ಮುಡಾ ಹಗರಣದ ವಿರುದ್ಧ ಹೋರಾಟದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪ್ರಧಾನಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರು ಬೆದರಿಕೆ ಹಾಕಿರುವುದಾಗಿ ಮತ್ತು ರಾಜ್ಯ ಸರ್ಕಾರ ರಕ್ಷಣೆ ನೀಡದ ಕಾರಣ ಕೇಂದ್ರದಿಂದ ರಕ್ಷಣೆ ಕೋರಿದ್ದಾರೆ.
ಮೈಸೂರು (ಡಿ.27) : ಮುಡಾ ಹಗರಣದ ವಿರುದ್ಧ ಹೋರಾಟ ಮಾಡಿದ್ದಕ್ಕೆ ನನಗೆ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ ರಕ್ಷಣೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಡಿ.26ರಂದು ಸ್ನೇಹಮಯಿ ಕೃಷ್ಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮುನ್ನ ರಕ್ಷಣೆ ಕೋರಿ ಮೈಸೂರು ಕಮಿಷನರ್‌ಗೆ ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದೆ. ಆದರೆ ಮೈಸೂರು ಕಮಿಷನರ್ ಇದುವರೆಗೆ ಯಾವ ಭದ್ರತೆ ನೀಡಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಜೀವ ಬೆದರಿಕೆ ಇರುವ ಹಿನ್ನೆಲೆ ನನಗೆ ನನ್ನ ಕುಟುಂಬಕ್ಕೆ ರಕ್ಷಣೆ ಬೇಕಿದೆ. ಇಲ್ಲಿನ ಸರ್ಕಾರ ಯಾವುದೇ ಭದ್ರತೆ ನೀಡದ ಹಿನ್ನೆಲೆ ಕೇಂದ್ರ ಸರ್ಕಾರ ರಕ್ಷಣೆ ನೀಡಬೇಕು ಎಂದು ಪತ್ರ ಬರೆದಿದ್ದೇನೆ ಎಂದರು.
undefined
ಮೈಸೂರಿನ ಐತಿಹಾಸಿಕ ರಸ್ತೆಗೆ ಮುಡಾ ಆರೋಪಿ ಸಿದ್ದರಾಮಯ್ಯರ ಹೆಸರಿಡುವುದು ವಿಷಾದನೀಯ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್ ಮುಖಂಡನ ಧಮ್ಕಿ
ಕಾಂಗ್ರೆಸ್ ಮುಖಂಡ ಧಮ್ಕಿ ಹಾಕಿದರ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸ್ನೇಹಮಯಿ ಕೃಷ್ಣ, ಕಾಂಗ್ರೆಸ್ ಮುಖಂಡನಿಂದ ಸತ್ಯ ಹೊರಬಂದಿದೆ. ನಾನು ಹಿಂದೆಯೇ ಹೇಳಿದ್ದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತಿರುವುಕ್ಕೆ ನನಗೆ ಜೀವ ಬೆದರಿಕೆ ಬಂದಿದೆ ಎಂದು. ಈಗ ಕಾಂಗ್ರೆಸ್ ಮುಖಂಡನ ಬಹಿರಂಗ ಜೀವ ಬೆದರಿಕೆಯೊಡ್ಡಿರುವುದು ಸಾಕ್ಷಿಯಾಗಿದೆ. ರಾಜ್ಯದ ಜನತೆಗೆ ಸತ್ಯವನ್ನು ತಿಳಿಸಲು, ದೊಡ್ಡ ಮಟ್ಟದ ಭ್ರಷ್ಟಾಚಾರ ತೊಡೆದುಹಾಕಲು ನನ್ನ ಜೀವ-ಜೀವನ ತ್ಯಾಗಕ್ಕೂ ಸಿದ್ಧವಿದ್ದೇನೆ ಎಂದಿದ್ದಾರೆ.
ನನ್ನ ಜೀವಕ್ಕೆ ಅಪಾಯವಾದ್ರೆ ಸಿಎಂ, ಡಿಜಿಪಿ, ಕಮಿಷನರ್ ಕಾರಣ:
ನನಗೆ ಧಮ್ಕಿ ಹಾಕಿರುವವನು ಶಾಸಕ ತನ್ವೀರ್ ಸೇಠ್‌ನ ಆಪ್ತ ಸಹಾಯಕ ಎಂಬುದು ಗೊತ್ತಿದೆ. ಇದೆಲ್ಲವೂ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದನ್ನ ತೋರಿಸುತ್ತದೆ. ನನಗೆ ಜೀವ ಬೆದರಿಕೆಯಿದೆ ಎಂದು ಹಿಂದೆಯೇ ಹೇಳಿದ್ದೇನೆ. ಇದಕ್ಕೆ ತನ್ವಿರ್ ಸೇಠ್ ಆಪ್ತ ಸಹಾಯಕ ಮಂಜುನಾಥ ಅವರ ವಿಡಿಯೋ ಬಲವಾದ ಸಾಕ್ಷಿಯಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ, ಡಿಜಿಪಿ ಹಾಗೂ ಮೈಸೂರು ಪೊಲೀಸ್ ಕಮಿಷನರ್ ಕಾರಣರಾಗ್ತಾರೆ.
ಮುಡಾ ಪ್ರಕರಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಮುಖಂಡನಿಂದಲೇ ಸ್ನೇಹಮಯಿ ಕೃಷ್ಣಗೆ ಆಮಿಷ?!
ಏಕೆಂದರೆ ಈ ರೀತಿ ಬಹಿರಂಗ ಬೆದರಿಕೆಯೊಡ್ಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು. ಮಂಜುನಾಥ ಯಾರೆಂದು ನನಗೆ ಗೊತ್ತಿದೆ ಆದರೆ ನಾನು ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಅವರೂ ಕೂಡ ನನ್ನ ಮೇಲೆ ಯಾವುದೇ ದೂರು ನೀಡಿಲ್ಲ. ಪೊಲೀಸರು ಕೂಡ ನನ್ನನ್ನ 15 ದಿನ ಜೈಲಿನಲ್ಲಿ ಇಟ್ಟಿಲ್ಲ. ಆದರೆ ಮಂಜುನಾಥ್ ಮಾತುಗಳನ್ನ ಕೇಳಿದ್ರೆ ಎಲ್ಲವೂ ಗೊತ್ತಾಗುತ್ತೆ. ನಾನು ಮಾಡಿದ ಆರೋಪಗಳಿಗೆ ಬಲವಾದ ಸಾಕ್ಷಿಯಾಗುತ್ತೆ. ನನಗೆ ರಕ್ಷಣೆ ಕೊಡುವಂತೆ ಮನವಿ ಪೊಲೀಸರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಆದರೂ ಇದುವರೆಗೆ ಯಾವುದೇ ರಕ್ಷಣೆ ಕೊಟ್ಟಿಲ್ಲ. ಹೀಗಾಗಿ ನನ್ನ ಜೀವಕ್ಕೆ ಅಪಾಯವಾದರೆ ಅದಕ್ಕೆ ಮೇಲಿನ ಎಲ್ಲರೂ ನೇರ ಕಾರಣರಾಗುತ್ತಾರೆ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.