ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್

Published : Mar 17, 2020, 05:33 PM ISTUpdated : Mar 17, 2020, 07:42 PM IST
ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್

ಸಾರಾಂಶ

ಡೆಡ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಟೆಕ್ಕಿ ಫ್ಯಾಮಿಲಿ ಸೇಫ್ ಆಗಿದೆ. ಇದು ಕರ್ನಾಟಕದ ವೈದ್ಯರಿಗೆ ಶಬ್ಬಾಸ್‌ಗಿರಿ. ಬೆಂಗಳೂರು ವೈದ್ಯರು ಕೊಟ್ಟ ಲಸಿಕೆ ಯಾವುದು ?

ಬೆಂಗಳೂರು, (ಮಾ.17): ಡೆಡ್ಲಿ ಕೊರೋನಾ ವೈರಸ್‌ ಸೋಂಕಿನಿಂದ ಬಳಲುತ್ತಿದ್ದ ಬೆಂಗಳೂರಿನ ಟೆಕ್ಕಿ ಫ್ಯಾಮಿಲಿ ಸೇಫ್ ಆಗಿದೆ.

"

ಮಾಹಾಮಾರಿ ಕೊರೋನಾ ವೈರಸ್‌ನಿಂದ ಬೆಂಗಳೂರಿನ ಟೆಕ್ಕಿ ಗೆದ್ದು ಬಂದಿದ್ದು, ಜಯನಗರದ ರಾಜೀವ್ ಗಾಂಧಿನಗರ ವೈದ್ಯರು ಕೊಟ್ಟ ಚಿಕಿತ್ಸೆಯಿಂದ ಅವರು ಗುಣಮುಖರಾಗಿದ್ದಾರೆ. ಈ ಬಗ್ಗೆ ಟೆಕ್ಕಿ ಫ್ಯಾಮಿಲಿಯೇ ಪತ್ರ ಬರೆದು ವೈದ್ಯರಿಗೆ ಧನ್ಯವಾದ ತಿಳಿಸಿದೆ.

ಕೊರೋನಾ ಆತಂಕ ನಿವಾರಣೆಗೆ ರಾಜ್ಯ ಸರ್ಕಾರದಿಂದ ಟೆಲಿಗ್ರಾಂ ಗ್ರೂಪ್‌! 

H1N1 ಬಾಧಿತರಿಗೆ ನೀಡುತ್ತಿದ್ದ ಲಸಿಕೆಯನ್ನೇ  ವೈದ್ಯರು ಬಳಸಿದ್ದಾರೆ. ಈ ಮೂಲಕ ಕೊರೊನಾ ವೈರಸ್ ಅನ್ನೂ  H1N1 ಲಸಿಕೆ ಕೊಂದು ಹಾಕಿದೆ. ಇದೀಗ ಕೊರೋನಾ ವೈರಸ್‌ನಿಂದ ಗುಣಮುಖರಾಗಿರುವ ಟೆಕ್ಕಿ ಫ್ಯಾಮಿಲಿಗೆ ಸದ್ಯಕ್ಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಇನ್ನಷ್ಟು ದಿನ ನೋಡಿ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ವೈದ್ಯರು ತಿಳಿಸಿದ್ದಾರೆ.

ಸೋಂಕು ತಗುಲಿದೆ ಎಂದು ವರದಿ ಬಂದ ಬಳಿಕ ವೈದ್ಯರು ಕೊಟ್ಟ ಚಿಕಿತ್ಸೆ, ಸೋಂಕಿತರಿಗೆ ಮಾನಸಿಕವಾಗಿ ಧೈರ್ಯ ತುಂಬಿದ ವೈದ್ಯರ ಕಾರ್ಯಕ್ಕೆ ನಿಜಕ್ಕೂ ಶ್ಲಾಘನೀಯ ಅಂತೆಲ್ಲಾ ಪತ್ರದಲ್ಲಿ ಬರೆದಿದ್ದಾರೆ. 

ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!

ಟೆಕ್ಕಿ ಫ್ಯಾಮಿಲಿ ಬರೆದ ಪತ್ರ ಇಂತಿದೆ
ಸರ್ಕಾರಿ ಆಸ್ಪತ್ರೆಯಲ್ಲಿ ನಮಗೆ ಅತ್ಯುತ್ತಮ ಚಿಕಿತ್ಸೆ ಸಿಕ್ಕಿದ್ದು, ನಮ್ಮ ಜೀವನದ ಕೆಟ್ಟ ಗಳಿಗೆಯಿಂದ ನಾವು ಪಾರಾಗಿದ್ದೇವೆ. ನಮ್ಮ ರಕ್ಷಣೆಗಾಗಿ ವೈದ್ಯರು, ಸರ್ಕಾರ ಹಗಲು-ರಾತ್ರಿ ಕೆಲಸ ಮಾಡಿದೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ, ವೈದ್ಯರು ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದು, ನಮ್ಮಿಂದ ಬೇರೆಯವರಿಗೆ ಸೋಂಕು ಹರಡದಂತೆ ತೀವ್ರ ನಿಗಾ ವಹಿಸಿದ್ದರು.

ಸ್ಕ್ರೀನಿಂಗ್ ಟೆಸ್ಟಿಂಗ್ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಯನ್ನು ನೆನೆಯಲೇ ಬೇಕು. ಡಾಕ್ಟರ್, ನರ್ಸ್ಗಳು ಹಾಗೂ ಇತರೆ ಸಿಬ್ಬಂದಿಯಿಂದ ಕೆಲಸ ಅದ್ಭುತ. ನಾವು ಭಯಭೀತರಾಗದಂತೆ ನೋಡಿಕೊಳ್ಳುತ್ತಿದ್ದರು. ಪದೇ, ಪದೇ ವೈದ್ಯರು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದರು. ಮನೋ ವೈದ್ಯರೂ ಸಹ ನಮಗೆ ಮಾನಸಿಕ ಧೈರ್ಯ ತುಂಬಿದರು.

ಐಸೋಲೇಷನ್ ಸಂದರ್ಭದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದು, ನಮ್ಮ ಎಲ್ಲ ಬೇಡಿಕೆಗಳನ್ನು ವೈದ್ಯರು ಪೂರೈಸಿದರು. ನಾವು ಈ ಹಿಂದೆ ಸಂಪರ್ಕಿಸಿದವರನ್ನು ಪತ್ತೆ ಹಚ್ಚುವುದೇ ಸವಾಲಾಗಿತ್ತು.

ದೊಡ್ಡ ಸವಾಲನ್ನೂ ಕೂಡ ವೈದ್ಯರು, ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ತನ್ನ ಪತಿಯ ಕಚೇರಿ ಸಿಬ್ಬಂದಿ, ನನ್ನ ಸಹೋದ್ಯೋಗಿಗಳು, ನನ್ನ ಮಕ್ಕಳ ಸ್ನೇಹಿತರು, ಸಹಪಾಠಿಗಳು,ನೆರೆ ಹೊರೆಯವರನ್ನೂ ಸಂಪರ್ಕಿಸಿದ್ದಾರೆ.

ನಮ್ಮ ಮಕ್ಕಳ ಶಾಲೆ, ಅಪಾರ್ಟ್ಮೆಂಟ್, ಕಚೇರಿಯನ್ನು ಸೋಂಕು ಮುಕ್ತಗೊಳಿಸಿದ್ದಾರೆ. ನಮ್ಮ ಗುರುತನ್ನು ಯಾರಿಗೂ ಬಹಿರಂಗಪಡಿಸದಂತೆ ಎಚ್ಚರವಹಿಸಿದ್ದರು. ಇಂಥ ಕಷ್ಟದ ಸಂದರ್ಭವನ್ನು ಸರ್ಕಾರದ ಕಾರ್ಯದಕ್ಷತೆ ನನ್ನಲ್ಲಿ ಅಚ್ಚರಿ ಮೂಡಿಸಿತ್ತು ಹಾಗೂ ನನ್ನಲ್ಲಿ ಧೈರ್ಯ ತುಂಬಿತ್ತು.

ಇಡೀ ವ್ಯವಸ್ಥೆ ಇಷ್ಟು ವೇಗವಾಗಿ, ಸಮರ್ಥವಾಗಿ, ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನೋಡಿ ನನಗೆ ನಂಬಿಕೆ, ವಿಶ್ವಾಸ ಮೂಡಿಸಿದೆ. ಲಿವಿಂಗ್ ರೂಂನಲ್ಲಿ ಆರಾಮಾಗಿ ಕುಳಿತು ಸರ್ಕಾರವನ್ನು ಟೀಕಿಸುವುದು ಸುಲಭದ ಕೆಲಸ ಹಿನ್ನೆಲೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಧನ್ಯವಾದ ಹೇಳಿ..

ವೈದ್ಯರು, ನರ್ಸ್‌ಗಳು,ಆಸ್ಪತ್ರೆ ಸಿಬ್ಬಂದಿ, ಆರೋಗ್ಯಾಧಿಕಾರಿಗಳು, ಸರ್ಕಾರ ಎಲ್ಲರೂ ದಣಿವರಿಯದೇ ನಮ್ಮ ಸುರಕ್ಷತೆಗಾಗಿ ಕೆಲಸ ಮಾಡಿದ್ದಾರೆ.
ನೀವು ಭಾರತದಲ್ಲಿರುವುದಕ್ಕೆ ಕೃತಜ್ಞರಾಗಿರಿ
ಚೀನಾದಲ್ಲೋ, ಇಟಲಿ, ಇರಾನ್ನಲ್ಲೋ ನೀವು ಇಲ್ಲ
ನಮ್ಮ ವ್ಯವಸ್ಥೆ ಕೆಲಸ ಮಾಡುತ್ತಿದೆ, ಉತ್ತಮವಾಗಿ ಕೆಲಸ ಮಾಡುತ್ತಿದೆ...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Charmadi Ghat Fire ಚಾರ್ಮಾಡಿ ಘಾಟಿಯಲ್ಲಿ ಹೊತ್ತಿಕೊಂಡ ಬೆಂಕಿ; ನೂರಾರು ಎಕರೆ ಅರಣ್ಯ, ಪ್ರಾಣಿ-ಪಕ್ಷಿಗಳು ಭಸ್ಮ?
ಶಿವಮೊಗ್ಗದಲ್ಲಿ ವೀಣಾ ತ್ರಿಶತೋತ್ಸವ ಕಾರ್ಯಕ್ರಮ: ಸಂಸದ ಯದುವೀರ್ ವೀಣಾವಾದನಕ್ಕೆ ಗಾನಗಂಧರ್ವ ಲೋಕ ಸೃಷ್ಟಿ!