ಲೇಔಟ್‌ಗೆ ಬಿಟ್ಟುಕೊಟ್ಟ ಜಾಗದ ಮೇಲೆ ಮಾಲೀಕರಿಗೆ ಹಕ್ಕಿಲ್ಲ: ಹೈಕೋರ್ಟ್‌

By Kannadaprabha NewsFirst Published Dec 2, 2023, 5:55 AM IST
Highlights

ಖಾಸಗಿ ಲೇಔಟ್‌ ನಿರ್ಮಾಣದ ವೇಳೆ ರಸ್ತೆ ಮತ್ತು ಇತರೆ ಸೌಲಭ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಬಿಟ್ಟುಕೊಟ್ಟ ಜಾಗದ ಮೇಲೆ ಭೂ ಮಾಲೀಕರಿಗಾಗಲೇ ಅಥವಾ ಲೇಔಟ್‌ ನಿರ್ಮಾಣದಾರರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರು (ಡಿ.2) :  ಖಾಸಗಿ ಲೇಔಟ್‌ ನಿರ್ಮಾಣದ ವೇಳೆ ರಸ್ತೆ ಮತ್ತು ಇತರೆ ಸೌಲಭ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಬಿಟ್ಟುಕೊಟ್ಟ ಜಾಗದ ಮೇಲೆ ಭೂ ಮಾಲೀಕರಿಗಾಗಲೇ ಅಥವಾ ಲೇಔಟ್‌ ನಿರ್ಮಾಣದಾರರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಳ್ಳಂದೂರು ಹೊರ ವರ್ತುಲದ ನಿವಾಸಿ ಪಬ್ಬಾ ರೆಡ್ಡಿ ಕೋದಂಡರಾಮಿ ರೆಡ್ಡಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಹೀಗೆ ಸ್ಪಷ್ಟಪಡಿಸಿದೆ.

Latest Videos

News Hour: ಮೇಲ್ಮನವಿ ವಾಪಾಸ್‌ ಪಡೆದ ಡಿಕೆಡಿ, ಜೈಲಿಗೆ ಹೋಗೋಕೆ ರೆಡಿಯಾಗಿ ಎಂದ ಬಿಜೆಪಿ!

ಆನೇಕಲ್‌ ತಾಲೂಕಿನ ಇಡ್ಲುಬೆಲೆ ಗ್ರಾಮದಲ್ಲಿ ಸುಮಾರು 11 ಎಕರೆ ಜಮೀನಿನಲ್ಲಿ ಲೇಔಟ್‌ ನಿರ್ಮಾಣಕ್ಕೆ ಉಪಕಾರ್‌ ರೆಸಿಡೆನ್ಸಿ ಪ್ರೆ.ಲಿ., ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿತ್ತು. ಆ ಜಾಗದ ಪಕ್ಕದಲ್ಲಿರುವ 14 ಎಕರೆ ಜಾಗದಲ್ಲಿ ಮೇಲ್ಮನವಿದಾರ ಪಬ್ಬಾರೆಡ್ಡಿ ಅವರು ಲೇಔಟ್‌ ನಿರ್ಮಾಣ ಮಾಡಿದ್ದಾರೆ. ಬಡಾವಣೆಯ ಸ್ವಲ್ಪ ಜಾಗವನ್ನು ಉದ್ಯಾನ ಮತ್ತು ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಯ ಸುಪರ್ದಿಗೆ ನೀಡಿದ್ದಾರೆ. ಅದರಂತೆ ಬಡಾವಣೆಯಲ್ಲಿ ವಿವಿಧ ರಸ್ತೆ ನಿರ್ಮಿಸಲಾಗಿದೆ.

ರಸ್ತೆ ನಿರ್ಮಾಣದ ನಂತರ ಬಡಾವಣೆ ಸುತ್ತಲೂ ಕಾಂಪೌಂಡ್‌ ನಿರ್ಮಿಸಿದ್ದರು. ಇದರಿಂದ ಉತ್ತರ ಭಾಗದಲ್ಲಿರುವರಿಗೆ ತಮ್ಮ ಆಸ್ತಿಗೆ ಪ್ರವೇಶಿಸಲು ಹಾಗೂ ನಿರ್ಗಮಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉಪಕಾರ್‌ ರೆಸಿಡೆನ್ಸಿ, ತಡೆಗೋಡೆಯನ್ನು ತೆರವುಗೊಳಿಸಲು ನಿರ್ದೇಶಿಸಬೇಕು. ತಮ್ಮ ಜಮೀನಿಗೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಅಡ್ಡಿಪಡಿಸುವುದಕ್ಕೆ ಪಬ್ಬಾರೆಡ್ಡಿಗೆ ಅಧಿಕಾರವಿಲ್ಲ ಎಂಬುದಾಗಿ ಘೋಷಿಸಬೇಕು ಎಂದು ಕೋರಿದ್ದರು.

ಈ ಅರ್ಜಿ ಪುರಸ್ಕರಿಸಿದ್ದ ಏಕ ಸದಸ್ಯ ನ್ಯಾಯಪೀಠ, ಅನುಮೋದಿತ ಬಡಾವಣೆಯಲ್ಲಿ ಸಾರ್ವಜನಿಕರ ಪ್ರವೇಶ ಮಾಡಲು ಮತ್ತು ಹೊರಹೋಗುವ ಹಕ್ಕಿದೆ. ಸಾರ್ವಜನಿಕರ ರಸ್ತೆಗಳ ಬಳಕೆಯನ್ನು ತಡೆಯಲು ಪಬ್ಬಾ ರೆಡ್ಡಿ ಅವರಿಗೆ ಸಾಧ್ಯವಿಲ್ಲ ಎಂದು 2022ರ ನ.29ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪಬ್ಬಾ ರೆಡ್ಡಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಭ್ರಷ್ಟಾಚಾರದ ಕೇಸಿದೆ ಎಂದು ಪಿಂಚಣಿ ನಿಲ್ಲಿಸುವಂತಿಲ್ಲ: ಹೈಕೋರ್ಟ್

ಈ ಮೇಲ್ಮನವಿ ವಜಾಗೊಳಿಸಿರುವ ಹೈಕೋರ್ಟ್‌, ಬಡಾವಣೆಯ ಜಾಗವನ್ನು ರಸ್ತೆಗಳು ಮತ್ತು ಸಾರ್ವಜನಿಕ ಸೌಕರ್ಯ ಕಲ್ಪಿಸಲು ಸ್ಥಳೀಯ ಸಂಸ್ಥೆಗೆ ನೀಡಿದ ನಂತರ ಆ ಜಾಗದ ಮೇಲೆ ಭೂ ಮಾಲೀಕರು ಹಾಗೂ ಬಡಾವಣೆ ನಿರ್ಮಾಣದಾರರಿಗೆ ಹಕ್ಕು ಇರುವುದಿಲ್ಲ. ಸಾರ್ವಜನಿಕ ಸೌಕರ್ಯಗಳನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ವಹಿಸುತ್ತಾರೆ. ಅವರು ಎಲ್ಲಾ ಸಾರ್ವಜನಿಕರಿಗೆ ಬಳಸಲು ಅನುಮತಿಸುತ್ತಾರೆ ಎಂದು ಪೀಠ ಹೇಳಿದೆ.

click me!