ಬಿಎಂಟಿಸಿ ಬಸ್ ಚಾಲಕರ ಅತಿವೇಗ ಮತ್ತು ಹಠಾತ್ ಬ್ರೇಕ್‌ಗಳು ಪ್ರಯಾಣಿಕರಲ್ಲಿ ಆತಂಕ ಮೂಡಿಸಿವೆ. ಬಸ್ ಹತ್ತುವಾಗ ಮತ್ತು ಇಳಿಯುವಾಗ ಸುರಕ್ಷತೆಯ ಬಗ್ಗೆಯೂ ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಚಾಲಕರ ಅಜಾಗರೂಕತೆಯಿಂದಾಗಿ ಮಹಿಳಾ ಕಂಡಕ್ಟರ್ ಒಬ್ಬರು ಬಿದ್ದ ಘಟನೆಯೂ ವರದಿಯಾಗಿದೆ.
ಬೆಂಗಳೂರು (ಜ.31): ಬಿಎಂಟಿಸಿ ಬಸ್ ಚಾಲಕರು ರೇಸಿಗೆ ಬಿದ್ದವರಂಟೆ ಬಸ್ ಓಡಿಸುವುದು ನೋಡಿದರೆ ಬಿಎಂಟಿಸಿ ಬಸ್ ಪ್ರಯಾಣ ಸಾಕಪ್ಪ ಅಂತಾ ಕೆಲ ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಸ್‌ನ ವೇಗ, ಸಡೆನ್ ಹಾಕು ಬ್ರೇಕ್ ಪ್ರಯಾಣಿಕರಿಗೂ ಗಾಬರಿ ಹುಟ್ಟಿಸುತ್ತದೆ.
ಹೌದು. ಬಹುತೇಕ ಬಿಎಂಟಿಸಿ ಚಾಲಕರು, ವೇಗಮಿತಿ ಮೀರಿ ಓಡಿಸುತ್ತಾರೆ. ತಕ್ಷಣ ಯಾವುದಾದರೂ ವಾಹನ ಅಡ್ಡ ಬಂದಾಗ ಬ್ರೇಕ್ ಹಾಕಿ ಬಸ್‌ನಲ್ಲಿರುವ ಅಷ್ಟು ಪ್ರಯಾಣಿಕರು ಮುಗ್ಗರಿಸಿ ಬೀಳುವಂತೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಕೆಲವೆಡೆ ನಿಲ್ದಾಣಗಳಲ್ಲೂ ಬಸ್ ನಿಲ್ಲಿಸುವುದಿಲ್ಲ. ನಿಲ್ಲಿಸಿದರೂ ಹತ್ತಾರು ಸೆಕೆಂಡ್‌ನಲ್ಲಿ ಎಲ್ಲ ಪ್ರಯಾಣಿಕರು ಹತ್ತಬೇಕು. ಅಷ್ಟರಲ್ಲೇ ಬಸ್ ಚಲಿಸುತ್ತದೆ. ಪ್ರಯಾಣಿಕರು ಹತ್ತುವವರೆಗೂ ಸಮಾಧಾನ ಇಲ್ಲ. ಬಸ್ ಹತ್ತುವ ಸಂದರ್ಭದಲ್ಲೇ ಪ್ರಯಾಣಿಕರು ಕೆಳಗೆ ಬಿದ್ದ ದುರ್ಘಟನೆಗಳು ಸಂಭವಿಸುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಬಸ್‌ನ ವೇಗ, ಮುಗ್ಗರಿಸಿ ಬಿಳುವಂತೆ ಹಾಕುವ ಬ್ರೇಕ್‌ನಿಂದ ಹಿರಿಯರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಲು ಹೆದರುತ್ತಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಮೊಬೈಲ್ ಕಳ್ಳನಿಂದ ಪಾರು ಮಾಡಿದ ಕಂಡಕ್ಟರ್; ಕಳ್ಳರ ಕರಾಮತ್ತು ಹೇಗಿರುತ್ತದೆ ಗೊತ್ತಾ?
ಸಡೆನ್ ಬ್ರೇಕ್‌ಗೆ ಮುಗ್ಗರಿಸಿ ಬಿದ್ದ ಮಹಿಳಾ ಕಂಡಕ್ಟರ್:
ಬಸ್ ಚಲಿಸುತ್ತಿದ್ದ ವೇಳೆ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಮಹಿಳಾ ಕಂಡಕ್ಟರ್ ಒಬ್ಬರು ಬಸ್‌ನಲ್ಲಿ ಮುಗ್ಗರಿಸಿ ಬಿದ್ದ ಘಟನೆ ನಿನ್ನೆ ಬೆಳಗಿನ ಸುಮಾರಿಗೆ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ ಟು ಹೊಸೂರು ರೋಡ್ ಗೆ ಚಲಿಸುತ್ತಿದ್ದ ಎಲೆಕ್ಟ್ರಿಕ್ ಬಿಎಂಟಿಸಿ ಬಸ್. ಇದೇ ಬಸ್‌ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಂಡಕ್ಟರ್. ಟಿಕೆಟ್ ಕೊಡುತ್ತಿರುವ ವೇಳೆ ದಿಡೀರ್ ಬ್ರೇಕ್ ಹಾಕಿರುವ ಚಾಲಕ. ಇದರಿಂದ ಉರುಳಿಬಿದ್ದ ಕಂಡಕ್ಟರ್. ಅದೃಷ್ಟವಶಾತ್ ಬಸ್‌ನ ಬಾಗಿಲು ಕ್ಲೋಸ್ ಆಗಿದ್ದರಿಂದ ದುರಂತ ತಪ್ಪಿದೆ. ಘಟನೆಯಿಂದ ಕಂಡಕ್ಟರ್ ಗೆ ಪೆಟ್ಟುಗಳಾಗಿವೆ. ಪ್ರಯಾಣಿಕರು ಸಹಾಯಕ್ಕೆ ದಾವಿಸಿಬಂದಿದ್ದಾರೆ. ಘಟನೆಯ ದೃಶ್ಯ ಬಿಎಂಟಿಸಿ ಬಸ್ ನಲ್ಲಿ ಅಳವಡಿಸಿರೋ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
BMTC ಕಂಡಕ್ಟರ್ vs ಡ್ರೈವರ್ ಫೈಟ್!
ಪ್ರತ್ಯೇಕ ಘಟನೆಯಲ್ಲಿ ಬಿಎಂಟಿಸಿ ಡ್ರೈವರ್, ಕಂಡಕ್ಟರ್ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಪರಸ್ಪರ ಕಿತ್ತಾಡಿಕೊಂಡ ಘಟನೆ ಹೆಬ್ಬಾಳ ಫ್ಲೈಒವರ್ ಬಳಿ ನಡೆದಿದೆ. ಘಟನೆ ದೃಶ್ಯ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನ ಮಾತು ನಾನ್ಯಾಕೆ ಕೇಳಬೇಕು?
ನಿಧಾನ ಓಡಿಸು ಎಂದಿದ್ದನಂತೆ ಕಂಡಕ್ಟರ್ ಅಷ್ಟಕ್ಕೆ ನಿನ್ನ ಮಾತು ನಾನ್ಯಾಕೆ ಕೇಳಬೇಕು ಅಂತಾ ಬಸ್ಸಿನಲ್ಲೇ ಜಗಳ. ಬಸ್‌ನಲ್ಲಿ ಪ್ರಯಾಣಿಕರು ಇದ್ರೂ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಚಾಲಕ-ನಿರ್ವಾಹಕ ಪರಸ್ಪರ ಬೈದಾಡಿಕೊಂಡಿದ್ದಾರೆ. ಬಿಎಂಟಿಸಿ ಸಿಬ್ಬಂದಿ ಈ ಘಟನೆಯಿಂದ ಸಾರ್ವಜನಿಕರು, 'ಯಾವಾಗಲೂ ಇದೇ ಗೋಳು ಕಣ್ರಿ ಇವರದು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.