ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಪ್ರತ್ಯೇಕ ಹಿಂದೂ ಸಂವಿಧಾನದ ಪ್ರಸ್ತಾಪವನ್ನು ಟೀಕಿಸಿದ್ದಾರೆ. ಫೆಬ್ರವರಿ 3 ರಂದು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯಲ್ಲಿರುವ ಹೊಸ ಸಂವಿಧಾನದ ಪ್ರಸ್ತಾಪ ಒಂದು ವರ್ಗಕ್ಕೆ ಸೀಮಿತವಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದ ಜೊತೆಗೆ ಸೇರಿಸಿರುವುದನ್ನು ವಿರೋಧಿಸಿ, ಹೋರಾಟಕ್ಕೆ ಕರೆ ನೀಡಿದ್ದಾರೆ.
ದಾವಣಗೆರೆ (ಜ.31): ಪ್ರತ್ಯೇಕ ಹಿಂದೂ ಸಂವಿಧಾನ ತಲೆಕೆಟ್ಟವರ ಕೆಲಸ ಎಂದು ಸಾಣೇಹಳ್ಳಿ ಮಠದ ಡಾ ಪಂಡಿತಾರಾಧ್ಯ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.
ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬನ್ನೂರಿನಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಸಂವಿಧಾನನವನ್ನು 75 ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ. ಆದರೆ ಗಣರಾಜ್ಯೋತ್ಸವದ ದಿನದಂದು ಅಪರೂಪದ ವರದಿ ಬಿಡುಗಡೆಯಾಗಿದೆ. ಅಪರೂಪದ ವರದಿ ಎಂದರೆ ತಲೆಕೆಟ್ಟವರು ಬರೆದ ವರದಿ ಎಂದು ನಾವು ಹೇಳುತ್ತೇವೆ. ಹೊಸ ಸಂವಿಧಾನವನ್ನು ಅವರು ಬರೆದಿದ್ದಾರಂತೆ, ಫೆಬ್ರವರಿ 3 ರಂದು ಸರ್ಕಾರಕ್ಕೆ ಕಳಿಸುತ್ತಾರಂತೆ. ಇದರಿಂದ ಇದುವರೆಗೂ ಇರುವ ಸಂವಿಧಾನ ಸರಿ ಇಲ್ಲ ಎಂದು ಹೇಳಿದ ಹಾಗೇ ಆಗುತ್ತಲ್ಲವೇ? ಪ್ರಶ್ನಿಸಿದರು.
ಇದನ್ನೂ ಓದಿ: ಹಿಂದೂ ಧರ್ಮವೇ ಅಲ್ಲ, ಇದೊಂದು ಆನೈತಿಕ, ಅನಾಚಾರ: ಪಂಡಿತರಾಧ್ಯ ಶ್ರೀ
ವೇದ ಅಧ್ಯಯನ ಯಾರು ಮಾಡುತ್ತಾರೋ ಅಂಥವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದಿದೆ. ಇನ್ನೂ ಅನೇಕ ಅಂಶಗಳು ಆ ವರದಿಯಲ್ಲಿ ತಿಳಿಸಲಾಗಿದೆ. ಇದನ್ನು ನೋಡಿದರೆ ಅ ಸಂವಿಧಾನ ಒಂದು ವರ್ಗಕ್ಕೆ ಮಾತ್ರ ಸಿಮೀತವಾಗುತ್ತದೆ ಎಂದುಕೊಳ್ಳುವಂತಾಗಿದೆ. ಅಲ್ಲಿ ಜೈನ, ಬೌದ್ಧ, ಹಿಂದೂ ಎಂದು ಹೇಳುತ್ತಿದ್ದಾರೆ. ಆದರೆ ಹಿಂದೂ ಧರ್ಮ ಎಂದು ಬಳಸುತ್ತಿದ್ದಾರೆ. ಅಲ್ಲಿ ಲಿಂಗಾಯತರ ಸುದ್ದಿಯೇ ಇಲ್ಲ. ನಾವು ಹಿಂದೂ ಧರ್ಮವನ್ನು ಒಪ್ಪುವುದಿಲ್ಲ. ನಮಗೆ ಲಿಂಗಾಯತ ಧರ್ಮವೇ ಮುಖ್ಯ ಇದರಿಂದ ಹೊಸ ಸಂವಿಧಾನ ರಚನೆ ಮಾಡಿಕೊಡುತ್ತೇವೆ ಎನ್ನುವುದೇ ಉಂಬರ ಕೆಲಸ. ಇದು ಉಂಬರ ಕೆಲಸ ಎಂದು ಹೇಳಿ ಸುಮ್ಮನೆ ಬಿಟ್ಟರೆ ಆಗೋದಿಲ್ಲ. ಇದರ ವಿರುದ್ಧ ನಾವು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಗಾಂಧಿಯನ್ನು ಗುಂಡಿಟ್ಟು ಕೊಂದಿರಬಹುದು; ಅವರ ಮೌಲ್ಯಗಳನ್ನಲ್ಲ: ಬಿಜೆಪಿ ಆರೆಸ್ಸೆಸ್ ವಿರುದ್ಧ ಸಿಎಂ ವಾಗ್ದಾಳಿ
ಈ ರೀತಿಯ ಸಂವಿಧಾನವನ್ನ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಗಾಂಧಿ ಸ್ವಾತಂತ್ರ್ಯ ಸಿಗುತ್ತೆ ಅಂತ ಅಂದುಕೊಂಡಿದ್ರಾ? ಅವಿರತವಾಗಿ ಹೋರಾಟ ಮಾಡಿದ್ರು. ಮುನ್ನೂರು ವರ್ಷ ಆಳಿದ ಬ್ರಿಟಿಷರನ್ನ ದೇಶದಿಂದ ಹೊರದಬ್ಬಲು ಹೋರಾಟ ನಡೆಸಿದರು. ಬ್ರಿಟಿಷರಿಗೆ ಹೆದರಲಿಲ್ಲ, ಅಳುಕಲಿಲ್ಲ. ಅದೇ ರೀತಿ ನಾವು ಕೂಡ ಹೋರಾಟದ ಆಶಾಭಾವನೆ ಇಟ್ಟುಕೊಂಡು ಉಂಬರ ವಿರುದ್ಧ ಹೋರಾಟ ಮಾಡಲು ಸಜ್ಜಾಗಬೇಕು ಎಂದರು.
ನಾಳೆ 501 ಪುಟಗಳು ಬಹಿರಂಗವಾಗುತ್ತಾ?
ಇತ್ತೀಚೆಗೆ ಈ ಪ್ರತ್ಯೇಕ ಸಂವಿಧಾನದ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ 'ಹಿಂದೂ ರಾಷ್ಟ್ರ'ಕ್ಕೆ ಪ್ರತ್ಯೇಕ ಸಂವಿಧಾನ ರಚನೆ ಮಾಡಲು ಗುಪ್ತವಾಗಿ ತಯಾರಿ ನಡೆದಿದೆ ಎಂದು ಆರೋಪಿಸಿದ್ದು, ಇದೇ ಫೆ.3ರಂದು ಸಂಪೂರ್ಣ 501 ಪುಟಗಳು ಬಹಿರಂಗವಾಗಲಿದೆ ಎನ್ನಲಾಗಿದ್ದು ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಯಾವ ಕಾರಣಕ್ಕೂ ಬಹಿರಂಗಗೊಳ್ಳದಂತೆ ಹಾಗೂ ದೇಶದ ಸ್ವಾಸ್ಥ್ಯ ಹಾಳುಗೆಡುವದಂತೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರಲ್ಲದೆ, ಇದೊಂದು ವ್ಯವಸ್ಥಿತ ಸಂಚು ನಡೆದಿದೆ. ಇಂಥ ಸಂವಿಧಾನ ವಿರೋಧಿಗಳ ದುಷ್ಕೃತ್ಯವನ್ನು ಹಿಮ್ಮೆಟ್ಟಿಸದಿದ್ದರೆ ಬಹುತ್ವ ಹಾಗೂ ಏಕತೆಯಾಗಿ ಭಾರತ ಉಳಿಯುವುದಿಲ್ಲ ಎಂದಿದ್ದಿಲ್ಲಿ ಸ್ಮರಿಸಬಹುದು. ಇದೀಗ ಸಾಣೇಹಳ್ಳಿ ಶ್ರೀಗಳ ಸಹ ಈ ಬಗ್ಗೆ ಹೇಳಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.