ಮರಳು ಮಾಫಿಯಾದಿಂದ ನನ್ನನ್ನು ರಕ್ಷಿಸಿ: ಜೆಡಿಎಸ್‌ ಶಾಸಕಿ ಕರೆಮ್ಮ ಅಳಲು

Published : Jul 14, 2023, 02:30 AM IST
ಮರಳು ಮಾಫಿಯಾದಿಂದ ನನ್ನನ್ನು ರಕ್ಷಿಸಿ: ಜೆಡಿಎಸ್‌ ಶಾಸಕಿ ಕರೆಮ್ಮ ಅಳಲು

ಸಾರಾಂಶ

ಮರಳು ದಂಧೆಗೆ ಕಡಿವಾಣ ಹಾಕಲು ಪ್ರಯತ್ನಿಸಿದ್ದಕ್ಕೆ ನನ್ನ ಅಣ್ಣನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಕ್ಷೇತ್ರದಲ್ಲಿ ನಾನು ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖ ತೋಡಿಕೊಂಡ ಕರೆಮ್ಮ ಜಿ. ನಾಯಕ್‌. ಇದಕ್ಕೆ ಸ್ಪಂದಿಸಿದ ಸ್ಪೀಕರ್‌ ಖಾದರ್‌ ಅವರು, ‘ಆತಂಕ ಪಡಬೇಡಿ. ನಿಮ್ಮ ರಕ್ಷಣೆ ನಾವು ಇದ್ದೇವೆ. ಈ ಬಗ್ಗೆ ಗೃಹ ಸಚಿವರೊಂದಿಗೆ ನಾನೇ ಮಾತನಾಡಿ ರಕ್ಷಣೆ ಒದಗಿಸುತ್ತೇನೆ’ ಎಂದು ಅಭಯ ನೀಡಿದರು.

ವಿಧಾನಸಭೆ(ಜು.14):  ‘ನನ್ನ ಕ್ಷೇತ್ರದಲ್ಲಿ ಮರಳು, ಮಟ್ಕಾ, ಜೂಜು ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಹೋದರೆ ಕೆಲವರು ನನ್ನ ಮೇಲೆ ಲಾರಿ ಹತ್ತಿಸುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ. ಪೊಲೀಸ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಶಿಷ್ಟಾಚಾರಕ್ಕೂ ನನಗೆ ಗೌರವ ಕೊಡುತ್ತಿಲ್ಲ. ಮಾಜಿ ಶಾಸಕರ ಕುಮ್ಮಕ್ಕಿನಿಂದ ಇದೆಲ್ಲಾ ನಡೆಯುತ್ತಿದೆ. ನನಗೆ ರಕ್ಷಣೆ ಕೊಡಿ.’ ಹೀಗಂತ ಜೆಡಿಎಸ್‌ ಶಾಸಕರಾದ ದೇವದುರ್ಗದ ಕರೆಮ್ಮ ಜಿ. ನಾಯಕ್‌ ಅವರು ಸದನದಲ್ಲಿ ತಮ್ಮ ನೋವು ತೋಡಿಕೊಂಡರಲ್ಲದೆ, ತಮಗೆ ರಕ್ಷಣೆ ಒದಗಿಸಬೇಕು ಎಂದು ನೇರವಾಗಿ ಸ್ಪೀಕರ್‌ ಯು.ಟಿ.ಖಾದರ್‌ ಅವರನ್ನೇ ಆಗ್ರಹಿಸಿದರು.

ಅಲ್ಲದೆ, ‘ಮರಳು ದಂಧೆಗೆ ಕಡಿವಾಣ ಹಾಕಲು ಪ್ರಯತ್ನಿಸಿದ್ದಕ್ಕೆ ನನ್ನ ಅಣ್ಣನ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಕ್ಷೇತ್ರದಲ್ಲಿ ನಾನು ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸ್ಪೀಕರ್‌ ಖಾದರ್‌ ಅವರು, ‘ಆತಂಕ ಪಡಬೇಡಿ. ನಿಮ್ಮ ರಕ್ಷಣೆ ನಾವು ಇದ್ದೇವೆ. ಈ ಬಗ್ಗೆ ಗೃಹ ಸಚಿವರೊಂದಿಗೆ ನಾನೇ ಮಾತನಾಡಿ ರಕ್ಷಣೆ ಒದಗಿಸುತ್ತೇನೆ’ ಎಂದು ಅಭಯ ನೀಡಿದರು.

ದೇವದುರ್ಗ ಶಾಸಕಿಗೆ ನಿಂದನೆ, ಕೊಲೆ ಬೆದರಿಕೆ: ಮಾಜಿ ಶಾಸಕನ ಸಹೋದರ ಸೇರಿ 8 ಜನರ ವಿರುದ್ಧ ಕೇಸ್

ಪೊಲೀಸರ ಅಸಹಕಾರ:

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಕರೆಮ್ಮ, ‘ನನ್ನ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟ, ಮಟ್ಕಾ, ಜೂಜು, ಮರಳು ದಂಧೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಪೊಲೀಸ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಈ ದಂದೆಕೋರರನ್ನು ಜನರೇ ಠಾಣೆಗೆ ಹಿಡಿದು ತಂದರೂ ಇನ್ನೂರು ಮುನ್ನೂರು ದಂಡ ಹಾಕಿ ಬಿಟ್ಟು ಕಳುಹಿಸುತ್ತಿದ್ದಾರೆ’ ಎಂದರು.

‘ಸ್ಥಳೀಯ ಶಾಸಕಿಯಾದ ನನಗೆ ಶಿಷ್ಟಾಚಾರಕ್ಕೂ ಗೌರವ ನೀಡುತ್ತಿಲ್ಲ. ಮಾಜಿ ಶಾಸಕರ ಬೆಂಬಲಿಗರು ನನಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಕ್ಷೇತ್ರದಲ್ಲಿ ಮರುಚುನಾವಣೆ ನಡೆಸುವುದಾಗಿ ಹೇಳಿ ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ವಿಧಾನಸಭೆಯ ನನ್ನ ಸ್ಥಾನದಲ್ಲಿ ಅನಾಮಿಕ ವ್ಯಕ್ತಿ ಬಂದು ಕೂತಿದ್ದು, ನನಗೆ ಸಾಕಷ್ಟುಅನುಮಾನ ಮೂಡಿಸಿದೆ. ನನಗೆ ಸರ್ಕಾರ ಸೂಕ್ತ ಭದ್ರತೆ ಕೊಡಬೇಕು’ ಎಂದು ಮನವಿ ಮಾಡಿದರು.

ಕಲುಷಿತ ನೀರು ಸೇವನೆ ಪ್ರಕರಣ; ಅಸ್ವಸ್ಥ ರೋಗಿ​ಗಳ ಭೇಟಿ​ಯಾದ ಶಾಸಕಿ ಕರೆಮ್ಮ

ಅಲ್ಲದೆ, ‘ಮರಳು ದಂಧೆಗೆ ಕಡಿವಾಣ ಹಾಕಲು ಯತ್ನಿಸಿದ್ದಕ್ಕೆ 21 ವರ್ಷದ ನನ್ನ ಅಣ್ಣನ ಮಗನ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆದಿದೆ. ಅವನು ಆಸ್ಪತ್ರೆಯಲ್ಲಿದ್ದಾನೆ. ಕೆಲವರು ನನ್ನ ಮೇಲೆ ಲಾರಿ ಹತ್ತಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಪೊಲೀಸರು ಯಾರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ಗೊತ್ತಿಲ್ಲ. ನನಗೆ ರಕ್ಷಣೆ, ಭದ್ರತೆ ಬೇಕು’ ಎಂದು ಸ್ಪೀಕರ್‌ ಬಳಿ ಒತ್ತಾಯಿಸಿದರು.

ಮಾಜಿ ಶಾಸಕ ಕುಮ್ಮಕ್ಕು

ನನ್ನ ಕ್ಷೇತ್ರದಲ್ಲಿ ಮರಳು, ಮಟ್ಕಾ, ಜೂಜು ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ತಡೆಯಲು ಹೋದರೆ ಕೆಲವರು ನನ್ನ ಮೇಲೆ ಲಾರಿ ಹತ್ತಿಸುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ. ಪೊಲೀಸ್‌ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಮರಳು ದಂಧೆಗೆ ಕಡಿವಾಣ ಹಾಕಲು ಹೋದ ನನ್ನ ಅಣ್ಣನ ಮಗನ ಮೇಲೆ ಹಲ್ಲೆ ನಡೆದಿದೆ. ಮಾಜಿ ಶಾಸಕರ ಕುಮ್ಮಕ್ಕಿನಿಂದ ಇದೆಲ್ಲಾ ನಡೆಯುತ್ತಿದೆ ಅಂತ ಕರೆಮ್ಮ ಜಿ. ನಾಯಕ್‌ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!