ಬೀರಮ್ಮ, ಚೌಡಮ್ಮ ಮರೆತವರು ನಕಲಿ ಹಿಂದೂಗಳು: ಶಿಕ್ಷಣ ಸಚಿವ ಮಧುಬಂಗಾರಪ್ಪ

By Suvarna NewsFirst Published Jan 8, 2024, 6:43 PM IST
Highlights

ಬಿಜೆಪಿಯವರಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ, ಉಳಿದಂತೆ ರಾಮ ಎಲ್ಲಿಗೆ ಹೋಗಿರುತ್ತಾನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಪ್ರಶ್ನಿಸಿದ್ದಾರೆ.

ವರದಿ: ರವಿ.ಎಸ್. ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.8): ಬಿಜೆಪಿಯವರಿಗೆ ಚುನಾವಣೆ ಬಂದಾಗ ರಾಮ ನೆನಪಾಗುತ್ತಾನೆ, ಉಳಿದಂತೆ ರಾಮ ಎಲ್ಲಿಗೆ ಹೋಗಿರುತ್ತಾನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಪ್ರಶ್ನಿಸಿದ್ದಾರೆ. ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿರುವ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಹಿಂದಿನ ಚುನಾವಣೆಯಲ್ಲಿ ಪುಲ್ವಾಮ ಬಾಂಬ್ ದಾಳಿ ಪ್ರಕರಣವನ್ನು ಬಳಸಿಕೊಂಡರು. ಅಂತಹ ಭಾವನಾತ್ಮಕ ವಿಚಾರಗಳ ಮೇಲೆ ಅವರು ಚುನಾವಣೆ ಮಾಡುತ್ತಾರೆ. ಇಂತಹ ನೀವು ನಿಜವಾದ ಹಿಂದೂಗಳ ಎಂದು ಸಚಿವ ಮಧುಬಂಗಾರಪ್ಪ ಅವರು ಪ್ರಶ್ನಿಸಿದರು. ಇವರಿಗೆ ಕೃಷ್ಣ, ಬೀರಮ್ಮ ಹಿಂದುಳಿದ ವರ್ಗಗಳ ದೇವರು ಯಾರು ಅಂತ ಕಾಣಲ್ವಾ.? ಅದನ್ಯಾರಾದರೂ ಕೇಳುತ್ತಾರಾ. ಅಂದರೆ ಇವರದು ಬರೀ ಭಾವನಾತ್ಮಕವಾಗಿ ಮತಗಳನ್ನು ಪಡೆಯುವುದು ಮಾತ್ರ ಬಿಜೆಪಿಯವರಿಗೆ ಗೊತ್ತು ಅಷ್ಟೇ ಎಂದು ಸಚಿವ ಮಧುಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ರಾಮನ ಬಾಣ ಅವರಿಗೆ ತಿರುಗಿ ಹೊಡೆಯುತ್ತದೆ ಹೊರತ್ತು ನಮಗೆ ಹೊಡೆಯುವುದಿಲ್ಲ ಎಂದರು. ರಾಮ, ಬೀರಮ್ಮ, ಚೌಡಮ್ಮ ಸೇರಿದಂತೆ ಎಲ್ಲಾ ಧರ್ಮಗಳಿಗೆ ಗೌರವ ಕೊಡುವವನೇ ನಿಜವಾದ ಹಿಂದು.ಯಾರು ಹಿಂದುತ್ವ ಅಂತ ಹೋಗುತ್ತಾನೋ ಅವನು ಡೂಪ್ಲಿಕೇಟ್ ಹಿಂದು, ಅವರೆಲ್ಲಾ ಸ್ವಾರ್ಥಿಗಳು ಎಂದು ಕಿಡಿಕಾರಿದರು. ಮನುಷ್ಯತ್ವ ಇಟ್ಟುಕೊಂಡು ಹೋಗುವವನು ನಿಜವಾದ ಹಿಂದು ಎಂದರು.

ಬೊಮ್ಮಾಯಿಯವರು ಹಿಂದೆ ಸಿಎಂ ಆಗಿದ್ದವರು. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ರಲಾ ಆಗ ರಾಮ ಎಲ್ಲಿ ಹೋಗಿದ್ದ. ರಾಮ ಏಕೆ ಬಿಜೆಪಿಯವರಿಗೆ ರಿವರ್ಸ್ ಹೊಡೆದರು. ನಮಗೆ ಯಾಕೆ ರಾಮ ಆಶೀರ್ವಾದ ಮಾಡಿದರು ಎಂದು ಪ್ರಶ್ನಿಸಿದ ಅವರು, ಯಾಕೆ ಅಂದ್ರೆ ಬಿಜೆಪಿಯವರು ಮಾಡಿದ ಕೆಲಸ ಹಾಗೆ ಇದೆ. ನಾನು ಇಲ್ಲಿಂದಲೇ ರಾಮನಿಗೆ ನಮಸ್ಕಾರ ಮಾಡುತ್ತೇನೆ, ಅಲ್ಲಿಗೆ ಹೋಗುವವರು ದುರಾಸೆ ಇಟ್ಟುಕೊಂಡಿದ್ದರೆ ಅದಕ್ಕೆ ರಾಮ ಶಾಪ ಕೊಡುತ್ತಾನೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಮೋದಿಯವರಾದಿಯಾಗಿ ಬಿಜೆಪಿಯ ಯಾರಾದರೂ ವೈಯಕ್ತಿಕವಾಗಿಯಾದರೂ ಒಮ್ಮೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರಾ ಹೇಳಲಿ ಎಂದು ಪ್ರಶ್ನಿಸಿದರು. 2023 ಚುನಾವಣೆಯಲ್ಲಿ ನಾನು ನಮ್ಮ ಪಕ್ಷದ ಪ್ರಣಾಳಿಕೆ ಉಪಾಧ್ಯಕ್ಷನಾಗಿದ್ದೆ. ಹೀಗಾಗಿ ಈಗ ಜಾರಿ ಮಾಡಿರುವ ಸರ್ಕಾರದ ಯೋಜನೆಗಳು ಈ ಭಾಗದ ಎಷ್ಟೊಂದು ಹೆಣ್ಣುಮಕ್ಕಳಿಗೆ ಅನುಕೂಲವಾಗಿವೆ. ಬಿಜೆಪಿಯವರು ಟ್ಯಾಕ್ಸ್ ಜಾಸ್ತಿ ಮಾಡಿದ್ರು, ಆದರೆ ಜನರ ಆರ್ಥಿಕ ಮೂಲ ಕಾಂಗ್ರೆಸ ಆಗುತ್ತದೆ, ಜನರ ಮನೆಯನ್ನು ಬೆಳಕು ಮಾಡುವುದು ಕಾಂಗ್ರೆಸ್ ಬೇಕಾಗಿದೆ. ಭಾಗ್ಯ ಜ್ಯೋತಿ ಯೋಜನೆ ಇಂದು ಏನಾಗಿದೆ ಎಂದು ಮಧುಬಂಗಾರಪ್ಪ ಪ್ರಶ್ನಿಸಿದರು.

ಶಿಕ್ಷಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು ನಮ್ಮ ಅಡ್ವೋಕೇಟ್ ಜನರಲ್ ಅವರ ಮಾರ್ಗದರ್ಶನದಲ್ಲಿ ಮುಂದೆ ಏನು ಮಾಡಬಹುದು ಎಂದು ಚರ್ಚಿಸಿ ನಿರ್ಧರಿಸಲಾಗುವುದು ಎಂದಿದ್ದಾರೆ. ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಆರ್ಡರ್ ನೀಡಿದ್ದೇವೆ. ಐನೂರು 600 ಶಿಕ್ಷಕರದ್ದು ಕೋರ್ಟಿನಲ್ಲಿ ಇದೆ. ಇದನ್ನು ಹೊರತ್ತು ಪಡಿಸಿ ಉಳಿದಂತೆ ಯಾವುದೇ ಸಮಸ್ಯೆ ಇಲ್ಲ. ಅದನ್ನು ಹೊರತ್ತುಪಡಿಸಿ ಉಳಿದವರ ನೇಮಕಾತಿ ಆದೇಶ ನೀಡಲಾಗಿದೆ. 

ರಾಜ್ಯದಲ್ಲಿ ಈಗಾಗಲೇ 43 ಸಾವಿರ ಶಿಕ್ಷಕರ ಕೊರತೆ ಇದೆ. ಅದಕ್ಕೆ ಅತಿಥಿ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ 15 ರಿಂದ 20 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು. ಅದನ್ನು ಈಗಾಗಲೇ ಸಿಎಂ ಅವರ ಬಳಿಯೂ ಕೋರಿದ್ದೇನೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಸಿಎಂ ಅವರಿಗೂ ಗೊತ್ತಿದೆ. ಹೀಗಾಗಿ ಸಿಎಂ ಅದಕ್ಕಾಗಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದೇನೆ ಎಂದು ಕೊಡಗಿನ ಪೊನ್ನಂಪೇಟೆಯಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.

click me!