ರಾಹುಲ್ ಗಾಂಧಿ ಪ್ರಕರಣವನ್ನು ವ್ಯಕ್ತಿಗತವಾಗಿ ನೋಡುತ್ತಿಲ್ಲ. ಆದರೆ, ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುವ ಪ್ರವೃತ್ತಿಗೆ ಇದು ಎಚ್ಚರಿಕೆಯ ಗಂಟೆ ಎಂದಷ್ಟೇ ಹೇಳಬಲ್ಲೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ (ಮಾ.24): ಮೋದಿ ಸರ್‌ನೇಮ್ ಕೇಸ್‌ನಲ್ಲಿ ದೋಷಿಯಾಗಿರುವ ರಾಹುಲ್ ಗಾಂಧಿಯ ಸಂಸದ ಸ್ಥಾನವನ್ನು ಲೋಕಸಭಾ ಕಾರ್ಯಾಲಯ ಅನರ್ಹ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ, ಇನ್ನು ಮುಂದೆ ರಾಜಕೀಯ ಎದುರಾಳಿಗಳಿರಬಹುದು ಅಥವಾ ಯಾರ ಬಗ್ಗೆಯೂ ಇರಬಹುದು ಬಾಯಿಗೆ ಬಂದ ಹಾಗೇ ಮಾತನಾಡುವಂಥದ್ದು, ಅವಹೇಳನಕಾರಿಯಾಗಿ ಮಾತನಾಡುವಂತದ್ದು ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೀಡಲಾಗಿರುವ ಗಟ್ಟಿಯಾದ ಸಂದೇಶ ಇದು. ಇವತ್ತಿನ ಘಟನೆ ಈ ಸಂದೇಶ ರವಾನಿಸಿದೆ ಅಂತಾ ಖಚಿತವಾಗಿ ಅನಿಸುತ್ತಿದೆ ಎಂದು ಬೆಳಗಾವಿ ಜಿಲ್ಲೆ ಗೋಕಾಕನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ರಾಜಕೀಯ ಏನೇ ಇರಲಿ ತಂದೆ, ತಾಯಿ ಬಗ್ಗೆ ಮಾತನಾಡುವಂಥದ್ದು, ಅವರ ಬಗ್ಗೆ ಅವಹೇಳನವಾಗಿ ಮಾತನಾಡುವಂತದ್ದು ಬಾಯಿಗೆ ಬಂದ ಹಾಗೇ ಆರೋಪ ಮಾಡುವಂಥದ್ದು, ಕುಟುಂಬವನ್ನು ಅವಮಾನ ಮಾಡುವಂತಹ ಪ್ರಯತ್ನ ಯಾರೂ ಮಾಡಬಾರದು. ಇಂತಹ ರಾಜಕೀಯ ದುರ್ನಡತೆಗೆ ಇನ್ನುಮುಂದೆ ಕಡಿವಾಣ ಬೀಳಬೇಕು. ರಾಹುಲ್ ಗಾಂಧಿಯನ್ನ ವ್ಯಕ್ತಿಗತವಾಗಿ ನೋಡುತ್ತಿಲ್ಲ. ಈ ರೀತಿ ಮಾಡುವ ಎಲ್ಲರಿಗೂ ಎಚ್ಚರಿಕೆ ಗಂಟೆ ಎಂದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತಾಗಿ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ್, ರಾಹುಲ್ ಗಾಂಧಿ ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವುದು ಕಾನೂನಿನ ಪ್ರಕ್ರಿಯೆ. ಹಾಗಾಗಿ ಈ ಬಗ್ಗೆ ಮಾತನಾಡುವುದಕ್ಕೆ ಏನು ಇಲ್ಲ ಎಂದಿದ್ದಾರೆ. ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಹೆದರಿಸಿ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಂತಹ ಸಂಸ್ಕ್ರತಿ ನಮ್ಮ ಪಕ್ಷದಲ್ಲಿಲ್ಲ. ಹೇಳಿಕೆ ನೀಡಿದವರನ್ನೆ ಈ ಬಗ್ಗೆ ಕೇಳಬೇಕು ಎಂದರು. ಯಡಿಯೂರಪ್ಪ ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಅವರ ಹಾಗೂ ಬಿ.ಎಲ್.ಸಂತೋಷ್ ನಡುವೆ ಯಾವುದೇ ಫೈಟ್ ಇಲ್ಲ. ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರನ್ನೆ ಪ್ರಶ್ನೆ ಕೇಳಿ ಎಂದು ಕ್ಷೇತ್ರ ಹುಡುಕಾಟದ ಬಗ್ಗೆ ಪ್ರತಿಕ್ರಿಯಿಸಿದರು.
Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್!
ರಾಮನಗರದಲ್ಲಿ ಇದೇ 27 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಇಲ್ಲಿ ಯಾವುದೇ ಪ್ರೋಟೊಕಾಲ್ ಉಲ್ಲಂಘನೆಯಾದಂತೆ ಕಾರ್ಯಕ್ರಮ ಆಯೋಜಿಸಿದ್ದೆವೆ. ಎಲ್ಲ ಜನಪ್ರತಿನಿಧಿಗಳಿಗೂ ಆಧ್ಯತೆ ನೀಡುತ್ತೆವೆ. ಅವರ ಸ್ಥಾನಕ್ಕೆ ಯಾವುದೇ ಧಕ್ಕೆಯಾಗದಂತೆ ಕಾರ್ಯಕ್ರಮ ನಡೆಯಲಿದೆ. ರಾಮದೇವರ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಾಣ ಸಂಬಂಧ ಡಿಪಿಆರ್ ಸಿದ್ದಪಡಿಸುವ ಕೆಲಸ ನಡೆಯುತ್ತಿದೆ. ಅವಿರತವಾಗಿ ರಾಮನ ಕೆಲಸಕ್ಕೆ ಶ್ರಮಿಸುತ್ತಿದ್ದೆವೆ ಎಂದರು.
Breaking: ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ!
ಅಶ್ವಥ್ ನಾರಾಯಣ್ ಎಲ್ಲಿಗು ಹೋಗುವುದಿಲ್ಲ. ಬಿಜೆಪಿಯೇ ಭರವಸೆ. ನಮ್ಮಲ್ಲಿಯೇ ಗೆಲುವು ಸಾಧಿಸಲಿದ್ದಾರೆ. ನಮ್ಮ ಪಕ್ಷಕ್ಕೆ ಬರಲು ಅನೇಕ ತುದಿಗಾಲಿನಲ್ಲಿ ಇದ್ದಾರೆ. ಹೀಗಾಗಿ ಟಿಕೆಟ್ ಪೈಪೋಟಿಯು ಇದೆ. ಉರಿಗೌಡ ನಂಜೇಗೌಡ ಅವರದ್ದೆಲ್ಲವು ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಲ್ಲಾ ಸಂಸದರಿಗೂ ಇದು ಪಾಠವಾಗ್ಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ