ಪಿಎಫ್‌ಐ ಬ್ಯಾನ್‌ ಆಗಿರುವ ಸಂಘಟನೆ, ಪ್ರತಿಭಟನೆ ಮಾಡಿದ್ರೆ ಕ್ರಮ: ಪೊಲೀಸ್‌ ಹಿರಿಯ ಅಧಿಕಾರಿಗಳ ಎಚ್ಚರಿಕೆ!

By Santosh NaikFirst Published Sep 28, 2022, 4:27 PM IST
Highlights

ಪಿಎಫ್‌ಐ ಈಗ ದೇಶದಲ್ಲಿ ನಿಷೇಧವಾಗಿರುವ ಸಂಘಟನೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸುವಂತಿಲ್ಲ. ಪ್ರತಿಭಟನೆ ನಡೆಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿ-ಐಜಿಪಿ ಪ್ರವೀಣ್‌ ಸೂದ್‌ ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ಬೆಂಗಳೂರು (ಸೆ. 28): ದೇಶದಲ್ಲಿ ಪಿಎಫ್‌ಐ ಸಂಘಟನೆಯನ್ನು ಯುಎಪಿಎ ಕಾಯ್ದೆಯ ಅಡಿಯಲ್ಲಿ ಐದು ವರ್ಷಗಳ ಕಾಲ ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಈ ಕುರಿತಾಗಿ ಅಧಿಸೂಚನೆ ಆಯಾ ರಾಜ್ಯಗಳ ಪೊಲೀಸರಿಗೆ ಮಂಗಳವಾರ ರಾತ್ರಿಯೇ ಸಿಕ್ಕಿತ್ತು. ಬುಧವಾರ ಬೆಳಗಿನ ವೇಳೆಗೆ ದೇಶಾದ್ಯಂತ ಈ ಸುದ್ದಿ ಬಿತ್ತರವಾಗಿದೆ. ಇದರ ನಡುವೆಯೇ ಆಯಾ ರಾಜ್ಯಗಳ ಪೊಲೀಸರು ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಡಿಜಿ-ಐಜಿಪಿ ಪ್ರವೀಣ್‌ ಸೂದ್‌ ಈಗಾಗಲೇ ಒಂದು ಸುತ್ತಿನ ಎಚ್ಚರಿಕೆ ರವಾನಿಸಿದ್ದಾರೆ. ಪಿಎಫ್‌ಐ ಈಗ ಬ್ಯಾನ್ ಆಗಿರುವ ಸಂಘಟನೆ. ಈ ಸಂಘಟನೆಯ ಹೆಸರಿನಲ್ಲಿ ಇನ್ನು ಯಾವುದೇ ಪ್ರತಿಭಟನೆ ನಡೆಯುವಂತಿಲ್ಲ ಪ್ರತಿಭಟನೆ ನಡೆಸಿದರೆ, ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಸೆ. 22 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ನಮ್ಮ ರಾಜ್ಯಕ್ಕೆ ಬಂದು ದಾಳಿ ನಡೆಸಿತ್ತು. ಈ ವೇಳೆ ಎನ್‌ಐಎ 7 ಮಂದಿಯನ್ನು ಬಂಧಿಸಿದ್ದರೆ, ನಾವು 15 ಮಂದಿಯನ್ನು ಅರೆಸ್ಟ್‌ ಮಾಡಿದ್ದೆವು. ಬಂಧಿತರ ವಿಚಾರಣೆ ವೇಳೆ ಕೆಲ ಪ್ರಮುಖ ವಸ್ತುಗಳು ಸಿಕ್ಕಿವೆ. ಅವೆಲ್ಲವನ್ನೂ ತಹಸೀಲ್ದಾರ್ ಮುಂದೆ ಹಾಜರು ಪಡಿಸಿದ್ದೇವೆ. ಮಂಗಳವಾರ ರಾತ್ರಿ ಭಾರತ ಸರ್ಕಾರದಿಂದ ಪಿಎಫ್‌ಐ ಸಂಘಟನೆಯನ್ನು  ಯುಎಪಿಎ ಕಾಯ್ದೆ ಅಡಿ ಬ್ಯಾನ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿತ್ತು ಎಂದು ಪ್ರವೀಣ್‌ ಸೂದ್‌ ಹೇಳಿದ್ದಾರೆ.

ಖಚಿತ ಮಾಹಿತಿ ಇದ್ದ ಕಾರಣ ಪ್ರಿವೆಂಟಿವ್ ಡಿಟೆಂಷನ್ ಮೇಲೆ 101 ಮೇಲೆ ವಶಕ್ಕೆ ಪಡೆದಿದ್ದೇವೆ. ಡಿಜಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಕಮಿಷನರ್ ವ್ಯಾಪ್ತಿಯಲ್ಲಿ ಆರ್ಗನೈಜೇಷನ್ ಬ್ಯಾನ್ ಬಗ್ಗೆ ಕ್ರಮ ಆಗಲಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ನಿಷೇಧ ಪ್ರಕ್ರಿಯೆ ಜಾರಿಗೆ ಬಂದಿದೆ. ಈ ಮೊದಲು ಪಿಎಫ್‌ಐ ಬ್ಯಾನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅದಲ್ಲದೆ, ರಾಜ್ಯವೊಂದೇ ಇದರ ನಿರ್ಧಾರ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಕ್ಕೆ ಇದರ ಎಲ್ಲಾ ಮಾಹಿತಿ‌ ಇರುತ್ತದೆ. ಎಲ್ಲವನ್ನೂ ನೋಡಿಕೊಂಡು ಬ್ಯಾನ್ ಮಾಡಿದ್ದಾರೆ ಎಂದು ಪ್ರವೀಣ್‌ ಸೂದ್‌ (DG-IGP Praveen Sood) ಹೇಳಿದ್ದಾರೆ.

ಬ್ಯಾನ್ ಆಗಿರುವ ಸಂಘಟನೆ ಪರವಾಗಿ ಅಥವಾ ಸಂಘಟನೆ (PFI) ಹೆಸರಿನಲ್ಲಿ ಯಾರಾದರೂ ಪ್ರತಿಭಟನೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಪಿಎಫ್‌ಐ ಸೇರಿ ಬ್ಯಾನ್ ಆಗಿರುವ ಸಂಘಟನೆಗಳ ಸದಸ್ಯರ ವಿರುದ್ದ ಕ್ರಮ ತೆಗೆದುಕೊಳ್ಳಲಿದ್ದೇವೆ. ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕೇಂದ್ರ ಸರ್ಕಾರದ ನಿರ್ಧಾರವನ್ನು ಪಾಲನೆ ಮಾಡುತ್ತೇವೆ. ಪಿಎಫ್‌ಐ ಬ್ಯಾನ್ ಆಗಿರೋ  ಕಾರಣ ಯಾರಾದರೂ ಪ್ರತಿಭಟನೆ ಮಾಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Asaduddin Owaisi: ಪಿಎಫ್‌ಐನ ಬ್ಯಾನ್‌ ಸರಿಯಲ್ಲ, ಬಲಪಂಥೀಯ ಸಂಘಟನೆಗಳನ್ನ ಯಾಕೆ ನಿಷೇಧಿಸಿಲ್ಲ?

ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ: ಪಿಎಫ್‌ಐ ಬ್ಯಾನ್‌ ಕುರಿತಾಗಿ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ (Bengaluru city police commissioner Pratap Reddy),  ಈಗ ಕೇಂದ್ರ ಸರ್ಕಾದ ಆದೇಶ ನಮಗೂ ಬಂದಿದೆ. ರಾಜ್ಯ ಸರ್ಕಾರವೂ ಪೂರಕ ಆದೇಶ ನೀಡಲಿದೆ. ಯಾವ ಯಾವ ಕ್ರಮ ಕೈಗೊಳ್ಳಬೇಕು ಅನ್ನೋದನ್ನ ರಾಜ್ಯ ಸರ್ಕಾರದ ಆದೇಶ ಬಂದ ನಂತರ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

PFI Ban: ಇನ್ನು ಶುರು ಕಾನೂನು ಹೋರಾಟ, ಪಿಎಫ್‌ಐ ಮುಂದೆ ಇರೋ ದಾರಿ ಏನು?

ಈ ಆದೇಶಗಳಿಂದ ನಮ್ಮ ಅಧಿಕಾರಿಗಳು ಯಾವ ರೀತಿ (Ban) ಕಾರ್ಯ ಕೈಗೊಳ್ಳಬೇಕು ಅನ್ನೋದನ್ನ ನೋಡಲಾಗುತ್ತದೆ. ನಮ್ಮ ಠಾಣಾಧಿಕಾರಿ ಹಿರಿಯ ಅಧಿಕಾರಿ ಎಲ್ಲಾ ಸಂಬಂಧ ಪಟ್ಟ ಸಮುದಾಯಗಳು ಹಾಗೂ  ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದಾರೆ. ಬ್ಯಾನ್ ಯಾವ ರೀತಿ ಆದೇಶಗಳಿದೆಯೋ ಅದನ್ನ ಅವರಿಗೆ ಮನವರಿಕೆ ಮಾಡಲಾಗುತ್ತದೆ. ಕೆಎಸ್‌ಆರ್‌ಪಿ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಬ್ಯಾನ್ ಆಗಿರುವ ಸಂಘಟನೆಗಳಿಗೆ ಯಾವುದೇ ಆಕ್ಟಿವಿಟಿ ಮಾಡುವಂತ ಅವಕಾಶಗಳಿಲ್ಲ. ಒಂದು ವೇಳೆ ಪಿಎಫ್ ಐ ಪ್ರತಿಭಟನೆ ಮಾಡಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

click me!