ರಾಮನ ಬರುವಿಕೆಗಾಗಿ ಶಬರಿ ಕಾದಂತೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ನಿವಾಸಿ ಚಿ.ನಾ ಸೋಮೇಶ್ 30 ವರ್ಷದಿಂದ ಶ್ರದ್ಧೆಯಿಂದ ಮೃತ್ತಿಕೆಗೆ ಪೂಜೆ ಸಲ್ಲಿಸುತ್ತಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.9): ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ವಿವಿಧ ಹೋರಾಟಗಳು ನಡೆದಿದ್ದು ಗೊತ್ತೇ ಇದೆ. ಆ ಹೋರಾಟದಲ್ಲಿ ಭಾಗಿಯಾಗಿದ್ದ ಕೊಡಗಿನ ವ್ಯಕ್ತಿಯೊಬ್ಬರು ಅಯೋಧ್ಯೆಯಿಂದ ತಂದ ಮಣ್ಣನ್ನು 30 ವರ್ಷದಿಂದ ಜತನದಿಂದ ಪೂಜೆ ಸಲ್ಲಿಸುತ್ತಿದ್ದಾರೆ ಎಂಬುದು ಗೊತ್ತೆ?
ಹೌದು ರಾಮನ ಬರುವಿಕೆಗಾಗಿ ಶಬರಿ ಕಾದಂತೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಆಶಯದೊಂದಿಗೆ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ನಿವಾಸಿ ಚಿ.ನಾ ಸೋಮೇಶ್ 30 ವರ್ಷದಿಂದ ಶ್ರದ್ಧೆಯಿಂದ ಮೃತ್ತಿಕೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಹೌದು ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕೆಂದು ನಡೆದಿದ್ದ ಹೋರಾಟದಲ್ಲಿ ಚಿ.ನಾ ಸೋಮೇಶ್ ಭಾಗವಹಿಸಿದ್ದರು. 1960 ರಿಂದ 2019 ರ ತನಕ ವಿವಿಧ ಆಯಾಮಗಳಲ್ಲಿ ರಾಜ್ಯದಲ್ಲಿ ಹೋರಾಟ ನಡೆದಿತ್ತು. ರಾಮ ಜನ್ಮಭೂಮಿಗಾಗಿ ನಡೆದಿದ್ದ ಈ ಹೋರಾಟದಲ್ಲಿ ಚಿ.ನಾ. ಸೋಮೇಶ್ ಭಾಗವಹಿಸಿದ್ದರು. 1990ರಲ್ಲಿ ಅಯೋಧ್ಯೆ ಕರಸೇವೆ ಸಮಯದಲ್ಲಿ ಉಂಟಾದ ಗಲಾಟೆ ವೇಳೆ ವಿಶ್ವ ಹಿಂದೂ ಪರಿಷತ್ತ್ ನ ಆಗಿನ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿಂಘಾಲ್ ಅವರ ತಲೆಗೆ ಕಲ್ಲೇಟು ಬಿದ್ದಿತ್ತು. ರಕ್ತ ಹರಿಯುತ್ತಿರುವ ಸಂದರ್ಭದಲ್ಲಿ ಸಿಂಘಾಲ್ ಅವರ ತಲೆಗೆ ಬಟ್ಟೆಯನ್ನು ಒತ್ತಿ ಹಿಡಿದು ರಕ್ತವನ್ನು ತಡೆ ಹಿಡಿಯುವ ಕೆಲಸ ಮಾಡಿದ್ದೇ ಎಂದು ಚಿ.ನಾ ಸೋಮೇಶ್ ನೆನಪಿಸಿಕೊಳ್ಳುತ್ತಿದ್ದಾರೆ.
ರಾಮ ಮಂದಿರದಲ್ಲಿ ವಿಗ್ರಹ ಪ್ರಾಣ ಪ್ರತಿಷ್ಠೆಗೆ ಜ.22ನ್ನೇ ಆಯ್ಕೆ ಮಾಡಿರುವುದೇಕೆ?
ಸಿಂಘಾಲ್ ಅವರ ತಲೆಗೆ ಕಲ್ಲೇಟು ಬಿದ್ದು ರಕ್ತಸ್ರಾವವಾಗುತ್ತಿತ್ತು. ಕೈನಲ್ಲಿದ್ದ ಟವೆಲ್ ತೆಗೆದು ಅವರ ತಲೆ ಹಿಡಿದು ಶ್ರೀರಾಮ ಅಸ್ಪತ್ರೆಗೆ ಕರೆದುಕೊಂಡು ಹೋದೆವು. ಒಂದು ದಿನ ಅಲ್ಲಿಯೇ ಉಳಿದು ಸ್ಥಳೀಯ ಸಂಘಟನೆಯ ಕಾರ್ಯಕರ್ತರ ಮನೆಗೆ ತೆರಳಿದೆವು. ಅಲ್ಲಿಯೇ ಒಂದು ದಿನ ಸಿಂಘಾಲ್ ಅವರಿಗೆ ಸಹಾಯಕನಾಗಿದ್ದೆ. ನವೆಂಬರ್ 5 ರವರೆಗೆ ಅಯೋಧ್ಯೆಯಲ್ಲಿದ್ದು, ನಂತರ ಶ್ರೀರಾಮನ ದರ್ಶನ ಪಡೆದು ಅಲ್ಲಿನ ಮೃತ್ತಿಕೆಯನ್ನು ಕರವಸ್ತ್ರದಲ್ಲಿ ಕಟ್ಟಿಕೊಂಡು ತಂದಿದೆ. ಈಗಲೂ ಈ ಮಣ್ಣಿಗೆ ದಿನ ನಿತ್ಯ ಪೂಜೆ ಸಲ್ಲಿಸುತ್ತಿದೇನೆ ಎಂದು ಸೋಮೇಶ್ ಹೇಳುತ್ತಾರೆ. ಗಲಾಟೆ ಆದಾಗ ನನ್ನ ಗಾಯಗೊಂಡಿದ್ದ ನನ್ನ ಫೋಟೋ ಅಂದಿನ ಪತ್ರಿಕೆಯೊಂದರಲ್ಲಿ ಬಂದಿತ್ತು. ಆ ಪತ್ರಿಕೆಯಲ್ಲಿ ನನ್ನನ್ನು ನೋಡಿದ್ದ ನನ್ನ ತಾಯಿ ಬೇರೆಯವರು ತೋರಿಸಿದಾಗ ನಾನು ಸತ್ತಿರಬಹುದು ಎಂದು ಹೇಳಿದ್ದರಂತೆ. ಅಂದು ನನ್ನ ತಾಯಿ ಅಳುತ್ತಾ ಮನೆಗೆ ಹೋಗಿದ್ದರು. ಮೂರು ತಿಂಗಳಾದರೂ ಮನೆಗೆ ತಿರುಗಿ ಬಾರದಿದ್ದಾಗ ನಾನು ಸತ್ತು ಹೋಗಿದ್ದೇನೆಂದೇ ನಾನು ಬದುಕಿರುವಾಗಲೇ ನನ್ನ ತಿಥಿ ಕರ್ಮಗಳನ್ನು ಮಾಡಿ ಮುಗಿಸಿದ್ದರು. ಆದರೆ ಮೂರು ತಿಂಗಳಾದ ಬಳಿಕ ತಿರುಗಿ ಊರಿಗೆ ಬಂದ ನನ್ನನ್ನು ಕಂಡು ನನ್ನ ತಂದೆ, ತಾಯಿ ಒಡಹುಟ್ಟಿದವರು ಕಣ್ಣೀರಿಟ್ಟಿದ್ದರು. ಹೀಗೆ ನನ್ನ ಹೋರಾಟಕ್ಕೆ ಚಿಕ್ಕಂದಿನಿಂದಲೂ ಪ್ರೋತ್ಸಾಹಿಸಿದ ನನ್ನ ತಂದೆಯ ಮೇಲೆ ಹೆಮ್ಮೆ ಇದೆ. ಇಂದು ನನ್ನ ತಂದೆ ತಾಯಿ ಇಲ್ಲದಿದ್ದರೂ ನನ್ನ ಆಶಯ ಈಡೇರುತ್ತಿರುವುದಕ್ಕೆ ಸಾಕಷ್ಟು ಖುಷಿ ಇದೆ ಎನ್ನುತ್ತಾರೆ ಚಿ ನಾ ಸೋಮೇಶ್. ಅಂದು ಮಧ್ಯಪ್ರದೇಶದ ಗಡಿಯಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲೇ ಹೋಗಿದ್ದೆವು. ಎರಡು ರಾತ್ರಿ ಎರಡು ಹಗಲು ಊಟವೂ ಇಲ್ಲದೆ ಇದ್ದೆವು. ಅಷ್ಟೆಲ್ಲಾ ಕಷ್ಟಪಟ್ಟು ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಆಗುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ಅಂದು ಶಿವಕಾಶಿಯಿಂದ ತಂದ ತೀರ್ಥವನ್ನು ನಾನು ಮನೆಯಲ್ಲಿ ಪೂಜೆ ಮಾಡುತ್ತಿದ್ದೇನೆ. ಸೋಮೇಶ್ ಅವರು ಮೃತ್ತಿಕೆ ಪೂಜೆ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಯೋಧ್ಯೆ ರಾಮ ಮಂದಿರದ ಸ್ವರ್ಣ ದ್ವಾರ!