PSI Scam: ಎಡಿಜಿಪಿ ಅಮೃತ್ ಪೌಲ್‌ ವಿರುದ್ದ ಚಾರ್ಜ್ ಶೀಟ್!

Published : Sep 28, 2022, 04:50 PM IST
PSI Scam: ಎಡಿಜಿಪಿ ಅಮೃತ್ ಪೌಲ್‌ ವಿರುದ್ದ ಚಾರ್ಜ್ ಶೀಟ್!

ಸಾರಾಂಶ

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಡಿಜಿಪಿ ಅಮೃತ್‌ ಪೌಲ್‌ ವಿರುದ್ಧ ಚಾರ್ಜ್ ಶೀಟ್‌ ಸಲ್ಲಿಕೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಇದು 1406 ಪುಟಗಳ ಚಾರ್ಜ್‌ಶೀಟ್‌ ಆಗಿದೆ.  

ಬೆಂಗಳೂರು (ಸೆ. 28): ಪಿಎಸ್‌ಐ ನೇಮಕಾತಿ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್‌ ಪೌಲ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಮೃತ್‌ ಪೌಲ್‌ ಅವರನ್ನು ಈ ತಿಂಗಳ ಆರಂಭದಲ್ಲಿ 8 ದಿನಗಳ ಕಾಲ ಸಿಐಡಿ ಪೊಲೀಸರು ಕಸ್ಡಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಈ ಎಲ್ಲಾ ವಿಚಾರಣೆಯ ಬಳಿಕ ಸಿಬಿಐ ಹೆಚ್ಚುವರಿ ಚಾರ್ಜ್‌ಶೀಟ್‌ಅನ್ನು ಬುಧವಾರ ಸಲ್ಲಿಕೆ ಮಾಡಿದೆ ಎಂದು ಹೇಳಲಾಗಿದೆ. ಅಮೃತ್‌ ಪೌಲ್‌ ಅವರನ್ನು ಕಸ್ಟಡಿಗೆ ನೀಡಿದ್ದ ಎಸಿಎಂಎಂ ಕೋರ್ಟ್‌ಗೆ ಸಿಬಿಐ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಒಟ್ಟು 1406 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಇದಾಗಿದ್ದು, 78 ದಾಖಲೆಗಳು 38 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. 1 ನೇ ಎಸಿಎಂಎಂ ಕೋರ್ಟ್‌ಗೆ ಸಿಐಡಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ತನಿಖಾಧಿಕಾರಿ ಡಿವೈಎಸ್ಪಿ ಬಿ.ಕೆ.ಶೇಖರ್ ಅವರಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಅಮೃತ್‌ ಪೌಲ್‌ ಅವರನ್ನು ಏಳನೇ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಲಕ್ಷಾಂತರ ರೂಪಾಯಿ ಪಡೆದು ಅಕ್ರಮ ಎಸಗಿರುವ ಸಾಧ್ಯತೆ ಬಹಳವಾಗಿ ಎದ್ದು ಕಂಡಿದೆ. ಪೌಲ್‌ ಅವರು ಕೃತ್ಯ ಎಸಗಲು ಬಳಸಿರಬಹುದಾದ ಮೊಬೈಲ್‌, ಸಿಮ್‌ ಕಾರ್ಡ್‌ಗಳು ಹಾಗೂ ಅವರು ಹೊಂದಿರುವ ಬ್ಯಾಂಕ್‌ ಖಾತೆಗಳ ವಿವರಗಳನ್ನು ಕಲೆಹಾಕಿ, ಹಣದ ವರ್ಗಾವಣೆಯ ಬಗ್ಗೆ ತನಿಖೆ ನಡೆಸಿ ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ ಎನ್ನುವ ಮಾಹಿತಿ ಇದೆ.

ಏನಿದು ಪ್ರಕರಣ: ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಏಳನೇ ಆರೋಪಿಯಾಗಿ ಅಮೃತ್‌ ಪೌಲ್‌ (ADGP Amrit Paul) ಅವರನ್ನು ಹೆಸರಿಸಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ (Bengaluru High Grounds Police Station) ಇದೇ ಪ್ರಕಣದ ಕುರಿತು ದಾಖಲಾಗಿರುವ ಎಫ್‌ಐಆರ್‌ಗೆ (FIR)ಕುರಿತು 2022ರ ಜು.4ರಂದು ಬಂಧಿತರಾಗಿದ್ದ ಪೌಲ್‌ ಅವರು ಜು.14ರವರೆಗೆ ಪೊಲೀಸ್‌ ಬಂಧನದಲ್ಲಿದ್ದರು. ಆ ನಂತರವೇ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಸಂಪೂರ್ಣ ಪ್ರಕಣದಲ್ಲಿ 34ನೇ ಆರೋಪಿಯಾಗಿರುವ ಪೌಲ್‌ ಅವರ ಜಾಮೀನು ಅರ್ಜಿಗಳನ್ನು (Bail)  1ನೇ ಎಸಿಎಂಎಂ ನ್ಯಾಯಾಲಯ (ACMM Court) ಹಾಗೂ ಸೆಷನ್ಸ್ ನ್ಯಾಯಾಲಯ (Sessions Court) ತಿರಸ್ಕರಿಸಿವೆ.

PSI Recruitment Scam: ಅಮೃತ್‌ ಪೌಲ್‌ ಮತ್ತೆ 8 ದಿನ ಸಿಐಡಿ ವಶಕ್ಕೆ

ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮೃತ್‌ ಪಾಲ್‌ ಅವರ ಗೆಳೆಯರನ್ನೂ ಸಿಐಡಿ ವಿಚಾರಣೆ ಹಾಗೂ ಅವರ ಉದ್ಯಮಗಳ ಮೇಲೆ ದಾಳಿ ಮಾಡಿದೆ. ಇತ್ತೀಚೆಗೆ, ಪೌಲ್‌ ಅವರ ಅವರ ಇಬ್ಬರು ಉದ್ಯಮಿ ಸ್ನೇಹಿತರ ಮನೆಗಳ ಮೇಲೆ ಸಿಐಡಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.  ಸಹಕಾರ ನಗರದವರಾಗಿರು ಉದ್ಯಮಿ ಶಂಭುಲಿಂಗಯ್ಯ ಹಾಗೂ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಆನಂದ್‌ ಅವರಿಗೆ ಸಿಐಡಿ ಎದುರಾಗಿದ್ದು, ಎಡಿಜಿಪಿ ಅಮೃತ್‌ ಪಾಲ್‌ ಜತೆ ಹಣಕಾಸು ವ್ಯವಹಾರ ಹೊಂದಿದ ಶಂಕೆ ಮೇರೆಗೆ ದಾಳಿ ನಡೆದಿದೆ. 

PSI Recruitment Scam: 1 ಎಸ್‌ಐ ಹುದ್ದೆ 30ರಿಂದ 85 ಲಕ್ಷಕ್ಕೆ ಮಾರಿದ್ದ ಪಾಲ್‌..!

ಸಹಕಾರ ನಗರದಲ್ಲಿರುವ ಶಂಭುಲಿಂಗಯ್ಯ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಹುಸ್ಕೂರಿನಲ್ಲಿರುವ ಆನಂದ್‌ ಮನೆಗಳಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಶೋಧಿಸಿ ಸಿಐಡಿ ದಾಖಲೆಗಳನ್ನು ಜಪ್ತಿ ಮಾಡಿದೆ. ಬಳಿಕ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಆ ಇಬ್ಬರಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲದಲ್ಲಿ ಆನಂದ್‌ ಲೇಔಟ್‌ ನಿರ್ಮಿಸಿದ್ದು, ಇದರಲ್ಲಿ ಅಮೃತ್‌ ಪಾಲ್‌ ಹಣ ಹೂಡಿಕೆ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಕೇಂದ್ರ ವಲಯ ಐಜಿಪಿ ಆಗಿದ್ದಾಗ ಅಮೃತ್‌ ಪಾಲ್‌ ಅವರಿಗೆ ಆನಂದ್‌ ಪರಿಚಯವಾಗಿತ್ತು. ಆನಂತರ ಈ ಗೆಳೆತನದಲ್ಲೇ ಪಾಲುದಾರಿಕೆಯಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿದ್ದರು. ಅದೇ ರೀತಿ ಶಂಭುಲಿಂಗಯ್ಯ ಜತೆ ಎಡಿಜಿಪಿ ಅವರು ಭೂ ವ್ಯವಹಾರ ನಡೆಸಿರುವ ಬಗ್ಗೆ ಸಿಐಡಿ ಮಾಹಿತಿ ಕಲೆ ಹಾಕಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ