
ಬೆಂಗಳೂರು (ಏ.23): ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನ್ನು ರಾಜ್ಯಾದ್ಯಂತ ಶನಿವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಹೊಸಬಟ್ಟೆ, ಸಿಹಿತಿನಿಸುಗಳ ಖರೀದಿ ಬರಾಟೆ ಜೋರಾಗಿತ್ತು. ಒಂದು ತಿಂಗಳ ಉಪವಾಸ ವ್ರತ ಆಚರಿಸಿ ತಿಂಗಳ ಕೊನೇ ದಿನದ ಅಮಾವಾಸ್ಯೆ ನಂತರ ಕಾಣುವ ಚಂದ್ರ ದರ್ಶನದ ಮಾರನೇ ದಿನಕ್ಕೆ ಈದುಲ್ ಫಿತುರ್(ರಂಜಾನ್) ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅದರಂತೆ ರಾಜ್ಯದೆಲ್ಲೆಡೆ ಬೆಳಗ್ಗೆ ಮಸೀದಿ ಹಾಗೂ ಈದ್ಗಾ ಮೈದಾನದಲ್ಲಿ ಹಿರಿಯರು, ಕಿರಿಯರೆಲ್ಲ ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಹೊಸಬಟ್ಟೆತೊಟ್ಟಸಂಭ್ರಮದಲ್ಲಿದ್ದ ಅವರು ನಂತರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ರಾಯರ ಮಠಕ್ಕೆ ಭೇಟಿ: ಮಂತ್ರಾಲಯ ಸೇರಿ ಸುತ್ತಮುತ್ತಲ ಗ್ರಾಮಗಳ ಮುಸ್ಲಿಮರು ಹಬ್ಬದ ಪ್ರಯುಕ್ತ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ಕೊಟ್ಟು ಶ್ರೀಗುರುರಾಯರ ದರ್ಶನ ಪಡೆದರು. ಈ ವೇಳೆ ಮಠದ ಆವರಣದಲ್ಲಿ ನಡೆದ ಚುಟುಕು ಕಾರ್ಯಕ್ರಮದಲ್ಲಿ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಮಂತ್ರಾಕ್ಷತೆ ಹಾಗೂ ಪರಿಮಳ ಪ್ರಸಾದ ವಿತರಿಸಿ ಆಶೀರ್ವದಿಸಿದರು.
ಕಾಂಗ್ರೆಸ್ ಗೆದ್ದರೆ 25 ಸಾವಿರ ಪೌರಕಾರ್ಮಿಕರ ಕೆಲಸ ಕಾಯಂ: ಸುರ್ಜೇವಾಲಾ ಭರವಸೆ
ನಂತರ ಸಂದೇಶ ನೀಡಿದ ಸ್ವಾಮೀಜಿ ‘ದೇಶದ ಸಂವಿಧಾನದಲ್ಲಿ ನಂಬಿಕೆಯನ್ನಿಟ್ಟು ನಿಮ್ಮ ಧರ್ಮ ಪಾಲನೆ ಮಾಡುವ ಜೊತೆಯಲ್ಲೇ ಎಲ್ಲರೊಂದಿಗೆ ಒಂದಾಗಿ ಬಾಳಬೇಕು. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ನುಡಿದರು. ಸಂಭ್ರಮದಲ್ಲಿ ಭಾಗಿ: ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವು ಗಣ್ಯರು, ರಾಜಕೀಯ ನಾಯಕರು ರಂಜಾನ್ ಪ್ರಾರ್ಥನೆ ವೇಳೆ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಮರಿಗೆ ಶುಭಾಶಯ ತಿಳಿಸಿದರು.
ಮಹಿಳೆಯರ ಕಣ್ಣೀರು: ಕಳೆದ ವರ್ಷ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಬಂಧಿತ ಮುಸ್ಲಿಂ ಯುವಕರನ್ನು ಜೈಲಿನಿಂದ ಬಿಡುಗಡೆಗೆ ಒತ್ತಾಯಿಸಿ ಮುಸ್ಲಿಂ ಮುಖಂಡರ ಎದುರು ನೂರಾರು ಮಹಿಳೆಯರು ಕಣ್ಣೀರು ಹಾಕಿದ ಘಟನೆ ಜರುಗಿತು. ರಂಜಾನ್‌ನ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ದಿಢೀರ್ ಚೆನ್ನಮ್ಮ ವೃತ್ತದ ಈದ್ಗಾ ಮೈದಾನಕ್ಕೆ ಆಗಮಿಸಿದ ಮಹಿಳೆಯರು ಮುಖಂಡರ ಎದುರು ಅಳಲು ತೋಡಿಕೊಂಡರು. ಕಳೆದ ವರ್ಷ ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಜೈಲು ಸೇರಿರುವ ನಮ್ಮ ಮಕ್ಕಳನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಶ್ರದ್ಧಾ ಭಕ್ತಿಯ ರಂಜಾನ್ ಆಚರಣೆ: ಈದ್ಗಾ ಮೈದಾನ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ
ಮುಸ್ಲಿಮರೆಲ್ಲ ಸೇರಿ ಸಂತೋಷದಿಂದ ರಂಜಾನ್ ಆಚರಣೆ ಮಾಡುತ್ತಿದ್ದೀರಿ. ಆದರೆ, ನಾವು ಕಳೆದ ಒಂದು ವರ್ಷದಿಂದ ಕಣ್ಣೀರಲ್ಲಿ ಕೈತೊಳೆಯುತ್ತಿದ್ದೇವೆ. ನಮಗೂ ಸೂಕ್ತ ನ್ಯಾಯ ಕೊಡಿಸಿ, ಜೈಲಿನಲ್ಲಿರುವ ನಮ್ಮೆಲ್ಲ ಕುಟುಂಬದ ಸದಸ್ಯರನ್ನು ಬಿಡುಗಡೆಗೊಳಿಸಿ ಆಕ್ರೋಶದಿಂದಲೇ ಮನವಿ ಮಾಡಿದರು. ಕಳೆದ ವರ್ಷ ಏ.16ರಂದು ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧಿತ 149 ಮುಸ್ಲಿಂ ಯುವಕರು ಬಳ್ಳಾರಿ, ಕಲಬುರ್ಗಿ, ಮೈಸೂರು ಜೈಲಲ್ಲಿಯೇ ಇಂದಿಗೂ ಕಾಲ ಕಳೆಯುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ