Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ!

By Santosh Naik  |  First Published Feb 27, 2024, 7:25 PM IST

ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿ ವಿಧಾನಸೌಧದ ಆವರಣದಲ್ಲಿಯೇ ದೇಶದ್ರೋಹದ ಘೋಷಣೆ ಕೂಗಿರುವ ಘಟನೆ ನಡೆದಿದೆ. ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ನಾಸಿರ್‌ ಹುಸೇನ್‌ನ ಬೆಂಬಲಿಗರ ಪೈಕಿ ಒಬ್ಬ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗಿದ್ದಾನೆ.
 


ಬೆಂಗಳೂರು (ಫೆ,27): ರಾಜ್ಯ ಸರ್ಕಾರದ ವತಿಯಿಂದ ನಡೆದ ಸಂವಿಧಾನ ಕಾರ್ಯಕ್ರಮಕ್ಕೆ ಸಂವಿಧಾನ ವಿರೋಧಿ ನಿತಾಶಾ ಕೌಲ್‌ರನ್ನು ಕರೆದುಕೊಂಡು ವಿವಾದ ಸೃಷ್ಟಿಸಿದ್ದ ರಾಜ್ಯ ಸರ್ಕಾರ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ. ಮಂಗಳವಾರ ರಾಜ್ಯಸಭಾ ಚುನಾವಣೆ ನಡೆದು ಅದರ ಫಲಿತಾಂಶ ಘೋಷಣೆಯಾದ ಬಳಿಕ, ವಿಧಾನಸೌಧದ ಆವರಣದಲ್ಲಿಯೇ ದೇಶದ್ರೋಹದ ಘೋಷಣೆ ಮೊಳಗಿರುವ ಘಟನೆ ನಡೆದಿದೆ. ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಅವರ ಬೆಂಬಲಿಗರ ಪೈಕಿ ಒಬ್ಬರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ದಾರೆ. ನಾಸಿರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್‌ ಜಿಂದಾಬಾದ್‌, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ಪಕ್ಕದಲ್ಲಿದ್ದ ಕೆಲ ಕಾರ್ಯಕರ್ತರು ಆತನ ಬಾಯಿಮುಚ್ಚಿಸಿರುವ ವಿಡಿಯೋ ವೈರಲ್‌ ಆಗಿದೆ.

ನಡಿಯಯ್ಯಾ ಆಚೆ ಎಂದ ನಾಸಿರ್‌ ಹುಸೇನ್‌: ನಾಸಿರ್ ಹುಸೇನ್‌ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದ ವಿಚಾರದ ಕುರಿತಾಗಿ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ವೇಳೆ ನಾಸಿರ್ ಹುಸೇನ್‌ ಸಿಡಿಮಿಡಿಗೊಂಡಿದ್ದಾರೆ. 'ಏಯ್ ನಡಿಯಯ್ಯಾ ಆಚೆ ಎಂದು ನಾಸಿರ್‌ ಹುಸೇನ್‌ ಕೂಗಾಡಿ ಹೋಗಿದ್ದಾರೆ. 'ಏಯ್ ನಡಿಯೋ.. ಯಾವನೋ ಅವನು. ಹುಚ್ಚ ನ ಹಾಗೆ ಪ್ರಶ್ನೆ ಕೇಳಬೇಡ ಎಂದು ವರದಿಗಾರರ ಮೇಲೆಯೇ  ನಾಸಿರ್ ಹುಸೇನ್‌ ಕೂಗಾಡಿದ ವಿಡಿಯೋ ಕೂಡ ವೈರಲ್‌ ಆಗಿದೆ.

Tap to resize

Latest Videos

ಆ ರೀತಿ ಘೋಷಣೆ ಯಾರು ಕೂಗಿದ್ದಾರೆ ಗೊತ್ತಿಲ್ಲ. ಯಾರೇ ಮಾಡಿದ್ದರೂ ಅದೂ ತಪ್ಪು. ಯಾರು ಮಾಡಿದ್ದಾರೆ ಅನ್ನೋದನ್ನ ಪರಿಶೀಲನೆ ಮಾಡಬೇಕು ಎಂದು ಜಿಸಿ ಚಂದ್ರಶೇಖರ್ ಹೇಳಿದ್ದಾರೆ. ಇನ್ನೊಂದೆಡೆ  ಘಟನೆಯ ಬಗ್ಗೆ ಮಾತನಾಡಿರುಗ ಬಿವಿ ಶ್ರೀನಿವಾಸ್‌, ಉದ್ದೇಶಪೂರ್ವಕವಾಗಿ ಯಾರಾದ್ರು ಮಾಡಿದ್ದಾರೋ ಗೊತ್ತಿಲ್ಲ. ಸೋತಿದ್ದಾರೆ ಅಂತ ಮಾಡಿದ್ದಾರೊ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹೋಗುವ ವೇಳೆ ಭಾರತ್‌ ಮಾತಾ ಕೀ ಜೈ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಮೋದ್‌ ಮುತಾಲಿಕ್‌, ಮುಸ್ಲಿಮರ ಓಲೈಕೆಗಾಗಿ ಹೀಗೆ ಮಾಡ್ತಿದ್ದಾರೆ. ನಾಸಿರ್‌ ಹುಸೇನ್‌ ಅವರ ರಾಜ್ಯಸಭಾ ಸ್ಥಾನ ಈ ಕೂಡಲೇ ರದ್ದಾಗಬೇಕು. ಈ ದೇಶವನ್ನು ಪಾಕಿಸ್ತಾನ ಮಾಡಲು ಇವರು ಹೊರಟಿದ್ದಾರೆ. ಇಂಥವರನ್ನು ನರಕವಾಗಿರುವ ಪಾಕಿಸ್ತಾನಕ್ಕೇ ಕಳಿಸಬೇಕು ಎಂದು ಹೇಳಿದ್ದಾರೆ.

Siddaramaiah: ಜೆಡಿಎಸ್ ಅಭ್ಯರ್ಥಿ ಗೆಲ್ಲಲು 45 ಮತಗಳಿಲ್ಲ, ಆತ್ಮಸಾಕ್ಷಿ ಅಂತಾರಲ್ಲ, ಆತ್ಮಸಾಕ್ಷಿ ಅನ್ನೋ ಮತ ಇದ್ಯಾ ?: ಸಿಎಂ

ದೂರು ನೀಡಲು ಬಿಜೆಪಿ ನಿರ್ಧಾರ: ಇನ್ನು ಬಿಜೆಪಿ ಈ ಕುರಿತಾಗಿ ದೂರು ನೀಡಲು ನಿರ್ಧಾರ ಮಾಡಿದೆ. ವಿಧಾನಸೌಧದ ಆವರಣದಲ್ಲಿಯೇ ಈ ರೀತಿಯ ಘೋಷಣೆ ಕೂಗಿದ್ದು ಸರಿಯಲ್ಲ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಖಂಡಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್‌ ಎಂದಿರುವುದು ದೇಶದ್ರೋಹದ ಕೇಸ್‌ ಎಂದಿದ್ದಾರೆ. ಇನ್ನು ಬೆಂಗಳೂರು ಪೊಲೀಸ್‌ ಕಮೀಷನರ್‌ ಬಿ. ದಯಾನಂದ್‌, ಈ ಕುರಿತಾಗಿ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.. ಈಗಷ್ಟೇ ವಿಚಾರ ಗೊತ್ತಾಗಿದೆ. ಇದರ ಬಗ್ಗೆ ಪರಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

DK Shivakumar: ಕಾಂಗ್ರೆಸ್‌ಗೆ ಆತ್ಮಸಾಕ್ಷಿಯ ವೋಟು ಹಾಕ್ತಾರೆ, ದುಡ್ಡಿದೆ ಎಂದು ಶಾಸಕರನ್ನ ಬೆದರಿಸಿದ್ರೆ ಆಗಲ್ಲ: ಡಿಕೆಶಿ

click me!