
ಬೆಂಗಳೂರು (ನ.17): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕರಣ ಸಂಬಂಧ ಮತ್ತೆ ಹೆಚ್ಚಿನ ತನಿಖೆ ಸಲುವಾಗಿ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಎಡಿಜಿಪಿ ಅಮೃತ್ ಪಾಲ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಗರಣ ಸಂಬಂಧ ಬೆಂಗಳೂರು, ತುಮಕೂರು, ಕಲಬುರಗಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಹೀಗಾಗಿ ಈ ಪ್ರಕರಣಗಳ ತನಿಖೆ ಸಲುವಾಗಿ ಅಮೃತ್ ಪಾಲ್ ಅವರನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದ್ದು, ಸಿಐಡಿ ಕೇಂದ್ರ ಕಚೇರಿಯಲ್ಲಿ ಅವರ ವಿಚಾರಣೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೇಮಕಾತಿ ಅಕ್ರಮ ಹಗರಣದಲ್ಲಿ ಬಂಧಿತರಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಎಡಿಜಿಪಿ ಅವರನ್ನು ಹೆಚ್ಚಿನ ತನಿಖೆಗೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಸಿಐಡಿ ಮನವಿ ಮಾಡಿತು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಯನ್ನು ಸಿಐಡಿ ವಶಕ್ಕೊಪ್ಪಿಸಿ ಆದೇಶಿಸಿದೆ.
Karnataka PSI Scam: ಪಿಎಸ್‌ಐ ಕೇಸ್ ತನಿಖಾಧಿಕಾರಿ ಉಮೇಶ್ ಕುಮಾರ್ ವರ್ಗಾವಣೆಗೆ ಅಸಮಾಧಾನ
ಯಾರಿಗೂ ಹೇಳುವ ಅಗತ್ಯವಿಲ್ಲ: ಪಿಎಸ್‌ಐ ಹಗರಣದ ಕುರಿತು ಆರೋಪಿಸಿದ ಪರಸಪ್ಪನೇ ಎಲ್ಲವನ್ನು ಹೇಳಿದ್ದಾನೆ. ಇನ್ನು ಇವರಾರಯರಿಗೂ ಏನೂ ಹೇಳುವ ಅಗತ್ಯ ಇಲ್ಲ ಎಂದು ಶಿವರಾಜ ತಂಗಡಗಿ ಅವರ ಹೆಸರು ಹೇಳದೆ ಅವರ ವಿರುದ್ಧ ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಮುಗಿದು ಹೋಗಿರುವ ವಿಷಯವೆಂದು ಸ್ವತಃ ಪರಸಪ್ಪನೇ ಹೇಳಿದ್ದಾನೆ.
ಹೀಗಾಗಿ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಪಿಎಸ್‌ಐ ಹಗರಣದಲ್ಲಿನ ಆಡಿಯೋ ಕುರಿತು ತನಿಖೆ ಮಾಡುವಂತೆ ಆಗ್ರಹಿಸಿ ಶಿವರಾಜ ತಂಗಡಗಿ ಗುರುವಾರ ಪಾದಯಾತ್ರೆ ಹಮ್ಮಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆ ನನ್ನ ವಿರುದ್ಧವಾದರೂ ಮಾಡಿಕೊಳ್ಳಲಿ ಅಥವಾ ಯಾರ ವಿರುದ್ಧವಾದರೂ ಮಾಡಿಕೊಳ್ಳಲಿ. ಆದರೆ, ಕಾನೂನು ಚೌಕಟ್ಟಿನ ಅಡಿ ಕೈಗೊಳ್ಳಲಿ ಎಂದರು. ಹೈಕೋರ್ಟ್ ಸೂಚನೆಯಂತೆ ಅಧಿಕಾರಿಗಳು ಫ್ಲೆಕ್ಸ್ ತೆಗೆದು ಹಾಕಿದ್ದಾರೆ. ಅದರಲ್ಲಿ ನನ್ನದೇನೂ ಪಾತ್ರ ಇಲ್ಲ.
ಕೋರ್ಟ್‌ನಲ್ಲಿ ಇತ್ಯರ್ಥವಾಗದೆ ವಿನಾಕಾರಣ ಆರೋಪ ಮಾಡಿ ಫ್ಲೆಕ್ಸ್ ಹಾಕುವುದು ಸರಿಯಲ್ಲ. ಹೀಗಾಗಿ ಅಧಿಕಾರಿಗಳು ಕೋರ್ಚ್ ನಿರ್ದೇಶನದಂತೆ ತೆಗೆದು ಹಾಕಿದ್ದಾರೆ ಎಂದರು. ಫ್ಲೆಕ್ಸ್ ತೆಗೆಯುವಾಗ ನಾನು ಅಲ್ಲಿಗೆ ಹೋಗಿದ್ದು ನಿಜ. ನಾನು ತೆಗೆಸಲು ಅಲ್ಲಿಗೆ ಹೋಗಿಲ್ಲ. ಅವರು ಹಾಕುವಾಗ ನಾನು ಆ ಮಾರ್ಗವಾಗಿಯೇ ತೆರಳುತ್ತಿದ್ದಾಗ ನಿಂತು ನೋಡಿದ್ದೇನೆ ಎಂದರು. ನನ್ನ ಕುರಿತು ಶಿವರಾಜ ತಂಗಡಗಿ ಏನೇ ಆರೋಪ ಮಾಡಿಕೊಳ್ಳಲಿ? ಅವರ ಕಾಲದಲ್ಲಿ ಆಗಿರುವ ಹಗರಣ ಬಯಲಿಗೆಳೆಯುತ್ತೇವೆ ಎಂದು ಸವಾಲು ಹಾಕಿದರು.
PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ
ಪ್ರಕರಣದ ವಿವರ: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಮೃತ್ ಪಾಲ್ ಅವರು ಏಳನೇ ಆರೋಪಿಗಳಾಗಿದ್ದಾರೆ. ಇನ್ನೂ ಇದೇ ಪ್ರಕರಣ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ 2022ರ ಜು.4ರಂದು ಬಂಧಿತರಾಗಿದ್ದ ಪೌಲ್ ಅವರು ಜು.14ರವರೆಗೆ ಪೊಲೀಸ್ ವಶದಲ್ಲಿದ್ದರು. ನಂತರ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಈ ಪ್ರಕರಣದಲ್ಲಿ 34ನೇ ಆರೋಪಿಯಾಗಿರುವ ಪೌಲ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಎಸಿಎಂಎಂ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ