ಗಂಡಸ್ತನ ಇದ್ರೆ ಶಾರುಖ್ ಮಗಳಿಗೆ ಹಿಜಾಬ್ ತೋಡಿಸಿ: RSS ಹಣಮಂತ ಮಳಲಿ

By Suvarna News  |  First Published Apr 12, 2022, 5:57 PM IST
  • ಹಿಂದೂಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು
  • ಕಲ್ಲಂಗಡಿಯವರಿಗೆ 10 ಸಾವಿರ ರೂ. ಕೊಟ್ರಲಾ ಅವರು ನಿಮ್ಮ ಅಕ್ಕನ ಮಕ್ಕಳಾ..?
  • ಹಿಂದೂಗಳು ಮನಸ್ಸು ಮಾಡಿದ್ರೆ ಒಂದೇ ವಾರಕ್ಕೆ ನಿಮ್ಮ ಹುಡ್ಗಿರ್ ಸಾಕಾಗಲ್ಲ

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ(ಏ.12): ರಾಜ್ಯದಲ್ಲಿ ಧರ್ಮ ದಂಗಲ್ ವಿವಾದ ಜೋರಾಗಿಯೇ ನಡಿತಾ ಇದೆ. ಈ ವಿವಾದದ ನಡುವೆ ಯಾದಗಿರಿಯ ಸೈದಾಪುರದಲ್ಲಿ ರಾಮೋತ್ಸವ ಹಾಗೂ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ  RSS ಮುಖಂಡ ಡಾ. ಹಣಮಂತ ಮಳಲಿ (RSS Leader Hanumantha Malali ) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಯಾವುದೇ ಕಾರಣಕ್ಕೂ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು, ಏಕರೂಪ ನಾಗರಿಕ ಸಂಹಿತೆ ಜಾರಿ ಆಗುವವರೆಗೂ ಎರಡೂ ಇದ್ದವರು ಮೂರು, ಮೂರು ಇದ್ದವರು ನಾಲ್ಕು, ನಾಲ್ಕು ಇದ್ದವರು ಐದು ಮಕ್ಕಳನ್ನು ಹಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡದ್ದಾರೆ. 

Tap to resize

Latest Videos

undefined

ಗಂಡಸ್ತನ ಇದ್ರೆ ಶಾರುಖ್ ಖಾನ್ ಮಗಳಿಗೆ ಹಿಜಾಬ್ ಹಾಕಿಸಿ: ರಾಜ್ಯದಲ್ಲಿ ಹಿಜಾಬ್ (Hijab) ಪ್ರಕರಣದ ಬಗ್ಗೆ RSS ಮುಖಂಡ ಹಣಮಂತ ಮಳಲಿ ಆಕ್ರೋಶ ವ್ಯಕ್ತಪಡಿಸಿದ್ದು, ಇವರಿಗೆ ಗಂಡಸ್ತನ ಇದ್ರೆ ಸಿನಿಮಾ ನಟಿಯರಿಗೆ, ಶಾರುಖ್ ಖಾನ್ (Shah Rukh Khan) ಮಗಳಿಗೆ ಹಿಜಾಬ್ ತೋಡಿಸೋಕೆ ಗಂಡಸ್ತನ‌‌ ಇಲ್ವಾ..! ಬಡವರ ಮಕ್ಕಳಿಗೆ ಹಿಜಾಬ್ ಹಾಕಿಸಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದಿರಾ..? ಮೊದಲು ಕಾನೂನಿಗೆ ಗೌರವ ಕೊಡಿ, ಕೋರ್ಟ್ ಆದೇಶ ಪಾಲನೆ ಮಾಡಿ. ಶಾಲೆಯಲ್ಲಿ ಸಮವಸ್ತ್ರ ಪಾಲನೆ ಮಾಡಬೇಕೆಂದು ಕೋರ್ಟ್ ಹೇಳಿದೆ. ಹಿಜಾಬ್ ವಿವಾದ ಸೃಷ್ಟಿ ಮಾಡಿದ ಮುಸ್ಲಿಂ ರಿಂದ ಹಿಂದುಗಳು ಎಚ್ಚರ ಆಗಿದ್ದಾರೆ. ಹಿಜಾಬ್ ನ್ನು ಮನೆಯಲ್ಲಾದರೂ ಹಾಕೊಳ್ಳಿ ಅಥವಾ ಅವರ ಅಪ್ಪನ  ಮುಂದೇನಾದರೂ ಹಾಕಿಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

BIDAR ಐತಿಹಾಸಿಕ ದೇಗುಲದಲ್ಲಿನ ಮೂರ್ತಿಗಳಿಗೆ ಕಿಡಿಗೇಡಿಗಳಿಂದ ಹಾನಿ

ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಟ್ರೆ ನಡೆಯಲ್ಲ: ರಾಜ್ಯದಲ್ಲಿ ಧರ್ಮ-ಧರ್ಮಗಳ ನಡುವೆ ವ್ಯಾಪಾರ ಪೈಟ್ ಕೂಡ ಮುಂದುವರೆದಿದೆ. ಹಲವು ಕಡೆ ಮುಸಲ್ಮಾನರಿಗೆ ವ್ಯಾಪಾರಕ್ಕೆ ನಿರ್ಬಂಧ ಮಾಡಿದ್ದಾರೆ. ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ನುಂದೆ ನಡೆಯಲ್ಲ. ಇದರಿಂದ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತದೆ ಎಂದು ಎಚ್ಚರಿಕೆ ನೀಡದ್ರು, ಮುಸ್ಲಿಂ ಸಮುದಾಯದವರೇ ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ ನೀವೇ ಮೊದಲು ಹೇಳಿ ವಿವಾದ ಮಾಡಿದ್ದಿರಿ.

ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡ್ತಾರೆ: ರಾಜ್ಯದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇನ್ನೂ ಮುಂದೆ ನಡೆಯಲ್ಲ, ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡ್ತಿದ್ದಾರೆ. ನಮ್ಮ ಹುಡುಗರು ಮನಸ್ಸು ಮಾಡಿದ್ರೆ, ನಮ್ಮ ಹುಡುಗರಿಗೆ ಒಂದೇ ವಾರಕ್ಕೆ ಸಾಕಾಗಲ್ಲ, ದೇಶದಲ್ಲಿ ಮದುವೆಗೆ ಬಂದವರು 23 ಕೋಟಿ ಹಿಂದೂ ತರುಣರಿದ್ದಾರೆ, ನಮ್ಮ ರಾಮಣ್ಣನ ಕರೆದುಕೊಂಡು ಹೋಗಿ ರಾಬರ್ಟ್ ಮಾಡ್ತಿದ್ದಾರೆ. ನಮಗೆ ಅದು ಬೇಕಾಗಿಲ್ಲ, ನಾವು ಗಿಳಿ ತೆಗೆದುಕೊಂಡು ಹೋಗಿ, ಕಾಗಿ ಮಾಡಲ್ಲ, ಕಾಗಿ ತಗೊಂಡು ಹೋಗಿ ಗೀಳಿ ಮಾಡಲ್ಲ ಎಂದರು.

Koppala ಮುಳ್ಳಿನ ಮೇಲೆ ಭಕ್ತಿಯ ಪರಾಕಾಷ್ಠೆ

ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಮಳಲಿ ಆಕ್ರೋಶ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹಣಮಂತ ಮಳಲಿ ವಾಗ್ದಾಳಿ ನಡೆಸಿದರು. ಕಲ್ಲಂಗಡಿ ಹಣ್ಣು ಒಡೆದು ಹಾಕಿದ್ದಾರೆಂದು 10 ಸಾವಿರ ರೂಪಾಯಿ ಹಣ ಕೊಟ್ಟಿದ್ದಾನೆಂದು ಮಾಜಿ ಸಿಎಂ ಎಚ್ .ಡಿ.ಕೆ ಹೆಸರು ಹೇಳದೇ ಪರೋಕ್ಷ ವಾಗಿ ಹೆಚ್ಡಿಕೆ ವಿರುದ್ಧ ಕಿಡಿಕಾರಿದರು. ಅವರೇನು ಅವರ ಅಕ್ಕನ ಮಕ್ಕಳಾ..? ನಿಮಗೆ ಗಂಡಸ್ತನ ಇದ್ರೆ ಕಲ್ಲಂಗಡಿ ಅಷ್ಟೇ ಅಲ್ಲ‌. ಕಾಶ್ಮೀರದಲ್ಲಿ ನಮ್ಮ ಹಿಂದೂಗಳ ತಲೆ ಹೊಡೆದಿದ್ದಾರಲ್ಲೋ ಬಕ್ರಾ ನಿನಗೆ ಗೊತ್ತಲೇನೋ ನಾಚಿಕೆಗೇಡಿ, ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಇವರು ಬಹುಮಾನ ಕೊಟ್ಟು ಬರ್ತಾರೆ ಎಂದು ವಾಗ್ದಾಳಿ ನಡೆಸಿದರು.

click me!