿಸಿಕೊಳ್ಳುತ್ತಿಲ್ಲ ಎಂಬ ದೂರುಗಳಿವೆ.  ಇಂದಿಗೆ ಶಕ್ತಿ ಯೋಜನೆ ಬಂದು ವರ್ಷ ಕಳೆದರೂ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ನಿತ್ಯದ ಗೋಳಾಗಿದೆ.

ಇಲ್ಲಿ ನೋಡಿ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳ ಪರಿಸ್ಥಿತಿ ಇದು. ಶಹಾಪುರದಿಂದ ದಿನನಿತ್ಯ ಮಣಬಾರದ ಬ್ಯಾಗ್ ಹೊತ್ತು ಯಾದಗಿರಿಗೆ ತೆರಳುವ ವಿದ್ಯಾರ್ಥಿಗಳು. ಯಾವುದೇ ಬಸ್ ಹತ್ತಿದರೂ ಇದೇ ಪರಿಸ್ಥಿತಿ. ಖಾಲಿ ಬಸ್ ಬರುತ್ತದೆಂದು ಕಾಯುತ್ತಾ ಕುಳಿತರೆ ಶಾಲೆಗೆ ತಲುಪಲಾಗೊಲ್ಲ. ಯಾವುದಾದರೂ ಬಸ್ ಹತ್ತಿದರೂ ಇದೇ ರೀತಿ ಬಾಗಿಲಿಗೆ ಜೋತುಬಿದ್ದು ಅಪಾಯಕಾರಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ತಡವಾಗಿ ಬಂದರೆ ಶಾಲೆಯಲ್ಲಿ ಏಟು, ಈ ರೀತಿ ಬಸ್ ಪ್ರಯಾಣ ಮಾಡಿದರೆ ಜೀವಕ್ಕೇ ಅಪಾಯ. ಆದರೂ ಪ್ರಾಣದ ಹಂಗು ತೊರೆದು ಸಾರಿಗೆ ಬಸ್‌ನಲ್ಲಿ ದಿನನಿತ್ಯ ವಿದ್ಯಾರ್ಥಿಗಳು ಪ್ರಯಾಣಿಸಬೇಕಿದೆ.

Tap to resize

Latest Videos

undefined

'1985 ರಿಂದಲೂ ಯೋಗ ಮಾಡುತ್ತಿದ್ದೇನೆ ಆರೋಗ್ಯ ಗುಟ್ಟು ಬಿಚ್ಚಿಟ್ಟ ಸಚಿವ ಮಹದೇವಪ್ಪ!

ಬಸ್‌ನಲ್ಲಿ ಸೀಟ್ ಇಲ್ಲದೇ ಬಾಗಿಲು ಬಳಿ ನಿಂತು ಪ್ರಯಾಣಿಸುವ ವಿದ್ಯಾರ್ಥಿಗಳನ್ನ ನೋಡುತ್ತಿದ್ದರೆ ಅಯ್ಯೋ ಅನಿಸುತ್ತೆ. ಬಸ್ ಮೆಟ್ಟಿಲ ಮೇಲೆ ಒಂದೇ ಕಾಲಿಟ್ಟು, ಹಿಂಬದಿ ಬ್ಯಾಗಿನ ಭಾರ ಹೊತ್ತು ಪ್ರಯಾಣಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು, ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
 

click me!