* ಮೈಸೂರಿನ ಟೆಕ್‌ಭಾರತ್‌ನಲ್ಲಿ ಸಚಿವೆ ಶೋಭಾ ಚಾಲನೆ
* ಡ್ರೋನ್ ತಂತ್ರಜ್ಞಾನವನ್ನು ಸಿಎಫ್‌ಟಿಆರ್‌ಐ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿ
* ಟೆಕ್ ಭಾರತ್ ಅಂಗವಾಗಿ ಸಿಎಫ್‌ಟಿಆರ್‌ಐ ಆವರಣದಲ್ಲಿ ವಸ್ತು ಪ್ರದರ್ಶನ
ಮೈಸೂರು(ಮೇ.21): ರೈತರು ಜಮೀನಿಗೆ ರಾಸಾಯನಿಕ ಗೊಬ್ಬರ ಹಾಕುವುದು ಮತ್ತು ಔಷಧ ಸಿಂಪಡಿಸಬಹುದಾದ ಡ್ರೋನ್‌ಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ಚಾಲನೆ ನೀಡಿದ್ದಾರೆ.
ಸಿಎಫ್‌ಟಿಆರ್‌ಐನಲ್ಲಿ ಆಯೋಜಿಸಿರುವ ಟೆಕ್‌ಭಾರತ್-2022 ಕಾರ್ಯಕ್ರಮದಲ್ಲಿ ಈ ತಂತ್ರಜ್ಞಾನಕ್ಕೆ ಚಾಲನೆ ನೀಡಿದ ಅವರು, ಕಡಿಮೆ ದರದಲ್ಲಿ ಮತ್ತು ಕಡಿಮೆ ಸಮಯದಲ್ಲಿ ರೈತರ ಜಮೀನಿಗೆ ಅಗತ್ಯವಿರುವ ಗೊಬ್ಬರ ಮತ್ತು ರಾಸಾಯನಿಕವನ್ನು ಸಿಂಪಡಿಸಬಹುದು. ಕೆಲವೇ ಗಂಟೆಗಳಲ್ಲಿ ಸಮರ್ಪಕವಾಗಿ ಗೊಬ್ಬರ ಮತ್ತು ಔಷಧ ಸಿಂಪಡಿಸಬಹುದಾದ ಡ್ರೋನ್ ತಂತ್ರಜ್ಞಾನವನ್ನು ಸಿಎಫ್‌ಟಿಆರ್‌ಐ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ ಎಂದರು.
undefined
ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ಕರ್ನಾಟಕ ಸರಕಾರ
ರೈತರಿಗೆ ಹೆಚ್ಚು ಅನುಕೂಲಕಾರಿಯಾದ ಈ ಡ್ರೋನ್ ಸಹಾಯದಿಂದ ಬೆಳೆ ಸಮೀಕ್ಷೆಯನ್ನು ನಡೆಸಬಹುದಾಗಿದ್ದು, ವಿವಿಧ ಕಂಪನಿಗಳು ಕಡಿಮೆ ದರದಲ್ಲಿ ಈ ಡ್ರೋನ್‌ಗಳನ್ನು ಬಾಡಿಗೆಗೆ ನೀಡಲಿವೆ. ಇದರ ಸದುಪಯೋಗವನ್ನು ರೈತರು ಪಡೆಯಬಹುದು ಎಂದು ಸಚಿವರು ತಿಳಿಸಿದರು.
ವಸ್ತು ಪ್ರದರ್ಶನಕ್ಕೆ ಚಾಲನೆ:
ಟೆಕ್ ಭಾರತ್ ಅಂಗವಾಗಿ ಸಿಎಫ್‌ಟಿಆರ್‌ಐ ಆವರಣದಲ್ಲಿ ವಸ್ತು ಪ್ರದರ್ಶನ ಆಯೋಜಿಸಿದೆ. ಸುಮಾರು 50 ಮಳಿಗೆಯನ್ನು ಇದಕ್ಕಾಗಿ ತೆರೆಯಲಾಗಿದ್ದು, ಮಿಲೆಟ್‌ನಿಂದ ತಯಾರಿಸಿದ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.