ಕಾಲುಬಾಯಿ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯಾದ್ಯಂತ ನವೆಂಬರ್ 7ರಿಂದ ಡಿಸೆಂಬರ್ 7ರವರೆಗೆ ಒಂದು ತಿಂಗಳವರೆಗೆ ನಡೆಯಲಿರುವ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ್ ಅವರು ಔರಾದ (ಬಿ) ಪಶು ಆಸ್ಪತ್ರೆ ಅವರಣದಲ್ಲಿ ಸೋಮವಾರ ಚಾಲನೆ ನೀಡಿದರು.
ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್
ಬೀದರ್ (ನ.07): ಕಾಲುಬಾಯಿ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ರಾಜ್ಯಾದ್ಯಂತ ನವೆಂಬರ್ 7ರಿಂದ ಡಿಸೆಂಬರ್ 7ರವರೆಗೆ ಒಂದು ತಿಂಗಳವರೆಗೆ ನಡೆಯಲಿರುವ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ್ ಅವರು ಔರಾದ (ಬಿ) ಪಶು ಆಸ್ಪತ್ರೆ ಅವರಣದಲ್ಲಿ ಸೋಮವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಲಸಿಕೆಯನ್ನು ಸರಬರಾಜು ಮಾಡಿದ್ದು, ಪಶುಪಾಲನಾ ಇಲಾಖೆಯ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಹಕಾರ ಪಡೆದು ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಎತ್ತು, ಹೋರಿ, ಹಸು, ಎಮ್ಮೆ ರೋಗಕ್ಕೆ ತುತ್ತಾಗುವ ರಾಜ್ಯದಲ್ಲಿರುವ ಎಲ್ಲ ರಾಸುಗಳಿಗೆ ಲಸಿಕೆ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕಡು ಬಡವರಿಗೆ ಶಾಶ್ವತ ಸೂರು, ಪ್ರಧಾನಿ ಮೋದಿ ಸಂಕಲ್ಪ: ಸಚಿವ ಎಂಟಿಬಿ ನಾಗರಾಜ್
ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸುವುದೊಂದೇ ಮಾರ್ಗವಾಗಿದ್ದು, ರೋಗದಿಂದ ಪೂರ್ಣ ಸುರಕ್ಷತೆಗಾಗಿ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಲಸಿಕೆ ಹಾಕುವುದು ಅವಶ್ಯಕವಾಗಿರುತ್ತದೆ. ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಕೂಡ ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುವ ಸಾಮೂಹಿಕ ಲಸಿಕಾಕರಣ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಮನೆಗೆ ಬಂದು ಲಸಿಕೆ ನೀಡುತ್ತಾರೆ. ಅವರಿಗೆ ಅಗತ್ಯ ಸಹಕಾರ ನೀಡಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಜಾನುವಾರು ಸಾಕುತ್ತಿರುವ ಎಲ್ಲ ರೈತರು ಅಭಿಯಾನದ ಸದುಪಯೋಗ ಪಡೆಯಬೇಕು ಎಂದು ಸಚಿವರು ರೈತರಲ್ಲಿ ಮನವಿ ಮಾಡಿದರು.
Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್: ಸಚಿವ ಅಶ್ವತ್ಥ್
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಸಂತೋಷ ಪೋಕಲವಾರ್, ಸದಸ್ಯರಾದ ಬನ್ಸಿನಾಯಕ್, ಸಂಜು ವಡೆಯರ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶ್ರೀನಿವಾಸ ಖೂಬಾ, ಸಚಿನ್ ರಾಠೋಡ್, ಅಶೋಕ ಅಲ್ಮಾಜೆ, ಕೇರಬಾ ಪವಾರ, ಯಾದು ಮೇತ್ರೆ, ಬಾಬು ರಾಠೋಡ, ರವಿ ಔರಾದೆ, ಇಲಾಖೆಯ ಉಪನಿರ್ದೇಶಕರಾದ ಡಾ.ನರಸಪ್ಪಾ, ಪಾಲಿಕ್ಲಿನಿಕ್ ಉಪ ನಿರ್ದೇಶಕರಾದ ಡಾ.ರವೀಂದ್ರಕುಮಾರ, ವೈದ್ಯಾಧಿಕಾರಿಗಳಾದ ಡಾ.ರಾಜಕುಮಾರ ಬಿರಾದಾರ, ಡಾ.ಸೋಮಶೇಖರ ಹೊಗದಾಪೂರೆ, ಗಣಾಧೀಶ್ವರ ಸ್ವಾಮಿ, ಡಾ.ಓಂಕಾರ ಪಾಟೀಲ ಸೇರಿದಂತೆ ಇತರರಿದ್ದರು.