POCSO Case: ವೇಶ್ಯಾವಾಟಿಕೆ ಗ್ರಾಹಕನ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಮಾಡಲು ಕರ್ನಾಟಕ ಹೈಕೋರ್ಟ್ ನಕಾರ!

Published : Nov 07, 2022, 10:36 PM ISTUpdated : Nov 08, 2022, 08:20 AM IST
POCSO Case: ವೇಶ್ಯಾವಾಟಿಕೆ ಗ್ರಾಹಕನ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಮಾಡಲು ಕರ್ನಾಟಕ ಹೈಕೋರ್ಟ್ ನಕಾರ!

ಸಾರಾಂಶ

ವೇಶ್ಯೆಯ ಬಳಿ ತೆರಳುವ ಗ್ರಾಹಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತಿರಸ್ಕರಿಸುವ ಮೂಲಕ, ಕೇಸ್‌ ರದ್ದು ಮಾಡಲು ನಿರಾಕರಿಸಿದ್ದಾರೆ,  

ಬೆಂಗಳೂರು (ನ.7): ನಾನು ವೇಶ್ಯೆಯ ಬಳಿ ತೆರಳಿದ್ದ ವ್ಯಕ್ತಿ, ಅವರ ಸೇವೆಯನ್ನು ಬಳಸಿಕೊಂಡಿದ್ದೇನೆ ಅದಕ್ಕಾಗಿ ಅನೈತಿಕ ವಿಚಾರ ತಡೆಗಟ್ಟುವಿಕೆ ಕಾಯಿದೆಯಡಿ ವಿಚಾರಣೆಗೆ ಒಳಪಡಿಸಬೇಕೇ ಹೊರತು  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕಬಾರದು ಎಂದು ವಾದ ಮಾಡಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ತಿಸ್ಕರಿಸಿದೆ. ವೇಶ್ಯಾವಾಟಿಕೆ ಗ್ರಾಹಕ ಆಗಿದ್ದರೂ, ಅವರ ವಿರುದ್ಧದ ಪೋಸ್ಕೋ ಕೇಸ್‌ ರದ್ದು ಮಾಡಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಇದ್ದ ಪೀಠ ಇತ್ತೀಚೆಗೆ ನಿರಾಕರಿಸಿದೆ. “ಅರ್ಜಿದಾರರ ವಾದವನ್ನು ಅವರು ಹೇಳಿದಂತೆ ಗ್ರಾಹಕ ಎಂದು ಒಪ್ಪಿಕೊಂಡು ಬಿಟ್ಟುಬಿಟ್ಟರೆ,  ಅದು ಆಪಾದಿತ ಎಲ್ಲಾ ಅಪರಾಧಗಳ ಅಂಶಗಳನ್ನು ಪ್ರಾಥಮಿಕವಾಗಿ ಪೂರೈಸುವ ಅಂತಹ ಕೃತ್ಯಗಳಲ್ಲಿ ತೊಡಗಿರುವ ಅರ್ಜಿದಾರರ ಚಟುವಟಿಕೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತದೆ. ಯಾವುದೇ ರೀತಿಯಲ್ಲಿಯೂ ಈ  ಪ್ರಕರಣದಲ್ಲಿ ಆಪಾದಿತ ರೀತಿಯ ಆರೋಪವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಸ್ಪಾ, ವೇಶ್ಯಾಗೃಹ ಅಥವಾ ಲಾಡ್ಜ್‌ನಲ್ಲಿ ನಡೆದ ಶೋಧ ಕಾರ್ಯಾಚರಣೆಯ ವೇಳೆ ವ್ಯಕ್ತಿಗಳು ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿರುವ ನಿದರ್ಶನಗಳಿಂದ ನ್ಯಾಯಾಲಯವು ಪ್ರಕರಣವನ್ನು ಪ್ರತ್ಯೇಕಿಸಿದೆ. ಈ ಪ್ರಕರಣದಲ್ಲಿ ಅರ್ಜಿದಾರನ ವಿರುದ್ಧ ಸ್ವತಃ ಅಪ್ರಾಪ್ತ ಸಂತ್ರಸ್ತೆಯೇ ದೂರು ದಾಖಲು ಮಾಡಿದ್ದಾಳೆ ಎಂದು ಕೋರ್ಟ್‌ ಹೇಳಿದೆ. "ಇದು ಸಂತ್ರಸ್ತೆ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರಕರಣವಲ್ಲ ಮತ್ತು ವೇಶ್ಯಾವಾಟಿಕೆ ರಾಕೆಟ್ ನಡೆಸಲು ಬಳಸಲಾದ ನಿರ್ದಿಷ್ಟ ಸ್ಥಳದಲ್ಲಿ ಪೊಲೀಸರು ಶೋಧ ನಡೆಸಿ ಯಾವುದೇ ಘಟನೆಯನ್ನು ಪತ್ತೆಹಚ್ಚಿದ ಪ್ರಕರಣವಲ್ಲ" ಎಂದು ನ್ಯಾಯಾಧೀಶರು ವಿವರಿಸಿದ್ದಾರೆ.

ಇದಲ್ಲದೆ, ಆಪಾದಿತ ಅಪರಾಧಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಒಳಗೊಂಡಿವೆ ಎಂದು ಕೋರ್ಟ್‌ ಹೇಳಿದೆ. ದೂರು ಕೊಟ್ಟಿರುವ ಸಂತ್ರಸ್ತೆಯ ವಿಡಿಯೋಗಳನ್ನು ಅನೇಕ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಲಾಗುವುದು ಎಂದು ಅಪರಾಧ ಎಸಗಿದವನು ಹೇಳಿದ್ದ ಎನ್ನುವುದನ್ನೂ ಕೋರ್ಟ್‌ ಗಮನಿಸಿದೆ. ಅಪ್ರಾಪ್ತೆಯ ಜೊತೆ ಲೈಂಗಿಕ ಕೆಲಸ ಮಾಡಿದ್ದೂ ಅಲ್ಲದೆ, ಅದನ್ನು ತನ್ನ ಫೋನ್‌ನಲ್ಲಿ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಗೂ ಇತರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಕೋರ್ಟ್‌ ಹೇಳಿದೆ.

ಚುಂಬನ, ಮುದ್ದಾಟ ಅಸ್ವಾಭಾವಿಕ ಅಪರಾಧವಲ್ಲ ಎಂದ ಹೈಕೋರ್ಟ್!

ದೂರಿನ ಪ್ರಕಾರ, ಅಪ್ರಾಪ್ತೆಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ವೇಶ್ಯಾವಾಟಿಕೆಗೆ ಬಲವಂತವಾಗಿ ತಳ್ಳಲಾಗಿದೆ. ಆದರೆ, ಆಕೆ ತನ್ನನ್ನು ವೇಶ್ಯಾವಾಟಿಕೆಗೆ ತಳ್ಳಿ ವ್ಯಕ್ತಿಯ ಕೈಯಿಂದ ತಪ್ಪಿಸಿಕೊಂಡು ದೂರು ದಾಖಲಿಸಿದ್ದಾಳೆ. ಅರ್ಜಿದಾರರ ಮೇಲೆ ಅಪಹರಣ, ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಪ್ರಚೋದನೆ ಮತ್ತು ಅಪ್ರಾಪ್ತ ವಯಸ್ಕನ ಮೇಲೆ ತೀವ್ರವಾದ ಲೈಂಗಿಕ ದೌರ್ಜನ್ಯದ ಅಪರಾಧಗಳನ್ನು ಆರೋಪಿಸಲಾಗಿದೆ. ದೂರು ನೀಡಿರುವ ಹುಡುಗಿ ಅನೇಕ ಜನರ ಮೇಲೆ ಆರೋಪ ಮಾಡಿದ್ದಾರೆ ಮತ್ತು ಅವರ ವಿರುದ್ಧ ಅನೇಕ ಎಫ್‌ಐಆರ್)ದಾಖಲಿಸಲಾಗಿದೆ, ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ವಾದಿಸಲಾಯಿತು. 

Police abuse Women: ಸಂತ್ರಸ್ತೆಯ ತಾಯಿಯನ್ನೇ ಬೆತ್ತಲಾಗಲು ಹೇಳಿದ, ಪೊಲೀಸ್ ಕಾಮಪುರಾಣ

ಈ ವಾದವನ್ನು ಏಕ-ನ್ಯಾಯಾಧೀಶರು ತಿರಸ್ಕರಿಸಿದರು, ಏಕೆಂದರೆ ಪ್ರತಿಯೊಬ್ಬ ಪುರುಷನೊಂದಿಗಿನ ದೈಹಿಕ ಸಂಪರ್ಕವು ಪ್ರತ್ಯೇಕ ಘಟನೆಯಾಗಿದೆ ಎಂದು ಹೇಳಿದೆ. ಸಂತ್ರಸ್ಥೆ ಒಬ್ಬಳೇ ಒಂದೇ ಎಂಬ ಕಾರಣಕ್ಕೆ, ಕೇವಲ ಒಂದು ಅಪರಾಧವನ್ನು ಮಾತ್ರ ದಾಖಲಿಸಬೇಕು ಮತ್ತು ಅವರೆಲ್ಲರನ್ನೂ ಒಂದೇ ಕೇಸ್‌ನ ಅಡಿಯಲ್ಲಿ ಪರಿಗಣಿಸಬೇಕು ಎಂದು ಹೇಳಲಾಗುವುದಿಲ್ಲ ಎಂದು ಕೋರ್ಟ್‌ ತಿಳಿಸಿದೆ. ಈ ಕಾರಣ ನೀಡಿ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!