PSI Recruitment Scam: 12 ಜನ ಆರೋಪಿಗಳಿಗೆ ಜಾಮೀನು ಮಂಜೂರು‌

By Govindaraj S  |  First Published Nov 19, 2022, 12:40 PM IST

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದ ಹತ್ತು ಮಂದಿ ಅಭ್ಯರ್ಥಿಗಳಿಗೆ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಜಾಮೀನು ನೀಡಿರುವ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಆರೋಪಿಗಳಾಗಿದ್ದ ಸರ್ಕಾರಿ ಅಧಿಕಾರಿಗಳಿಬ್ಬರಿಗೆ ಜಾಮೀನು ನಿರಾಕರಿಸಿದೆ.


ಬೆಂಗಳೂರು (ನ.19): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದ ಹತ್ತು ಮಂದಿ ಅಭ್ಯರ್ಥಿಗಳಿಗೆ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಜಾಮೀನು ನೀಡಿರುವ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಆರೋಪಿಗಳಾಗಿದ್ದ ಸರ್ಕಾರಿ ಅಧಿಕಾರಿಗಳಿಬ್ಬರಿಗೆ ಜಾಮೀನು ನಿರಾಕರಿಸಿದೆ.

ಪ್ರಕರಣದಲ್ಲಿ ಅಭ್ಯರ್ಥಿಗಳಾದ ಎಸ್‌.ಜಾಗೃತ್‌ ಮತ್ತು ರಚನಾ ಹಣಮಂತ ಸೇರಿದಂತೆ 10 ಮಂದಿ ಅಭ್ಯರ್ಥಿಗಳು ಜಾಮೀನು ಕೋರಿದ್ದರು. ಈ ಮೂಲಕ ಹಣ ನೀಡಿ ಪಿಎಸ್‌ಐ ಹುದ್ದೆ ಗಿಟ್ಟಿಸಲು ಪ್ರಯತ್ನಿಸಿದ್ದರು ಎನ್ನಲಾದ ಇವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಆರೋಪಿಗಳಾಗಿರುವ ಪೊಲೀಸ್‌ ಇಲಾಖೆಯ ವಿಭಾಗ ಅಧಿಕಾರಿ ಆರ್‌. ಮಂಜುನಾಥ್‌ (ಆರೋಪಿ 30) ಮತ್ತು ಬ್ಯಾಡರಹಳ್ಳಿ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಹರೀಶ್‌ಗೆ (ಆರೋಪಿ 34) ಜಾಮೀನು ನಿರಾಕರಿಸಲಾಗಿದೆ.

Tap to resize

Latest Videos

Karnataka PSI Scam: ಪಿಎಸ್‌ಐ ಕೇಸ್‌ ತನಿಖಾಧಿಕಾರಿ ಉಮೇಶ್ ಕುಮಾರ್‌ ವರ್ಗಾವಣೆಗೆ ಅಸಮಾಧಾನ

ಜಾಮೀನು ಪಡೆದ ಅಭ್ಯರ್ಥಿಗಳು: ಜಾಗೃತ್‌ (ಆರೋಪಿ 1), ಸೋಮನಾಥ್‌ (ಆರೋಪಿ 3), ರಘುವೀರ್‌ (ಆರೋಪಿ 4), ಮಮತೇಶ್‌ ಗೌಡ (ಆರೋಪಿ 10), ಸಿ.ಎಂ. ನಾರಾಯಣ (ಆರೋಪಿ 12), ಆರ್‌.ಮಧು (ಆರೋಪಿ 14), ಸಿ.ಕೆ. ದಿಲೀಪ್‌ ಕುಮಾರ್‌ (ಆರೋಪಿ 16 ), ರಚನಾ ಹಮಮಂತ (ಆರೋಪಿ 17), ಪ್ರವೀಣ್‌ ಕುಮಾರ್‌ (ಆರೋಪಿ 19), ರಾಘವೇಂದ್ರ (ಆರೋಪಿ 22).

ಖಾಸಗಿ ವ್ಯಕ್ತಿಗಳು: ಕೇಶವಮೂರ್ತಿ (ಆರೋಪಿ 23) ಮತ್ತು ಶರತ್‌ ಕುಮಾರ್‌ (ಆರೋಪಿ 27).

ಅಮೃತ್‌ ಪಾಲ್‌ ಸಿಐಡಿ ವಶಕ್ಕೆ: ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪ್ರಕರಣ ಸಂಬಂಧ ಮತ್ತೆ ಹೆಚ್ಚಿನ ತನಿಖೆ ಸಲುವಾಗಿ ರಾಜ್ಯ ಪೊಲೀಸ್‌ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಎಡಿಜಿಪಿ ಅಮೃತ್‌ ಪಾಲ್‌ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಗರಣ ಸಂಬಂಧ ಬೆಂಗಳೂರು, ತುಮಕೂರು, ಕಲಬುರಗಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. 

PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ

ಹೀಗಾಗಿ ಈ ಪ್ರಕರಣಗಳ ತನಿಖೆ ಸಲುವಾಗಿ ಅಮೃತ್‌ ಪಾಲ್‌ ಅವರನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದ್ದು, ಸಿಐಡಿ ಕೇಂದ್ರ ಕಚೇರಿಯಲ್ಲಿ ಅವರ ವಿಚಾರಣೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೇಮಕಾತಿ ಅಕ್ರಮ ಹಗರಣದಲ್ಲಿ ಬಂಧಿತರಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಎಡಿಜಿಪಿ ಅವರನ್ನು ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಸಿಐಡಿ ಮನವಿ ಮಾಡಿತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಯನ್ನು ಸಿಐಡಿ ವಶಕ್ಕೊಪ್ಪಿಸಿ ಆದೇಶಿಸಿದೆ.

click me!