
ಬೆಂಗಳೂರು (ಜ.09): ರಾಜ್ಯಾದ್ಯಂತ ಮಂಗಳವಾರ ಬೆಳ್ಳಂಬೆಳಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ 6 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿತ್ತು. ಸಂಜೆ ವೇಳೆಗೆ ದಾಳಿ ಮುಕ್ತಾಯಗೊಳಿಸಿದ್ದು, ಒಬ್ಬೊಬ್ಬರ ಬಳಿಯೂ ಕೋಟಿ, ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ. ಒಟ್ಟು ಆರು ಜನರಿಂದ 51.11 ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 6 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು. 6 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಲ್ಲಿ ಒಟ್ಟು 35 ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಲಾಗಿತ್ತು. ಸಂಜೆ ವೇಳೆ ದಾಳಿ ಮುಕ್ತಾಯಗೊಂಡಿದೆ. ಲೋಕಾಯುಕ್ತರ ದಾಳಿ ವೇಳೆ ಪ್ರತಿಯೊಬ್ಬ ಅಧಿಕಾರಿ ಮನೆಯಲ್ಲಿಯೂ ಕೋಟಿ ಕೋಟಿ ಮೌಲ್ಯದ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಇನ್ನು ಕೇವಲ ನಗದು ಹಣ ಮಾತ್ರವಲ್ಲದೇ, ಚಿನ್ನ, ಬೆಳ್ಳಿ, ಹುಲಿ ಉಗುರು, ಶ್ರೀಗಂಧ ಸೇರಿ ಹಲವು ಸ್ಥಿತ, ಚರಾಸ್ತಿಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಯ್ತು ಹುಲಿ ಉಗುರು, ಶ್ರೀಗಂಧದ ಕೊರಡು: ಇವರೇನು ಬೆಸ್ಕಾಂ ಅಧಿಕಾರಿಯಾ? ಕಾಡುಗಳ್ಳನಾ?
ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಮತ್ತೆ ಬಂದ್: ಸಂಕ್ರಾತಿ ಹಬ್ಬಕ್ಕೆ ಶಾಕ್ ಕೊಟ್ಟ ಪೊಲೀಸರು!
ಕರ್ನಾಟಕದಲ್ಲಿ ಆಗಿಂದಾಗ್ಗೆ ಲೋಕಾಯುಕ್ತ ಇಲಾಖೆಯಿಂದ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಲೇ ಇರುತ್ತದೆ. ಈ ಮೂಲಕ ಮಿತಿಮೀರಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳ ಮನೆಗಳ ದಾಳಿ ಮಾಡಿ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. ಈ ವೇಳೆ ಆಸ್ತಿ ಗಳಿಕೆ ಸಕ್ರಮವಾಗಿದೆಯೇ ಎಂದು ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಅಥವಾ ಹಣ ಗಳಿಕೆಯನ್ನು ಮಾಡಿದ್ದಲ್ಲಿ ಅದಕ್ಕೆ ದಾಖಲೆಗಳನ್ನು ಕೇಳುತ್ತದೆ. ಒಂದು ವೇಳೆ ಅಕ್ರಮದ ಹಾದಿಯಲ್ಲಿ ಆಸ್ತಿ ಗಳಿಗೆ ಮಾಡಿದ್ದಲ್ಇ ಅವರಿಗೆ ಶಿಕ್ಷೆ ನೀಡುವಲ್ಲಿಯೂ ಲೋಕಾಯುಕ್ತ ಇಲಾಖೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ