ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!

ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!

Published : Apr 20, 2026, 06:26 PM IST

ಕಾರವಾರ ಬ್ಯೂಟಿ ಸಾಧ್ವಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಕೂಡ ಹೌದು. ಕರಾವಳಿ ಬೆಡಗಿ ಸಾಧ್ವಿ ಸತೀಶ್ ಮಿಸ್ ಇಂಡಿಯಾ ಕಿರೀಟ ಗಳಿಸಿದ್ದು ಹೇಗೆ..? ಈ ವೇದಿಕೆಯವರೆಗಿನ ಸಾಧ್ವಿ ಪಯಣ ಹೇಗಿತ್ತು?

ಕಾರವಾರ ಬ್ಯೂಟಿ ಈಗ ಸೌಂದರ್ಯ ಸಾಮ್ರಾಜ್ಯದ ಒಡತಿ..! 30 ರಾಜ್ಯ, 30 ಸುಂದರಿಯರ ನಡುವೆ ಶೈನ್ ಆದ  ಸಾಧ್ವಿ ಸೈಲ್..!, ಮಿಸ್ ಇಂಡಿಯಾ  ಪಟ್ಟ ಪಡೆದ  ಕಾರವಾರ MLA ಪುತ್ರಿ..! ಮಿಸ್ ವರ್ಲ್ಡ್ ಗುರಿ.. ಐಶ್ವರ್ಯ ರೈ ಸ್ಥಾನ ತುಂಬಲು ಸಾಧ್ವಿ ರೆಡಿ..! ಇದೇ ಈ ಹೊತ್ತಿನ ವಿಶೇಷ ಕರಾವಳಿ ಸುಂದರಿ ಮಿಸ್ ಇಂಡಿಯಾ ಗರಿ. ಸೌಂದರ್ಯ ಅನ್ನೋದು ಕೇವಲ ಬಾಹ್ಯ ರೂಪವಲ್ಲ, ಅದು ವ್ಯಕ್ತಿತ್ವದ ಪ್ರತಿಬಿಂಬ. ಈ ಮಾತನ್ನ ನಮ್ಮ ಕಾರವಾರದ ಹುಡುಗಿ ಸಾಧ್ವಿ ಸತೀಶ್ ಸೈಲ್ ಸಾಬೀತುಪಡಿಸಿದ್ದಾರೆ.

61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳ ಸುಂದರಿಯರನ್ನ ಹಿಂದಿಕ್ಕಿ, 'ಮಿಸ್ ಇಂಡಿಯಾ ವರ್ಲ್ಡ್ 2026' ಕಿರೀಟವನ್ನ ಸಾಧ್ವಿ ಮುಡಿಗೇರಿಸಿಕೊಂಡಿದ್ದಾರೆ. ಸಾಧ್ವಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಕೂಡ ಹೌದು. ಕರಾವಳಿ ಬೆಡಗಿ ಸಾಧ್ವಿ ಸತೀಶ್ ಮಿಸ್ ಇಂಡಿಯಾ ಕಿರೀಟ ಗಳಿಸಿದ್ದು ಹೇಗೆ..? ಈ ವೇದಿಕೆಯವರೆಗಿನ ಸಾಧ್ವಿ ಪಯಣ ಹೇಗಿತ್ತು? ಈ ಹಿಂದೆ ಮಿಸ್ ಇಂಡಿಯಾ ಕಿರೀಟ ಗೆದ್ದು, ವಿಶ್ವ ಸುಂದರಿ ಪಟ್ಟ ಪಡೆದ ಐಶ್ವರ್ಯ ರೈ ಕೂಡ ಕನ್ನಡದ ಕರಾವಳಿಯ ಸುಂದರಿ.

ಅಂತೆಯೇ ಸಾಧ್ವಿ ಸೈಲ್​​ರನ್ನ ಐಶ್ ಜೊತೆ ಹೋಲಿಕೆ ಮಾಡಲಾಗ್ತಾ ಇದೆ. ವಿಶ್ವ ಸುಂದರಿ ಸ್ಪರ್ಧೆಗೆ ಎಂಟ್ರಿ ಪಡೆದಿರೋ ಸಾಧ್ವಿ, ಐಶ್ವರ್ಯ ರೈ ಸ್ಥಾನ ತುಂಬ್ತಾರಾ..? ಮಿಸ್ ಇಂಡಿಯಾ ಮತ್ತು ಮಿಸ್ ವರ್ಲ್ಡ್ ಸ್ಪರ್ಧೆಗಳು ಕೇವಲ ಸೌಂದರ್ಯದ ಪ್ರದರ್ಶನವಲ್ಲ.  ಇವು ಒಬ್ಬ ಯುವತಿಯ ತಾಳ್ಮೆ, ಬುದ್ಧಿವಂತಿಕೆ ಮತ್ತು ಶಿಸ್ತಿನ ಕಠಿಣ ಪರೀಕ್ಷೆಗಳಾಗಿರುತ್ತವೆ. ಸದ್ಯ ಇಂಥಾ ಪರೀಕ್ಷೆಗಳನ್ನ ಗೆದ್ದು ಸಾಧ್ವಿ ಮಿಸ್ ಇಂಡಿಯಾ ಆಗಿದ್ದಾರೆ. ಮಿಸ್ ವರ್ಲ್ಡ್ ಆಗೋದಕ್ಕೂ ಸಜ್ಜಾಗಿದ್ದಾರೆ.

21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
Read more