
ಬೆಂಗಳೂರು[ಮಾ.17]: ಮಾರಕ ಕೊರೋನಾ ವೈರಸ್ ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿದ್ದು, ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ಹರಡಿರುವ ಡೆಡ್ಲಿ ವೈರಸ್ ರಾಜ್ಯದಲ್ಲೂ ಆತಂಕವದ ವಾತಾವರಣ ನಿರ್ಮಿಸಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 120 ದಾಟಿದ್ದು, ರಾಜ್ಯದಲ್ಲಿ 10 ಮಂದಿ ಈ ಸೋಂಕಿನಿಂದ ಪೀಡಿತರಾಗಿದ್ದಾರೆ. ಹೀಗಿರುವಾಗ ಭಯದ ವಾತಾವರಣ ನಿರ್ಮಿಸಿರುವ ಕೊರೋನಾ ಕುರಿತು ಸಾರ್ವಜನಿಕರ ಅನುಮಾನ ನಿವಾರಿಸಲು, ಸೂಕ್ತ ಮಾಹಿತಿ ನೀಡಲು ರಾಜ್ಯ ಸರ್ಕಾರ ಟೆಲಿಗ್ರಾಮ್ ಗ್ರೂಪ್ ಒಂದನ್ನು ಆರಂಭಿಸಿದೆ.
ಹೌದು ಈ ಕುರಿತು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಟ್ವಿಟರ್ ಖಾತೆಯಲ್ಲಿ ಮಹಿತಿ ನೀಡಲಾಗಿದೆ. ಇಲ್ಲಿ ಟೆಲಿಗ್ರಾಂ ಗುಂಪಿನ ಲಿಂಕ್ ಶೇರ್ ಮಾಡಲಾಗಿದ್ದು, 'ಕೊರೊನಾ ಸೋಂಕಿನ ಕುರಿತು ಹೆಚ್ಚಿನ ಮಾಹಿತಿ ಬೇಕಿದೆಯೇ? ಸೋಂಕಿನ ಲಕ್ಷಣದ ಕುರಿತು ಗೊಂದಲ ಅಥವಾ ಅನುಮಾನಗಳಿವೆಯೇ? ಈ ಬಗ್ಗೆ ಯಾರನ್ನು ಕೇಳೋದು, ಯಾರು ಸರಿಯಾದ ಮಾಹಿತಿ ಕೊಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಅಧಿಕೃತ ಮಾಹಿತಿಗಾಗಿ ಸಾರ್ವಜನಿಕ ಸಂಪರ್ಕ ಇಲಾಖೆಯ https://t.me/joinchat/Ca7E7kiRtd5MKjcDU5-LUA ಟೆಲಿಗ್ರಾಮ್ ಗ್ರೂಪ್ ಸೇರಿಕೊಳ್ಳಿ.' ಎಂದು ಟ್ವೀಟ್ ಮಾಡಲಾಗಿದೆ.
ಈಗಾಗಲೇ ಈ ಟೆಲಿಗ್ರಾಂ ಗುಂಪಿಗೆ 890ಕ್ಕೂ ಅಧಿಕ ಮಂದಿ ಸೇರ್ಪಡೆಗೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಏನಾಗುತ್ತಿದೆ? ಎಷ್ಟು ಮಂದಿ ಕೊರೋನಾ ಪೀಡಿತರಿದ್ದಾರೆ? ಕೊರೋನಾ ನಿಯಂತ್ರಿಸಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಮೊದಲಾದ ಮಾಹಿತಿ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ