ಇವತ್ತಿನ ರಾಜಕಾರಣ ಹಿಂದಿನದ್ದಕ್ಕಿಂತ ಭಿನ್ನವಾಗಿದೆ. ಅವತ್ತೂ ಪರಸ್ಪರ ಭಿನ್ನಾಭಿಪ್ರಾಯ ಇದ್ದವು. ಆದರೆ ಭಿನ್ನಾಭಿಪ್ರಾಯಗಳನ್ನ ಸಮಚಿತ್ತದಿಂದ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದರು.
ಧಾರವಾಡ (ನ.30): ಇವತ್ತಿನ ರಾಜಕಾರಣ ಹಿಂದಿನದ್ದಕ್ಕಿಂತ ಭಿನ್ನವಾಗಿದೆ. ಅವತ್ತೂ ಪರಸ್ಪರ ಭಿನ್ನಾಭಿಪ್ರಾಯ ಇದ್ದವು. ಆದರೆ ಭಿನ್ನಾಭಿಪ್ರಾಯಗಳನ್ನ ಸಮಚಿತ್ತದಿಂದ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿದರು.
ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದ ನಾನು ರಾಜಕಾರಣ ನೋಡುತ್ತ ಬಂದಿದ್ದೇನೆ. ಅಂದಿನ ರಾಜಕಾರಣ ಇಂದು ಉಳಿದಿಲ್ಲ. ಅಂದು ಪರಸ್ಪರ ಭಿನ್ನಭಿಪ್ರಾಯ ಸಿಟ್ಟು ಎಲ್ಲವೂ ಇದ್ದವು. ಬಹಳ ಪ್ರಬಲವಾಗಿ ತಮ್ಮ ವಿಚಾರ ಮಂಡಿಸುತ್ತಿದ್ದರು. ಆದರೆ ಯಾವತ್ತೂ ಕೆಳಮಟ್ಟದ ಬೈಗುಳದ ಟೀಕೆ ಇರುತ್ತಿರಲಿಲ್ಲ. ಆದರೆ ಇಂದು ನುಡಿ, ನೈತಿಕತೆ ಎರಡೂ ನಾಶವಾಗಿವೆ. ವಾಸ್ತವವಾಗಿ ಸೈದ್ಧಾಂತಿಕ ರಾಜಕಾರಣದ ಜಾಗದಲ್ಲಿ ಸಮಯಸಾಧಕ ರಾಜಕಾರಣ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
News Hour: ದೇವೇಗೌಡ ತವರಿನಲ್ಲಿ ಸಿಎಂ ಶಕ್ತಿ ಪ್ರದರ್ಶನಕ್ಕೆ ವೇದಿಕೆ; ಹಾಸನದಲ್ಲಿ ನಡೆಯಲಿದ್ಯಾ ಗರ್ವಭಂಗ?
ನಮ್ಮಲ್ಲಿ ನಿಜವಾದ ರಾಜಕೀಯ ಪಕ್ಷಗಳಿಲ್ಲ, ರಾಜಕೀಯ ಗುಂಪುಗಳಿವೆ. ಹೀಗಾಗಿ ಜನ ಜಾಗೃತರಾಗಬೇಕು. ಎಲ್ಲರೂ ನಿರಾಶರಾಗಿಲ್ಲ. ಇವರನ್ನು ಸರಿಯಾದ ಮಾರ್ಗಕ್ಕೆ ತರುವ ಶಕ್ತಿ ಜನ ಪಡೆಯುತ್ತಾರೆ. ಅತಿರೇಕಕ್ಕೆ ಹೋಗೋದು ಬೇಸರ ತರಿಸಿದೆ. ಇವತ್ತಿನದು ಆರೋಗ್ಯಕರ ರಾಜಕೀಯ ವಿದ್ಯಮಾನಗಳಲ್ಲ. ಚುನಾವಣೆ ಅನ್ನೋದು ಒಂದು ಸ್ಪರ್ಧೆ, ಅದು ಯುದ್ಧವಲ್ಲ, ಸಮರವಲ್ಲ. ಯಾವ ಸಿದ್ಧಾಂತ ಇಟ್ಟುಕೊಂಡು ಹೊರಟಿದ್ದೀರಿ. ವ್ಯಕ್ತಿಗತ ಟೀಕೆ ಮೀರಿ ತಮ್ಮ ಪಕ್ಷದ ಸಿದ್ಧಾಂತವನ್ನಷ್ಟೇ ಹೇಳಬೇಕು. ಆದರೆ ಇಂದು ಏನಾಗುತ್ತಿದೆ? ಸಿದ್ಧಾಂತ ಕೇವಲ 25ರಷ್ಟು, ಶೇ.75 ರಷ್ಟು ಬೇರೆ ವಿಚಾರ ಪ್ರಸ್ತಾಪವಾಗುತ್ತಿದೆ. ಇಲ್ಲಿ ಅಭಿರುಚಿ, ಆರೋಗ್ಯಕರ ನುಡಿ ಕಾಣುತ್ತಿಲ್ಲ. ಇದು ಎಲ್ಲಿವರೆಗೆ ನಡೆಯುತ್ತದೆ? ಅತಿರೇಕಕ್ಕೆ ಹೋದಾಗ ಜನ ಅರ್ಥ ಮಾಡಿಕೊಳ್ತಾರೆ. ಅವರೇ ಬದಲಾಯಿಸ್ತಾರೆ ಎಂದರು.
ಯಡಿಯೂರಪ್ಪ ವಿರುದ್ಧ ಹಗೆತನದ ರಾಜಕಾರಣ: ಕಾಂಗ್ರೆಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಬಸವಣ್ಣನವರ ಬಗ್ಗೆ ಯತ್ನಾಳ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾರೂ ಯಾರ ಬಗ್ಗೆಯೂ ಲಘುವಾಗಿ ಮಾತನಾಡಬಾರದು. ವಿದ್ವಾಂಸರು ಸಹ ಹೀಗೆ ಮಾತನಾಡಬಾರದು. ಸಂಶೋಧನೆ ಮತ್ತು ಅಧ್ಯಯನದಿಂದ ಮಾತಾಡುವ ವಿಷಯ ಇದು. ವ್ಯಕ್ತಿಯ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ಕೊಡಲಾರೆ ಎಂದು ಪ್ರತಿಕ್ರಿಯೆಗೆ ನೀಡಲು ನಿರಾಕರಿಸಿದರು.