ಗೃಹ ಸಚಿವರ ತವರು ಕ್ಷೇತ್ರದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಯತ್ನ!

Published : May 11, 2022, 07:19 PM IST
ಗೃಹ ಸಚಿವರ ತವರು ಕ್ಷೇತ್ರದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಯತ್ನ!

ಸಾರಾಂಶ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲೇ ದಲಿತ ಮಹಿಳೆ ಮೇಲೆ ಅತ್ಯಾಾಚಾರಕ್ಕೆ ಯತ್ನ. ಆಸ್ಪತ್ರೆಗೆ ಹೋಗಿ ಬರುತ್ತಿದ್ದಾಾಗ ದಂಪತಿಗಳನ್ನು ಅಡ್ಡಗಟ್ಟಿ ಕೃತ್ಯ ಎಸಗಲು ಪ್ರಯತ್ನಿಸಲಾಗಿದೆ.  

ಬೆಂಗಳೂರು (ಮೇ.11): ಗೃಹ ಸಚಿವ ಅರಗ ಜ್ಞಾನೇಂದ್ರ(Home minister araga jnanendra ) ಅವರ ಸ್ವಕ್ಷೇತ್ರವಾದ ಅರಗ ಗ್ರಾಮದಲ್ಲಿಯೇ (Araga Village) ಅಮಾನುಷ ಘಟನೆ ವರದಿಯಾಗಿದೆ. ದಲಿತ ಮಹಿಳೆಯ (Dalit Women) ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ (Rape Attempt) ಆರೋಪದಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.

 ತೀರ್ಥಹಳ್ಳಿಯಲ್ಲಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದಾಗ ದಂಪತಿಗಳನ್ನು ಅಡ್ಡಗಟ್ಟಿ ಕೃತ್ಯ ಎಸಗಲು ಪ್ರಯತ್ನಿಸಲಾಗಿದೆ. ದಲಿತ ಮಹಿಳೆಯನ್ನು ಬೆತ್ತಲು ಮಾಡಿ ಅತ್ಯಾಚಾರಕ್ಕೆ ಪ್ರಯತ್ನ ಮಾಡಲಾಗಿದ್ದರೆ, ಪತಿಯ ಮೇಲೆ ನಾಲ್ವರಿಂದ ಹಲ್ಲೆಯಾಗಿದೆ.

ಪತ್ನಿ ಮೇಲೆ ಅತ್ಯಾಚಾರವಾಗುತ್ತಿರುವುದನ್ನು ಕಂಡು ಪತಿ ರಕ್ಷಣೆ ಮಾಡುವಂತೆ ಕೂಗಿಕೊಂಡಿದ್ದಾರೆ. ಈ ವೇಳೆ ಅಕ್ಕಪಕ್ಕದ ಸ್ಥಳೀಯರು ಬಂದು ರಕ್ಷಣೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಂಡು ಮೂರನೇ ಪ್ರಕರಣ ಇದಾಗಿದೆ. ಈ ವಿಚಾರದಲ್ಲಿ ತೀರ್ಥಹಳ್ಳಿ ತಾಲ್ಲೂಕು ದೇವರಗುಡಿ ನಿವಾಸಿಗಳಾದ ಸಂಪತ್ ಬಿನ್ ಉಮೇಶ್‌ಗೌಡ, ಆದರ್ಶ ಬಿನ್ ಪುಟ್ಟಪ್ಪಗೌಡ, ಇನ್ನಿಬ್ಬರು ಅಪರಿಚಿತರ ವಿರುದ್ಧ ದೂರು ದಾಖಲಾಗಿದೆ. ಗೃಹ ಸಚಿವರ ಸೂಚನೆಯಂತೆ ತೀರ್ಥಹಳ್ಳಿ ಪೋಲಿಸರಿಂದ ಎಫ್ಐಆರ್ ದಾಖಲು ಮಾಡಲಾಗಿದೆ.

ಸದ್ಯ ಮಹಿಳೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲು ಮಾಡಿ ತನಿಖೆ ನಡೆಸಲು ಮುಂದಾದ ಪೋಲಿಸರು. ಕಲಂ 341, 323, 376, 354(A), 354(B), 506 ಸಹಿತ 34 ಐಪಿಸಿ  ಹಾಗೂ ಕಲಂ 3 (1) (w) (i) (ii), 3 (2) (va) The SC & ST (POA) Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಬರೋಬರಿ 13 ಅಡಿ ಉದ್ದದ ನಾಗರಹಾವು ಸೆರೆ ಹಿಡಿದ ಉರಗಪ್ರೇಮಿ

ಪ್ರಕರಣವೇನು: ಮೇ 9 ರಂದು ತೀರ್ಥಹಳ್ಳಿ ತಾಲ್ಲೂಕಿನ  26 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಆನಾರೋಗ್ಯದ ಕಾರಣದಿಂದಾಗಿ ತೀರ್ಥಹಳ್ಳಿಯ ತಮ್ಮ ಪರಿಚಿತ ವೈದ್ಯರ ಬಳಿ ಹೋಗಿದ್ದರು. ವೈದ್ಯರು ಸಿಗದ ಕಾರಣ ಹಳೆ ಔಷದಿ ಚೀಟಿ ತೋರಿಸಿ ಔಷದಿಯನ್ನು ಖರೀದಿಸಿ ತನ್ನ ಗಂಡನೊಂದಿಗೆ ರಾತ್ರಿ 9 ಗಂಟೆಗೆ ಬಸ್ ನಲ್ಲಿ ಗ್ರಾಮಕ್ಕೆ ವಾಪಾಸು ಬಂದಿದ್ದರು.

National Technology Day: ಪೋಖ್ರಾನ್ ಪರೀಕ್ಷೆ ವೀಡಿಯೊ ಮೂಲಕ ಅಟಲ್ ಬಿಹಾರಿ ವಾಜಪೇಯಿ ಸ್ಮರಿಸಿದ ಪ್ರಧಾನಿ ಮೋದಿ

ಬಸ್ ನಿಂದ ಇಳಿದು,  ನಡೆದುಕೊಂಡು ಹೋಗುತ್ತಿದ್ದಾಗ ಊರಿನ ಹತ್ತಿರ ಏಕಾಏಕಿ  ಅಡ್ಡಗಟ್ಟಿ ಆಕೆಯ ಗಂಡನಿಗೆ ಹಲ್ಲೆ ಮಾಡಿದ್ದರಿಂದ ಆತ ಪ್ರಜ್ಞಾಹೀನಾನಾಗಿದ್ದ. ನಂತರ ಮಹಿಳೆಯ ಕೈ ಹಿಡಿದು ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದರು.  ಮಹಿಳೆಯು ಜೋರಾಗಿ ಕೂಗಿಕೊಂಡ ಶಬ್ದಕ್ಕೆ ಆಕೆಯ ಪತಿಯು ಎಚ್ಚರಗೊಂಡು ಆತ ಕೂಡ ಜೋರಾಗಿ ಕೂಗಿಕೊಂಡಿದ್ದ.  ಆರೋಪಿಗಳೆಲ್ಲರೂ ಆಕೆಗೆ ನಿನ್ನನ್ನು ಅತ್ಯಾಚಾರ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ