ಮನಮೋಹನ್ ಸಿಂಗ್ ನಿಧನಕ್ಕೆ ಶಾಲೆಗಳಿಗೆ ರಜೆ; ಕೆರೆಗೆ ಈಜಾಡಲು ಹೋಗಿದ್ದ ವಿದ್ಯಾರ್ಥಿ ಕಣ್ಮರೆ!

Published : Dec 27, 2024, 07:35 PM IST
ಮನಮೋಹನ್ ಸಿಂಗ್ ನಿಧನಕ್ಕೆ ಶಾಲೆಗಳಿಗೆ ರಜೆ; ಕೆರೆಗೆ ಈಜಾಡಲು ಹೋಗಿದ್ದ ವಿದ್ಯಾರ್ಥಿ ಕಣ್ಮರೆ!

ಸಾರಾಂಶ

ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿ ಬಾವಿಯಲ್ಲಿ ಈಜಲು ಹೋಗಿ 8ನೇ ತರಗತಿ ವಿದ್ಯಾರ್ಥಿ ಮುಳುಗಿ ಕಣ್ಮರೆಯಾಗಿದ್ದಾನೆ. ರಜೆ ದಿನದಂದು ಸ್ನೇಹಿತರೊಂದಿಗೆ ಹೋಗಿದ್ದ ಬಾಲಕ ವಾಪಸ್ಸಾಗದ ಕಾರಣ, ಬಾವಿಯ ಬಳಿ ಬಾಲಕನ ಚಪ್ಪಲಿ ಮತ್ತು ಟೀಶರ್ಟ್ ಪತ್ತೆಯಾಗಿದೆ.

ಶಿವಮೊಗ್ಗ (ಡಿ.27): ಬಾವಿಯಲ್ಲಿ ಈಜಲು ಹೋಗಿ 8ನೇ ತರಗತಿ ವಿದ್ಯಾರ್ಥಿ ಮುಳುಗಿ ಕಣ್ಮರೆಯಾಗಿರುವ ಘಟನೆ ಶಿವಮೊಗ್ಗದ ರಾಗಿಗುಡ್ಡ ಬಡಾವಣೆಯಲ್ಲಿ ನಡೆದಿದೆ.

ಅಪ್ನಾನ್ (14) ಕಣ್ಮರೆಯಾಗಿರುವ ಯುವಕ. ಶಿವಮೊಗ್ಗದ ಎನ್‌ಇಎಸ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ. ಇಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನದ ಹಿನ್ನೆಲೆ ಗೌರವಾರ್ಥ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವ ಹಿನ್ನೆಲೆ ಬೆಳಗ್ಗೆ ಸುಮಾರು 11 ಗಂಟೆಗೆ ಮನೆಯಿಂದ ಮೂವರು ಸ್ನೇಹಿತರೊಂದಿಗೆ ಹೊರ ಹೋಗಿರುವ ವಿದ್ಯಾರ್ಥಿ, ಎಷ್ಟೊತ್ತಾದರೂ ಮನೆ ಬಾರದ ಹಿನ್ನೆಲೆ ಬಾಲಕನ ತಾಯಿ ನೂರ್ ಜಾನ್ ಉಳಿದ ಸ್ನೇಹಿತರನ್ನು ವಿಚಾರಿಸಿದ್ದಾರೆ. 

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆ!

ಈ ವೇಳೆ ಬಾವಿಗೆ ಈಜಾಡಲು ಹೋಗಿರುವ ವಿಷಯ ತಿಳಿಸಿದ್ದಾರೆ. ಕೊನೆಗೆ ಬಾವಿಯ ಬಳಿ ಹೋಗಿ ನೋಡಿದಾಗ ಅಲ್ಲಿ ಬಾಲಕನ ಚಪ್ಪಲಿ, ಟೀಶರ್ಟ್ ಪತ್ತೆಯಾಗಿವೆ. ಸುಮಾರು 50 ಅಡಿ ಆಳವಿರುವ ಬಾವಿ. ಈಜುಬಾರದೆ ಬಾವಿಯಲ್ಲೇ ಮುಳುಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆ ಸ್ಥಳಕ್ಕಅಗ್ನಿಶಾಮಕ ದಳದ ದೌಡಾಯಿಸಿದ್ದು ಬಾವಿಯಲ್ಲಿರುವ ನೀರು ಹೊರ ತೆಗೆಯುವ ಕಾರ್ಯ ನಡೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ