ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

Published : Apr 12, 2022, 02:53 PM IST
ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಸಾರಾಂಶ

ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಚಾಲನೆ ನೀಡಿದರು. 

ವರದಿ -ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಏ.12): ಭೂಮಿಯ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಸದ್ಗುರು ಜಗ್ಗಿ ವಾಸುದೇವ್ (Jaggi  Vasudev) ಮಣ್ಣು ಉಳಿಸಿ ಅಭಿಯಾನವನ್ನು ( save soil movement) ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM basavaraj bommai ) ಉಡುಪಿಯಲ್ಲಿ (Udupi) ಚಾಲನೆ ನೀಡಿದರು. 

ಸದ್ಗುರು ಜಗ್ಗಿ ವಾಸುದೇವ್ ಈಗಾಗಲೇ ಕಾವೇರಿ ಉಳಿಸಿ (save cauvery) ಅಭಿಯಾನವನ್ನು ನಡೆಸುತ್ತಿದ್ದಾರೆ. ಕಾವೇರಿ ನದಿಯ ರಕ್ಷಣೆಗೆ ಈಗಾಗಲೇ ದೊಡ್ಡಮಟ್ಟದ ಅಭಿಯಾನ ನಡೆಯುತ್ತಿದೆ ಈ ನಡುವೆ ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಉಳಿಸಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. 

ಮಣಿಪಾಲದ ಕಾಯಿನ್ ಸರ್ಕಲ್ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಣ್ಣಿನ ಶ್ರೇಷ್ಠತೆಯ ಬಗ್ಗೆ ಅದರ ರಕ್ಷಣೆಯ ಬಗ್ಗೆ ಸದ್ಗುರು ಅನುಯಾಯಿಗಳ ಜೊತೆ ಮಾತನಾಡಿದರು. ಮಣ್ಣಿನ ರಕ್ಷಣೆ ಬಹಳ ಅಗತ್ಯ. ಸಾರ್ವಜನಿಕರಲ್ಲಿ ಮಣ್ಣಿನ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. 

Udupi fishermen community ಮೀನುಗಾರ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಬೊಮ್ಮಾಯಿ

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಸದ್ಗುರು ನಿಸರ್ಗದ ರಕ್ಷಣೆಗೆ ದೊಡ್ಡ ಅಭಿಯಾನ ಮಾಡುತ್ತಿದ್ದಾರೆ.  ಸೇವ್ ಕಾವೇರಿ, ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಶುರು ಮಾಡಿದ್ದಾರೆ. ಮಣ್ಣಿಗೂ ಮನುಷ್ಯರಿಗೂ ನೇರವಾದ ಸಂಬಂಧವಿದೆ.

ನಮ್ಮ ಬದುಕು ಮತ್ತು ಆಹಾರ ಮಣ್ಣಿಗೆ ಆಧಾರಿತವಾಗಿದೆ. ತಾಯಿ ಗರ್ಭ ಮತ್ತು ಭೂಗರ್ಭ ಬಹಳ ಮಹತ್ವದ್ದು. ಭೂಗರ್ಭವನ್ನು ಚೆನ್ನಾಗಿ ಕಾಪಾಡಲು ಮಣ್ಣಿನ ಅವಶ್ಯಕತೆ ಇದೆ. ಭೂಮಿ ಮತ್ತು ಮಣ್ಣನ್ನು ಕಾಪಾಡುವುದು ಮನುಷ್ಯನ ಆದ್ಯ ಕರ್ತವ್ಯ ಎಂದರು.

ಮಣ್ಣು ಉಳಿಸಿ ಅಭಿಯಾನದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ರಸ್ತೆ, ಕಾಯಿನ್ ಸರ್ಕಲ್, ಮಣಿಪಾಲ ನಗರ, ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಅಭಿಯಾನದ ಬೋರ್ಡ್ ಗಳನ್ನು, ಪೋಸ್ಟರ್ ಗಳನ್ನು ಹಿಡಿದು ಜನಜಾಗೃತಿ ಮಾಡಿದರು. ಉಡುಪಿ ಜಿಲ್ಲೆಯ ಬೇರೆ ಬೇರೆ ಶಾಲೆಗಳು ಸಂಸ್ಥೆಗಳಲ್ಲಿ ಈ ಬಗ್ಗೆ ಅಭಿಯಾನವನ್ನು ನಿರಂತರವಾಗಿ ಮುಂದುವರಿಸುವುದಾಗಿ ಪ್ರವೀಣ್ ಹೇಳಿದ್ದಾರೆ.

ನಾನು ಯಾವುದೇ ವಿವಾದದಲ್ಲಿ ಬೀಳಲು ಬಯಸುವುದಿಲ್ಲ Basavaraj Bommai

ಈ ಅಭಿಯಾನದ ಕುರಿತು: ಮಣ್ಣಿನ ಅಳಿವು ಜಾಗತಿಕ ಸಮಸ್ಯೆಯಾಗಿದೆ. ಒಂದು ಬಹುದೊಡ್ಡ ಅಪಾಯವೆಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಮುಂದೆ ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ಅತ್ಯಂತ ಸವಾಲಿನ ಸನ್ನಿವೇಶ ಸೃಷ್ಟಿಸಬಹುದು. ಕಾನ್ಶಿಯಸ್ ಪ್ಲಾನೆಟ್ ಮಣ್ಣು ಮತ್ತು ಭೂಮಿಯ ಕುರಿತು ಒಂದು ಪ್ರಜ್ಞಾಪೂರ್ವಕ ನಡೆಯನ್ನು ಹೊಂದುವಂತೆ ಪ್ರೇರೇಪಿಸುವ ಜಾಗತಿಕ ಅಭಿಯಾನವಾಗಿದೆ. 

300 ಕೋಟಿ ನಾಗರಿಕರ ಬೆಂಬಲವನ್ನು ಸಕ್ರಿಯಗೊಳಿಸಿ ಪ್ರದರ್ಶಿಸಲು ಸದ್ಗುರುಗಳು ಒಂಟಿಯಾಗಿ ಮೋಟಾರ್ ಸೈಕಲ್ನಲ್ಲಿ 27 ರಾಷ್ಟ್ರಗಳಲ್ಲಿ ಸಂಚರಿಸಲಿದ್ದಾರೆ. ಸುಮಾರು 30 ಸಾವಿರ ಕಿಲೋಮೀಟರ್ ಅವರ ಈ ಸಂಚಾರ ಇರಲಿದೆ. ಇದರಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದರೆ, ಪರಿಸರದ ಸಮಸ್ಯೆಗಳು ಚುನಾವಣಾ ವಿಷಯಗಳಾಗುತ್ತವೆ, ಇದರಿಂದ ಸರಕಾರಗಳು ಕಾರ್ಯನೀತಿಗಳನ್ನು ರಚಿಸಿ ಪರಿಸರ ಸಮಸ್ಯೆಯ ಪರಿಹಾರಗಳಿಗಾಗಿ ಬಜೆಟನ್ನು ನಿಗದಿಪಡಿಸಿ ಅನುಷ್ಠಾನಗೊಳಿಸುವಂತೆ ನೋಡಿಕೊಳ್ಳಲು ಸಹಾಯವಾಗಲಿದೆ ಎಂದು ಅಭಿಯಾನದ ಆಯೋಜಕರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ