ರಾಜ್ಯ ಪೊಲೀಸ್ ಇಲಾಖೆಯ ಪಿಎಸ್ ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೆಸರು ಪ್ರಸ್ತಾಪಿಸಿದ್ದ ಮಾಗಡಿ ಮೂಲದ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜೂ.6): ರಾಜ್ಯ ಪೊಲೀಸ್ ಇಲಾಖೆಯ ಪಿಎಸ್ ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಈ ಹಿಂದೆ ವಿಚಾರಣೆ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೆಸರು ಪ್ರಸ್ತಾಪಿಸಿದ್ದ ಮಾಗಡಿ ಮೂಲದ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಈತನ ಜೊತೆಗೆ ಇತರೆ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್ ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಈ ತಿಂಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸುತ್ತಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಹರೀಶ್, ನೆಲಮಂಗಲ ಪೊಲೀಸ್ ಠಾಣೆಯ ಮೋಹನ್ ಕುಮಾರ್ ಹಾಗೂ ಅಭ್ಯರ್ಥಿ ದರ್ಶನ್ ಗೌಡನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಪಿಎಸ್ಐ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಶ್ನಿಸಿದ್ದರು.
ಮೋಸದ ಜಾಲದಲ್ಲಿ ಹಾಲಿ ಸಚಿವ ಅಶ್ವಥ್ ನಾರಾಯಣ್ ಹಾಗೂ ಸಹೋದರ ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು. ಇದು ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ದರ್ಶನ್ ಗೌಡ ಸೇರಿದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಸಿಐಡಿ ದೂರು ನೀಡಿತ್ತು. ಕೆಲ ದಿನಗಳ ಬಳಿಕ ಸಿಐಡಿ ಪೊಲೀಸರು ಬಿಟ್ಟು ಕಳುಹಿಸಿದ್ದರು.
TEXTBOOK REVISION; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!
ಪಿಎಸ್ಐ ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಕೋಟಾದಡಿ ಐದನೇ ಸ್ಥಾನ ಪಡೆದಿದ್ದ ದರ್ಶನ್ ಗೌಡನನ್ನು ಈ ಹಿಂದೆ ಸಿಐಡಿ ವಶಕ್ಕೆ ಪಡೆದುಕೊಂಡಿತ್ತು. ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದಿದ್ದ. ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದ. ನಂತರ ಓಎಂಆರ್ ಶೀಟ್ ತಿದ್ದಲಾಗಿತ್ತು. ಒಂಎಆರ್ ಶೀಟ್ ಎಫ್ಎಸ್ ಎಲ್ ಗೆ ಕಳುಹಿಸಿದಾಗ ತಿದ್ದಿರುವ ಸಂಗತಿ ಬೆಳಕಿಗೆ ಬಂದಿತ್ತು. ಎಫ್ಎಸ್ಎಲ್ ವರದಿ ಆಧಾರದ ಮೇಲೆ ದರ್ಶನ್ ಗೌಡನನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಮತ್ತಿಬ್ಬರು ಸಹ ಮೋಸದಿಂದ ಪರೀಕ್ಷೆ ಬರೆದಿದ್ದ ಆಪಾದನೆ ಇಬ್ಬರನ್ನು ಬಂಧಿಸಲಾಗಿದ್ದು ಇವರ ಪಾತ್ರದ ಸಿಐಡಿ ವಿಚಾರಣೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ. ಸದ್ಯ ದರ್ಶನ್ ಗೌಡ ವಿರುದ್ಧ ಯಲಹಂಕ ಉಪನಗರ, ಕೋರಮಂಗಲ ಠಾಣೆಯಲ್ಲಿ ಮೋಹನ್ ಹಾಗೂ ರಾಮ ಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಹರೀಶ್ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಇನ್ನು ಪ್ರಕರಣದಲ್ಲಿ ಮಾಗಡಿ ಕುದೂರು ಹೋಬಳಿ ಮರೂರು ಗ್ರಾಮದ ದರ್ಶನ್ ಅರೆಸ್ಟ್ ಆಗಿದ್ದೇಕೆ? ಸಿಐಡಿಗೆ ಸದ್ಯ ದರ್ಶನ ವಿರುದ್ಧ ಸಿಕ್ಕಿರುವ ಸಾಕ್ಷಿಗಳೇನು.? ಏಷ್ಯಾನೆಟ್ ಸುವರ್ಣ ನ್ಯೂಸ್ ದರ್ಶನ ಬಗ್ಗೆ ಎಕ್ಸಕ್ಲೂಸೀವ್ ಡಿಟೇಲ್ಸ್ ಇದೆ.
Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು
ದರ್ಶನ್ ಅಕ್ರಮ ಎಸಗಿರೋದು ಒಎಂಆರ್ ಶೀಟ್ ತಿದ್ದುಪಡಿ ಮಾಡಿರೋದು ನೇಮಕಾತಿ ವಿಭಾಗದ ಸಿಬ್ಬಂದಿ ಮೂಲಕ ಪತ್ತೆಯಾಗಿತ್ತು. ಈತ ಪರೀಕ್ಷೆ ಬರೆದಿದ್ದು ಬೆಂಗಳೂರಿನ ಕಸ್ತೂರಿ ನಗರದ ನ್ಯೂ ಹಾರಿಜನ್ ಕಾಲೇಜ್ ನಲ್ಲಿ . ಕೇವಲ 9 ಪ್ರಶ್ನೆಗಳಿಗೆ ಮಾತ್ರ ಪರೀಕ್ಷೆಯಲ್ಲಿ ಉತ್ತರ ಬರೆದಿದ್ದ.ಆದಾದ ಬಳಿಕ ಎರಡನೇಯ ದಿನ ಉಳಿದ ಉತ್ತರ ಭರ್ತಿ ಮಾಡಲಾಗಿತ್ತು.
ದರ್ಶನ್ ಅಕ್ರಮ ಪತ್ತೆಗೆ ಸಹಕಾರಿಯಾಗಿದ್ದು ಎಫ್ಎಸ್ಎಲ್! : ಎಫ್ಎಸ್ಎಲ್ ನಲ್ಲಿ ಅನೇಕ ರೀತಿಯ ವ್ಯತ್ಯಾಸ ಪತ್ತೆಯಾಗಿತ್ತು. ಮೊದಲು ಒಎಂಆರ್ & ಕಾರ್ಬನ್ ಒಎಂಆರ್ ವ್ಯತ್ಯಾಸ ಕಂಡು ಬಂದಿತ್ತು. ಆನಂತರ ಈತನ ಶೀಟ್ ನಲ್ಲಿ 3 ಮಾದರಿ ಇಂಕ್ ಬಳಕೆ ಮಾಡಲಾಗಿತ್ತು. ಪೇಪರ್ ನಲ್ಲಿ 3 ಮಂದಿ ರೈಟ್ ಮಾಡಿರೋದು ಶಂಕೆಯಿತ್ತು. ಅಲ್ಲದೇ ಪ್ರೇಜರ್ ರೈಟಿಂಗ್ ತುಂಬಾ ವ್ಯತ್ಯಾಸವಿತ್ತು. ಮೊದಲ ದಿನ ಭಯದಲ್ಲಿ ಬರೆದ ರೀತಿಯಲ್ಲಿ ಪತ್ತೆಯಾಗಿತ್ತು. ಎರಡನೇಯದಾಗಿ ಬರೆದಾಗ ಹೈ ಪ್ರೇಜರ್ ರೈಟಿಂಗ್ ಪತ್ತೆ. ಈ ಆಧಾರದ ಮೇಲೆ ವಿಚಾರಣೆ ಮಾಡಲು ಸಿದ್ದತೆಯಾಗಿತ್ತು. ಆದರೆ ದರ್ಶನ್ ಮತ್ತು ಕೆಲವರ ಟೀಂ ತಲೆ ಮರೆಸಿಕೊಂಡಿದ್ದರು. ಸದ್ಯ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.