ಸೂರಣಗಿ ಗ್ರಾಮದಲ್ಲಿ ಮೃತ ಅಭಿಮಾನಿಗಳ ಕುಟುಂಬದವರನ್ನು ಭೇಟಿ ಮಾಡಿ ಅವರನ್ನು ಸಂತೈಸಿದ ನಟ ಯಶ್, ಯಾವುದೇ ಕಾರಣಕ್ಕೂ ಅಭಿಮಾನದ ಹೆಸರಲ್ಲಿ ಜೀವ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಗದಗ (ಜ.8): ಮೃತ ಅಭಿಮಾನಿಗಳ ಕುಟುಂಬವನ್ನು ಭೇಟಿ ಮಾಡಿ ಮಾತನಾಡಿದ ನಟ ಯಶ್, ಬರ್ತ್‌ಡೇ ಬಂತು ಅಂದ್ರೆ ಭಯ ಆಗುತ್ತೆ, ಯಾಕಾದ್ರೂ ಇದು ಬರುತ್ತೋ ಅನ್ಸುತ್ತೆ. ಪ್ಲೀಸ್ ಯಾರೂ ಈ ಥರ ಬ್ಯಾನರ್ ಕಟ್ಟೋಕೆ ಹೋಗಿ. ಇಂಥ ಪರಿಸ್ಥಿತಿ ತಂದುಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ನಾನು ಬೇಕು ಅಂತಲೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಇನ್ನು ಬ್ಯಾನರ್ ಕಟ್ಟೋಕೆ ಹೋಗಬೇಡಿ. ಇದೇ ನೀವು ನನಗೆ ಕೊಡುವ ಅಭಿಮಾನ. ನನ್ನ ಮೇಲೆ ಪ್ರೀತಿ ಇದ್ದರೆ ಒಳ್ಳೆಯ ಕೆಲಸಗಳನ್ನು ಮಾಡಿ. ಅಭಿಮಾನದ ಹೆಸರಲ್ಲಿ ಜೀವ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಮೃತ ಯುವಕರ ಕುಟುಂಬಸ್ಥರಿಗೆ ಯಶ್ ಸಾಂತ್ವನ, ಕಣ್ಣೀರಿಟ್ಟ ರಾಕಿಂಗ್ ಸ್ಟಾರ್!
ನಮ್ಮಂತೆ ನೀವು ಬೆಳೆದರೆ ನಮಗೂ ಸಂತೋಷ. ಈ ರೀತಿ ಬ್ಯಾನರ್ ಹಾಕೋದನ್ನು ಯಾರೂ ಇಷ್ಟಪಡೋದಿಲ್ಲ. ಬರ್ತ್‌ಡೇ ಬೇಡ ಅಂದ್ರೆ ಬೇಸರ ಮಾಡ್ಕೋತಾರೆ. ನಮ್ಮಿಂದ ಯಾರಿಗೂ ತೊಂದರೆಯಾಗಬಾರದು. ಕುಟುಂಬಕ್ಕೆ ನನ್ನ ಕೈಲಾದಷ್ಟು ಸಹಾಯ ಮಾಡಲಿದ್ದೇನೆ ಎಂದು ಯಶ್ ಹೇಳಿದ್ದಾರೆ.
ಯಶ್ ಬರ್ತ್‌ಡೇಗೆ ಕಟೌಟ್ ನಿಲ್ಲಿಸಲು ಹೋಗಿ ಭಾರೀ ಅನಾಹುತ; ವಿದ್ಯುತ್ ತಗುಲಿ ಮೂವರು ಅಭಿಮಾನಿಗಳು ಸ್ಥಳದಲ್ಲೇ ಸಾವು!
ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರೀಯೆ ನೀಡಿದ ನಟ ಯಶ್, ಯಾರು ಇದನ್ನು ಇಷ್ಟ ಪಡೋದಿಲ್. ಈ ರೀತಿ ಆಗುತ್ತದೆ ಎಂದೆ ನಾನು ಸರಳವಾಗಿ ಬರ್ತಡೆ ಆಚರಿಸಲು ತೀರ್ಮಾಣ ಮಾಡಿದ್ದೆ. ಈಗ ಅದನ್ನೆಲ್ಲಾ ಮಾತನಾಡುವ ಸಮಯವಲ್ಲ.ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡ್ತೇವೆ. ಏನೇ ಪರಿಹಾರ ಕೊಟ್ಟರು ಮಗ ವಾಪಸ್ ಬರ್ತಾನಾ? ನಾನು ಇಲ್ಲಿ ಬಂದಿರುವುದು ಅವರ ತಂದೆ-ತಾಯಿಗಾಗಿ,ಅವರ ಕುಟುಂಬಕ್ಕೆ ಏನು ಅಗತ್ಯವೋ ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.
ಅಭಿಮಾನ ತೋರಿಸೋದಾದರೆ, ನಿಮ್ಮ ಬದುಕಲ್ಲಿ ಖುಷಿಯಾಗಿರಿ,ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ನೀವು ಖುಷಿಯಾಗಿರಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಇದೆಲ್ಲಾ ಬಿಟ್ಟುಬಿಡಿ. ಈ ರೀತಿ ಅಭಿಮಾನ ವ್ಯಕ್ತಪಡಿಸಬೇಕೆಂದು ಯಾರೂ ಇಷ್ಟಪಡೋದಿಲ್ಲ. ನನಗಂತೂ ಈ ಥರ ಅಭಿಮಾನ ಬೇಡವೇ ಬೇಡ. ಬೈಕ್ನಲ್ಲಿ ಚೇಸ್ ಮಾಡಿಕೊಂಡು ಬರುವುದು ಎಲ್ಲಾ ಬೇಡ. ಈಗ ನಾನು ಬರುವಾಗಲೂ ಬೈಕ್ನಲ್ಲಿ ಚೇಸ್ ಮಾಡುತ್ತಿದ್ದರು. ಕಟೌಟ್ ಕಟ್ಟಬೇಡಿ ಅಂದರೆ ಬೇಜಾರು ಮಾಡಿಕೊಳ್ಳುತ್ತೀರಿ. ನಾನು ಬರ್ತಡೆ ಆಚರಿಸದೆ ಇರೋದಕ್ಕೆ ಮಾಧ್ಯಮಗಳು ವರದಿ ಮಾಡಿದ್ದವು. ಕರೋನಾ ಬಂದಿದೆ ಎಂದು ನೀವೇ ವರದಿ ಮಾಡಿದ್ದೀರಿ. ಹೀಗಾಗಿ ಮತ್ತೆ ಏನೊ ಸಮಸ್ಯೆ ಆಗುವುದು ಬೇಡಾ ಎಂದು ಬರ್ತಡೆ ಆಚರಿಸಿಕೊಂಡಿಲ್ಲ ಎಂದು ಹೇಳಿದರು.
ನಾನು ಹೆಂಡತಿ ಮಕ್ಕಳ ಜೊತೆ ಗೋವಾದಲ್ಲಿ ಇದ್ದೆ ಈ ಸುದ್ದಿ ಕೇಳಿದಾಗ ಬಹಳ ಬೇಜಾರ್ ಆಯಿತು. ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ನಟ ಯಶ್ ಹೇಳಿದ್ದಾರೆ. ನನಗೆ ಬರ್ತ್‌ಡೇ ಅಂದ್ರೇನೇ ಭಯ ಬಂದು ಬಿಟ್ಟಿದೆ. ಕಳೆದ ವರ್ಷ ಮನೆ ಬಳಿ ಬೆಂಕಿ ಹಂಚಿಕೊಂಡಿದ್ದರು. ನನ್ನ ಬರ್ತ್‌ಡೇ ಅಂದ್ರೆ ನನಗೆ ಅಸಹ್ಯವಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.