3 ತಿಂಗಳ ವಿವಿಧ ದಿನಗಳಂದು18 ರೈಲುಗಳ ಸಂಚಾರ ರದ್ದು ರದ್ದಾದ ರೈಲುಗಳ ಪಟ್ಟಿ ಇಲ್ಲದೆ!

Published : Dec 02, 2023, 06:05 AM ISTUpdated : Dec 02, 2023, 10:36 AM IST
3 ತಿಂಗಳ ವಿವಿಧ ದಿನಗಳಂದು18 ರೈಲುಗಳ ಸಂಚಾರ ರದ್ದು ರದ್ದಾದ ರೈಲುಗಳ ಪಟ್ಟಿ ಇಲ್ಲದೆ!

ಸಾರಾಂಶ

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದುಗೊಳಿಸಲಾಗಿದೆ.

ಬೆಂಗಳೂರು (ಡಿ.2) :  ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದಲ್ಲಿ ಸುರಕ್ಷತಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ 18 ರೈಲುಗಳ ಸಂಚಾರವನ್ನು ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ತಿಂಗಳುಗಳ ವಿವಿಧ ದಿನಾಂಕಗಳಂದು ರದ್ದುಗೊಳಿಸಲಾಗಿದೆ.

ಮೂರು ತಿಂಗಳ ಕಾಲ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಅದರ ಜತೆಗೆ 6 ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದ್ದು, 30 ರೈಲುಗಳ ಮಾರ್ಗ ಬದಲಿಸಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ ಕ್ರಮ ಕೈಗೊಂಡಿದೆ.

ಬೆಂಗಳೂರು: ನಗರ ಸುತ್ತ 287 ಕಿ.ಮೀ ರಿಂಗ್‌ರೈಲ್‌ ನಿರ್ಮಾಣ: ಕೇಂದ್ರ ಸಚಿವ ವೈಷ್ಣವ್

ಸಂಚಾರ ರದ್ದುಗೊಳ್ಳುತ್ತಿರುವ ರೈಲುಗಳ ವಿವರ, ದಿನಾಂಕ

*ಕೊಯಮತ್ತೂರು-ಹಜರತ್‌ ನಿಜಾಮುದ್ದೀನ್‌ ಕೊಂಗು ಎಕ್ಸ್‌ಪ್ರೆಸ್‌: ಡಿ.10, 17, 24, 31, ಜ.7, 14, 21, 28, ಫೆ.4

*ಡಾ। ಎಂಜಿಆರ್‌ ಚೆನ್ನೈ ಸೆಂಟ್ರಲ್‌-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌: ಡಿ.6, 13, 20, 27, ಜ.3, 10, 17, 24, 31, ಫೆ.7

*ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು-ಅಗ್ಥೋರಿ ಪಾರ್ಸೆಲ್‌ ಎಕ್ಸ್‌ಪ್ರೆಸ್‌: ಡಿ.7, 14, 21, 28, ಜ.4, 11, 18, 25, ಫೆ.1, 8

*ಯಶವಂತಪುರ-ಡಾ। ಅಂಬೇಡ್ಕರ್‌ ನಗರ ಎಕ್ಸ್‌ಪ್ರೆಸ್‌: ಡಿ.12, 19, 26, ಜ.2, 9, 16, 23, 30, ಫೆ.6

*ಯಶವಂತಪುರ-ಮಚೇಲಿಪಟ್ಟಣ ಕೋಂಡವೀಡು ಎಕ್ಸ್‌ಪ್ರೆಸ್‌: ಡಿ.9, 12, 14, 16, 19, 21, 23, 25, 28, 30, ಜ.2, 4, 6, 9, 11, 13, 16, 18, 20, 23, 25, 27, 30, ಫೆ.1, 3, 5, 8

*ಯಶವಂತಪುರ-ಸಿಕಂದರಾಬಾದ್ ಗರೀಬ್‌ ರಥ ಎಕ್ಸ್‌ಪ್ರೆಸ್‌: ಡಿ.9, 11, 14, 16, 18, 21, 23, 25, 28, 30, ಜ.1, 4, 6, 8, 11, 13, 15, 18, 22, 25, 27, 29, ಫೆ.1, 3, 5, 8

*ಸಾಯಿನಗರ ಶಿರಡಿ-ಡಾ. ಎಂಜಿಆರ್‌ ಚೆನ್ನೈ ಸೆಂಟ್ರಲ್‌: ಡಿ.8, 15, 22, 29, ಜ.5, 12, 19, 26, ಫೆ.2, 9

*ಹಜರತ್‌ ನಿಜಾಮುದ್ದೀನ್‌-ಕೊಯಮತ್ತೂರು ಎಕ್ಸ್‌ಪ್ರೆಸ್‌: ಡಿ.13, 20, 27, ಜ.3, 10, 17, 24, 31, ಫೆ.7

*ಅಗ್ತೋರಿ-ಎಸ್‌ಎಂವಿಟಿ ಬೆಂಗಳೂರು ಪಾರ್ಸೆಲ್‌ ಎಕ್ಸ್‌ಪ್ರೆಸ್‌: ಡಿ.11, 18, 25, ಜ.1, 8, 15, 22, 29, ಫೆ.5, 12

*ಡಾ। ಅಂಬೇಡ್ಕರ್‌ನಗರ-ಯಶವಂತಪುರ ಎಕ್ಸ್‌ಪ್ರೆಸ್‌: ಡಿ.10, 17, 24, 31, ಜ.7, 14, 21, 28, ಫೆ.4

*ಮಚಲಿಪಟ್ಟಣ-ಯಶವಂತಪುರ ಎಕ್ಸ್‌ಪ್ರೆಸ್‌: ಡಿ.8, 11, 13, 15, 18, 20, 22, 25, 27, 29, ಜ.1, 3, 5, 8, 10, 12, 15, 17, 19, 22, 24, 26, 29, 31, ಫೆ.2, 5, 7

*ಸಿಕಂದರಾಬಾದ್-ಯಶವಂತಪುರ ಗರೀಬ್‌ ರಥ ಎಕ್ಸ್‌ಪ್ರೆಸ್‌: ಡಿ.8, 10, 13, 15, 17, 20, 22, 24, 27, 29, 31, ಜ.3, 5, 7, 10, 12, 14, 17, 19, 21, 24, 26, 28, 31, ಫೆ.2, 4, 7

*ಧರ್ಮಾವರಂ-ಕೆಎಸ್‌ಆರ್‌ ಬೆಂಗಳೂರು: ಡಿ.12ರಿಂದ ಫೆ. 8ರವರೆಗೆ

*ಗುಂತಕಲ್‌-ಹಿಂದೂಪುರ ಡೆಮು: ಡಿ.7ರಿಂದ ಫೆ.8ರವರೆಗೆ

*ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯ-ಕೆಎಸ್‌ಆರ್‌ ಬೆಂಗಳೂರು ಮೆಮು ಸ್ಪೆಷಲ್‌: ಡಿ.8ರಿಂದ ಫೆ.8ರವರೆಗೆ

*ಕೆಆರ್‌ಎಸ್‌ ಬೆಂಗಳೂರು-ಧರ್ಮಾವರಂ ಮೆಮು: ಡಿ.8ರಿಂದ ಫೆ.8ರವರೆಗೆ

*ಹಿಂದೂಪುರ-ಗುಂತಕಲ್‌ ಡೆಮು: ಡಿ.8ರಿಂದ ಫೆ.9ರವರೆಗೆ

*ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮೆಮು: ಡಿ.8ರಿಂದ ಫೆ.2ರವರೆಗೆ 

ಜನರಲ್‌ ಬೋಗಿ, ಸ್ಲೀಪರ್ ಕೋಚ್‌ ಸಂಖ್ಯೆ ಕಡಿತಗೊಳಿಸಿದ್ದೇ ರೈಲುಗಳಲ್ಲಿ ಜನದಟ್ಟಣೆಗೆ ಕಾರಣ? ರೈಲ್ವೆ ಸಚಿವರ ಸ್ಪಷ್ಟನೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್