ಹಳ್ಳಿಗಳಲ್ಲಿನ ಬಾರ್‌, ವೈನ್‌ ಶಾಪ್‌ ಲೈಸನ್ಸ್‌ ನಗರಕ್ಕೆ ವರ್ಗಾವಣೆ?: ಸಚಿವ ತಿಮ್ಮಾಪುರ ಪ್ರತಿಕ್ರಿಯೆ

Published : Jul 14, 2023, 02:00 AM IST
ಹಳ್ಳಿಗಳಲ್ಲಿನ ಬಾರ್‌, ವೈನ್‌ ಶಾಪ್‌ ಲೈಸನ್ಸ್‌ ನಗರಕ್ಕೆ ವರ್ಗಾವಣೆ?: ಸಚಿವ ತಿಮ್ಮಾಪುರ ಪ್ರತಿಕ್ರಿಯೆ

ಸಾರಾಂಶ

ಪ್ರಸ್ತುತ ರಾಜ್ಯದಲ್ಲಿ 12,614 ಸನ್ನದುಗಳಿವೆ. ಈ ಪೈಕಿ 3635 ಬಾರ್‌ ಅಂಡ್‌ ರೆಸ್ಟೋರೆಂಟ್‌, 3988-ಸಿಎಲ್‌-2 ಸನ್ನದು, 1040 ಸಿಎಲ್‌11ಸಿ ಮದ್ಯದಂಗಡಿಗಳಿರುತ್ತವೆ ಎಂದ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ 

ವಿಧಾನ ಪರಿಷತ್‌(ಜು.14):  ಗ್ರಾಮೀಣ ಪ್ರದೇಶದಲ್ಲಿನ ಬಾರ್‌ ಹಾಗೂ ವೈನ್‌ ಶಾಪ್‌ಗಳನ್ನು ನಗರ ಪ್ರದೇಶಗಳಿಗೆ ಸ್ಥಳಾಂತರಿಸಲು ಅವಕಾಶ ಇರುವುದಿಲ್ಲ, ಆದರೆ ನಗರ ಪ್ರದೇಶದಲ್ಲಿ ಬಾರ್‌ಗಳನ್ನು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ಸಿನ ಮಂಜುನಾಥ್‌ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಬಾರ್‌ ಹಾಗೂ ವೈನ್‌ ಶಾಪ್‌ ಆರಂಭಿಸುವ ಲೈಸೆನ್ಸ್‌ ಪಡೆದು ನಂತರ ಅಲ್ಲಿ ಹೆಚ್ಚು ಲಾಭ ಆಗುವುದಿಲ್ಲ ಎಂದು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡುವಂತೆ ಕೋರುವವರ ಸಂಖ್ಯೆ ಹೆಚ್ಚಾಗುತ್ತದೆ, ಹಾಗಾಗಿ ಅದಕ್ಕೆ ಅವಕಾಶ ನೀಡುವುದಿಲ್ಲ. ಆದರೆ ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಸ್ಥಳಾಂತರ ಮಾಡಲು ಅವಕಾಶವಿದೆ ಎಂದರು. 

ಜುಲೈ 20ರಿಂದ ಮದ್ಯದ ದರ ದುಬಾರಿ: ಬ್ರ್ಯಾಂಡ್‌ವಾರು ಬೆಲೆ ಏರಿಕೆ ವಿವರ ಇಲ್ಲಿದೆ...

ಪ್ರಸ್ತುತ ರಾಜ್ಯದಲ್ಲಿ 12,614 ಸನ್ನದುಗಳಿವೆ. ಈ ಪೈಕಿ 3635 ಬಾರ್‌ ಅಂಡ್‌ ರೆಸ್ಟೋರೆಂಟ್‌, 3988-ಸಿಎಲ್‌-2 ಸನ್ನದು, 1040 ಸಿಎಲ್‌11ಸಿ ಮದ್ಯದಂಗಡಿಗಳಿರುತ್ತವೆ ಎಂದರು.

2022-23ನೇ ಸಾಲಿನಲ್ಲಿ ಸನ್ನದು ಶುಲ್ಕ, ಹೆಚ್ಚುವರಿ ಶುಲ್ಕ, ದಂಡ ಮತ್ತು ಮುಟ್ಟುಗೋಲು ರೂಪದಲ್ಲಿ 679.38 ಕೋಟಿ ರು. ಅಬಕಾರಿ ರಾಜಸ್ವ ಸಂಗ್ರಹವಾಗಿರುತ್ತದೆ ಎಂದು ಅವರು ಉತ್ತರಿಸಿದರು.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಎಂಎಸ್‌ಐಎಲ್‌ ಮಳಿಗೆಗೆ ಸನ್ನದು ಮಂಜೂರು ಮಾಡಲಾಗುವುದು. 2009ರಲ್ಲಿ 463ಸನ್ನದು ಹಂಚಿಕೆ ಮಾಡಲಾಗಿದೆ. 2016ರಲ್ಲಿ ಹೆಚ್ಚುವರಿಯಾಗಿ 900 ಸನ್ನದುಗಳನ್ನು ಮಂಜೂರು ಮಾಡಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಬಾಕಿ ಉಳಿದಿರುವ 441 ಸನ್ನದುಗಳನ್ನು ವಿವಿಧ ಷರತ್ತಿನ ಮೇಲೆ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಕ್‌ ಸ್ವಾತಂತ್ರ್ಯ ಕಡಿವಾಣಕ್ಕೆ ದ್ವೇಷ ಭಾಷಣ ಮಸೂದೆ: ಆರ್.ಅಶೋಕ್ ಕಿಡಿ
ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌