
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣವು (dharmasthala burial case) ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಸಂದರ್ಭದಲ್ಲಿ, ಎಸ್‌ಐಟಿ (ವಿಶೇಷ ತನಿಖಾ ತಂಡ) ಇಂದು ಎರಡನೇ ದಿನದ ಉತ್ಖನನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇಂದು ಪಾಯಿಂಟ್ ನಂಬರ್ ಎರಡರಲ್ಲಿ ಮಾತ್ರ ಉತ್ಖನನ ಪ್ರಕ್ರಿಯೆ ನಡೆಯಲಿದೆ. ಕೇವಲ ಒಂದು ಪಾಯಿಂಟ್ ನಲ್ಲಿ ಮಾತ್ರ ಉತ್ಖನನ ನಡೆಸಲಿದೆ.
ಈ ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯರೊಬ್ಬರ ಹೆಸರು ತನಿಖೆಯಲ್ಲಿ ತಳುಕು ಹಾಕಿಕೊಂಡಿದೆ, ಅನಾಮಿಕ ದೂರುದಾರ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ತನಿಖಾ ತಂಡದ ಮುಂದೆ ಹೇಳಿದ್ದೇನೆ. ಎಸ್‌ಐಟಿ ವಿಚಾರಣೆಯಲ್ಲಿ ಈ ದೂರುದಾರ ನೀಡಿದ ಮಾಹಿತಿಯ ಪ್ರಕಾರ, ಶವಗಳನ್ನು ಹೂತಿಟ್ಟ ಕಾರ್ಯದಲ್ಲಿ ಅಂದು ಪೊಲೀಸ್ ಅಧಿಕಾರಿಯೂ ಸಾಥ್ ನೀಡಿದ್ದರು. ಪ್ರಕರಣ ಸಂಬಂಧ ಈಗ ಆ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಸಂಬಂಧಿತ ಅಧಿಕಾರಿ ಈ ವಿಚಾರ ತಿಳಿದು ವಿಚಾರಣೆ ಭಯದಲ್ಲಿದ್ದು, ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಪ್ರಕರಣ ಸಂಬಂಧ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್ ತಲಾಶ್, 1995 ರಿಂದ ಕೆಲಸ ಮಾಡಿದ ಎಲ್ಲಾ ಪೊಲೀಸರ ಲಿಸ್ಟ್ ಅನ್ನು ಎಸ್.ಐ.ಟಿ ಕೇಳಿದೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಲಿಸ್ಟ್ ಗಾಗಿ ಎಸ್ಐಟಿ ರಿಕ್ವಸ್ಟ್ ಲೆಟರ್ ಕೊಟ್ಟಿದೆ.
ಎಸ್ಐಟಿ ಇಂದಿನ ಉತ್ಖನನ ಕಾರ್ಯಾಚರಣೆಗೆ ಹೆಚ್ಚಿನ ತೀವ್ರತೆ ನೀಡಿದ್ದು, ಒಟ್ಟಾರೆ ಮೂರು ತಂಡಗಳನ್ನು ರಚಿಸಲಾಗಿದೆ. ಬೇರೆ ಬೇರೆ ತಾಲೂಕುಗಳ ತಹಶೀಲ್ದಾರ್‌ಗಳ ಸಮ್ಮುಖದಲ್ಲಿ, ಮೂರು ಸಮಾಧಿಗಳನ್ನು ಏಕಕಾಲದಲ್ಲಿ ಅಗೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕೆಲಸಕ್ಕೆ ಸರ್ಕಾರಿ ಪಂಚರು ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಹೆಚ್ಚಿನ ಎಚ್ಚರಿಕೆ ಹಿನ್ನೆಲೆಯಲ್ಲಿ ಜೆಸಿಬಿ ಬಳಕೆಯನ್ನು ತಾತ್ಕಾಲಿಕವಾಗಿ ತಿರಸ್ಕರಿಸಲಾಗಿದ್ದು, ಮಾನವ ಶ್ರಮದ ಮೂಲಕವೇ ಸಮಾಧಿಗಳ ಉತ್ಖನನ ನಡೆಸಲು ತೀರ್ಮಾನಿಸಲಾಗಿದೆ. ಅಸ್ತಿಪಂಜರಗಳಿಗೆ ಹಾನಿಯಾಗದಂತೆ ನಿಖರ ಗಮನ ವಹಿಸಲಾಗಿದೆ.
ಶವಗಳ ಉತ್ಖನನಕ್ಕೆ ತಂತ್ರಜ್ಞಾನ ಬಳಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮೀಸಲು ಅರಣ್ಯ ಪ್ರದೇಶದಲ್ಲಿ ಹಿಟಾಚಿ ಯಂತ್ರ ಬಳಸುವ ಬಗ್ಗೆ ಕಾನೂನು ಹಾಗೂ ವೈಜ್ಞಾನಿಕ ಅಡ್ಡಿಗಳಿವೆ. ಅಸ್ಥಿಪಂಜರಗಳು ಸಿಕ್ಕಲ್ಲಿ, ಹಿಟಾಚಿ ಬಳಕೆಯಿಂದ ಹಾನಿಯಾಗುವ ಸಾಧ್ಯತೆ ಹೆಚ್ಚಿದ್ದು, ಇದು ಫಾರೆನ್ಸಿಕ್ ಪರೀಕ್ಷೆ ಹಾಗೂ ವರದಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ತೀರ ಅಗತ್ಯವಿದ್ದರೆ ಮಾತ್ರ ಸಂಬಂಧಿತ ಅನುಮತಿಯನ್ನು ಪಡೆದು ಯಂತ್ರ ಬಳಕೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ತನಿಖಾ ಅಧಿಕಾರಿಗಳಾದ ಜಿತೇಂದ್ರ ದಯಾಮ್, ಡಿಐಜಿ ಅನುಚೇತ್, ಮತ್ತು ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಭೇಟಿ ನೀಡಿ, ಕಾರ್ಯಾಚರಣೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಅನಾಮಿಕ ದೂರುದಾರನಿಂದ ಸೂಚಿಸಲಾದ 13 ಶಂಕಿತ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರಿಯಲಿದೆ. ಇಂದು ಮುಂಜಾನೆ ನೇತ್ರಾವತಿಯತ್ತ ಎಸ್‌ಐಟಿ ತಂಡ ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಯಾಣಿಸಿದ್ದು, ಕೆಲವೇ ಕ್ಷಣಗಳಲ್ಲಿ ಉತ್ಖನನ ಪ್ರಕ್ರಿಯೆ ಆರಂಭವಾಗಲಿದೆ. ಇಂದು ಎರಡಕ್ಕಿಂತ ಹೆಚ್ಚು ಸಮಾಧಿಗಳನ್ನು ಏಕಕಾಲದಲ್ಲಿ ಅಗೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಇದರ ಅನುಮತಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರಿಂದ ಸಿಕ್ಕರೆ ಮಾತ್ರ ಸಾಧ್ಯವಾಗಲಿದೆ. ಈ ನಿರ್ಧಾರಕ್ಕೆ ಎಲ್ಲರ ಚಿತ್ತ ನೆಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ