
ಬೆಂಗಳೂರು (ಜುಲೈ 30): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಮಂಗಳವಾರ ನಡೆದಿದ್ದ ಲೋಕಾಯುಕ್ತ ದಾಳಿ ಮುಕ್ತಾಯಗೊಂಡಿದೆ.
ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ ಸೇರಿ ಬೆಂಗಳೂರು ನಗರದ ಎರಡು ಕಡೆ ಸೇರಿ ಒಟ್ಟು 25 ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆಸಿದ್ದರು. ದಾಳಿ ವೇಳೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಸಂಬಂಧಿಕರ ಮನೆ ಕಚೇರಿಗಳಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದೀಗ ಭ್ರಷ್ಟ ಅಧಿಕಾರಿಗಳ ಮೇಲಿನ ಲೋಕಾಯುಕ್ತ ದಾಳಿ ಮುಕ್ತಾಯಗೊಂಡಿದ್ದು, ಐವರು ಅಧಿಕಾರಿಗಳ ಅಪಾರ ಪ್ರಮಾಣದ ಆಸ್ತಿ ವಿವರ ಕೆಳಗಿನಂತಿದೆ.
ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾ, ಬೆಳ್ಳಿ, ನಗದು, ಆಸ್ತಿ ಪತ್ತೆ
1. ಕೆ. ಓಂಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಬಿ.ಡಿ.ಎ, ಬೆಂಗಳೂರು
- ಸ್ಥಿರ ಆಸ್ತಿಯ ಮೌಲ್ಯ- ₹4,78,20,000
- ಚರ ಆಸ್ತಿಯ ಮೌಲ್ಯ- ₹1,47,96,365
- ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ₹6,26,16,365
2. ಎನ್. ವೆಂಕಟೇಶ್, ತೆರಿಗೆ ಮೌಲ್ಯಮಾಪಕ, ಶೆಟ್ಟಿಹಳ್ಳಿ ಉಪ-ವಿಭಾಗ, ಬಿಬಿಎಂಪಿ
- ಸ್ಥಿರ ಆಸ್ತಿಯ ಮೌಲ್ಯ- ₹2,25,05,000/-
- ಚರ ಆಸ್ತಿಯ ಅಂದಾಜು ಮೌಲ್ಯ ₹32,50,264
ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ₹2,57,55,264
3. ಡಾ. ವೆಂಕಟೇಶ್ ಜಿ, ತಾಲ್ಲೂಕು ವೈಧ್ಯಾಧಿಕಾರಿ, ಹಿರಿಯೂರು, ಚಿತ್ರದುರ್ಗ
- ಸ್ಥಿರ ಆಸ್ತಿಯ ಅಂದಾಜು ಮೌಲ್ಯ- ₹2,87,36,000
- ಚರ ಆಸ್ತಿಯ ಅಂದಾಜು ಮೌಲ್ಯ ₹67,49,750/
- ಒಟು ಆಸ್ತಿ ಮೌಲ್ಯ- ₹3,54,85,750
4. ಜಯಣ್ಣ. ಆರ್, ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ,
- ಸ್ಥಿರ ಆಸ್ತಿಯ ಅಂದಾಜು ಮೌಲ್ಯ ₹5,59,59,749
- ಚರ ಆಸ್ತಿಯ ಅಂದಾಜು ಮೌಲ್ಯ ₹69,35,600
- ಒಟ್ಟು ಆಸ್ತಿ ಮೌಲ್ಯ- ₹6,28,95,349
5. ಆಂಜನೇಯ ಮೂರ್ತಿ. ಎಂ, ಕಿರಿಯ ಅಭಿಯಂತರರು, ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ, ಗೌರಿಬಿದನೂರು, ಚಿಕ್ಕಬಳ್ಳಾಪುರ
- ಸ್ಥಿರ ಆಸ್ತಿಯ ಅಂದಾಜು ಮೌಲ್ಯ-₹4,83,46,000
- ಚರ ಆಸ್ತಿಯ ಅಂದಾಜು ಮೌಲ್ಯ- ₹93,65,000/-
ಒಟ್ಟು ಆಸ್ತಿ ಮೌಲ್ಯ- ₹5,77,11,000
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ