* ಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಕೆಎಸ್‌ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ಸೇವೆಯಿಂದ ಅಮಾನತು
* ಪತಿಯವರನ್ನು ಜೈಲಿನ ಕಂಬಿಗಳ ಹಿಂದೆ ತಳ್ಳುವ ಅನಿವಾರ್ಯತೆ ಪತ್ನಿಗೆ
* ಕಾರಾಗೃಹದಲ್ಲಿ ವೈಜನಾಥ ಪತ್ನಿ ಸುನಂದಾ ಜೈಲರ್
ಕಲಬುರಗಿ(ಮೇ.14): ರಾಜ್ಯದಲ್ಲಿ(Karnataka) ಸಂಚಲನ ಮೂಡಿಸಿರುವ ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ(PSI Recruitment Scam) ಭಾಗಿಯಾಗಿದ್ದ ಕೆಎಸ್‌ಆರ್‌ಪಿ(KSRP) ಅಸಿಸ್ಟೆಂಟ್ ಕಮಾಂಡೆಂಟ್ ಅನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಎಡಿಜಿಪಿ ಇಂದು ಆದೇಶ ಹೊರಡಿಸಿದ್ದಾರೆ. ಇದಲ್ಲದೆ ಇಂದು ಡಿವೈಎಸ್ಪಿ ವೈಜನಾಥ್ ಜೈಲ್‌ಗೆ ಶಿಫ್ಟ್ ಆಗಿದ್ದಾರೆ. ಅವರಿಗೆ ಸಿಐಡಿ(CID) ವಿವಿಧೆಡೆ ಹಣಕಾಸು ವ್ಯವಹಾರ ನಡೆಸಿದ್ದರ ಸ್ಥಳ ಮಹಜರಿಗೆಂದು ಕರೆದುಕೊಂಡು ನಗರ, ಹೊರವಲಯದ ರಿಂಗ್ ರಸ್ತೆ, ಆರ್‌ಡಿ ಪಾಟೀಲ್ ಭೇಟಿ ಮಾಡಿದಂತಹ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಿದ್ದು ಕಸ್ಟಡಿ ಅಂತ್ಯಗೊಂಡಿದ್ದರಿಂದ ಜೈಲಿಗೆ(Jail) ಶಿಫ್ಟ್ ಮಾಡಿದೆ.
ಕಲಬುರಗಿ ಕೇಂದ್ರ ಕಾರಾಗೃಹಕ್ಕೆ(Gulbarga Central Jail) ಡಿವೈಎಸ್ಪಿ ರಾರಯಂಕ್‌ನ ಕೆಎಸ್ಸಾರ್ಪಿ ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರ್(Vaijanath Revur) ಇವರನ್ನು ಸ್ಥಳಾಂತರಿಸಲಾಗಿದ್ದು ಅದೇ ಜೈಲಲ್ಲಿ ಇವರ ಪತ್ನಿ ಸುನಂದಾ ರೇವೂರ್(Sunand Revur) ಜೈಲರ್ ಆಗಿದ್ದಾರೆ. ಈಗಾಗಲೇ ಹಗರಣದಲ್ಲಿ ಪ್ರಮಮುಖ ಆರೋಪಿಗಳಾಗಿ ಜೈಲಲ್ಲಿರುವ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಹೆಡ್‌ಮಾಸ್ಟರ್ ಕಾಶಿನಾಥ್ ಸೇರಿದಂತೆ ಹಲವರ ಭದ್ರತೆ ಯೋಗಕ್ಷೇಮ ಹೊಣೆ ಹೊತ್ತಿರುವ ಸುನಂದಾ ಅವರೇ ತಮ್ಮ ಡಿವೈಎಸ್ಪಿ ರಾರಯಂಕ್‌ನ ಪತಿಯವರನ್ನು ಜೈಲಿನ ಕಂಬಿಗಳ ಹಿಂದೆ ತಳ್ಳುವ ಅನಿವಾರ್ಯತೆ ಎದುರಿಸಿದರು.
PSI Recruitment Scam: ಶಾಂತಿಬಾಯಿ-ಬಸ್ಸು ನಾಯಕ್ ದಂಪತಿಗೆ ಸಿಐಡಿ ಹುಡುಕಾಟ
ಪ್ರಕರಣದ ಕಿಂಗ್‌ಪಿನ್(Kingpin) ಆರ್‌ಡಿ ಪಾಟೀಲ್ ಜೊತೆಗೆ ಡಿವೈಎಸ್ಪಿ ವೈಜನಾಥ ರೇವೂರ್ ತುಂಬಾ ಒಡನಾಟ ಹೊಂದಿದ್ದರೆಂಬ ಮಾಹಿತಿ ಗೊತ್ತಾಗಿದೆ. ಇದಲ್ಲದೆ ಅನೇಕ ಡೀಲ್‌ಗಳನ್ನು ಇವರು ತಮ್ಮ ಮದ್ಯಸ್ಥಿಕೆಯಲ್ಲಿಯೇ ಮಾಡಿರೋದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಅಭ್ಯರ್ಥಿಗಳು ಹಾಗೂ ಕಿಂಗ್‌ಪಿನ್ ನಡುವೆ ಸೇತುವೆಯಾಗಿ ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ಕೆಲಸ ಮಾಡುತ್ತಿದ್ದರು. ಅಭ್ಯರ್ಥಿಗಳನ್ನು ಹುಡುಕಿ ಅಕ್ರಮದ ವ್ಯವಹಾರ ಕುದುರಿಸಿದ್ದಾರೆ ಎಂಬ ಗುರುತರ ಆರೋಪವೂ ಇವರ ಮೇಲಿದೆ. ಸಿಐಡಿ ವಿಚಾರಣೆ ವೇಳೆ ಕಿಂಗ್‌ಪಿನ್ ಬಿಟ್ಟುಕೊಟ್ಟ ಸುಳಿವಿನ ಆಧಾರದಲ್ಲಿ ಮೇ 6ರಂದು ಆರೋಪಿಯನ್ನು ಸಿಐಡಿ ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
ಜೈಲಿಗೆ ಶಿಫ್ಟ್
ಕಲಬುರಗಿ ಕೆಎಸ್‌ಆರ್ಪಿ ಪರೇಡ್ ಮೈದಾನದಲ್ಲಿ ವಾರದ ಹಿಂದಷ್ಟೆ ನಡೆದಿದ್ದ ತರಬೇತಿ ಪೂರ್ಣಗೊಂಡ ಅಭ್ಯರ್ಥಿಗಳ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಕೆಎಸ್ಸಾರ್ಪಿ ಎಡಿಜಿಪಿ ಅಲೋಕ ಕುಮಾರ್ ಸೇರಿದಂತೆ ಕೆಎಸ್‌ಆರ್ಪಿ ಅಸಿಸ್ಟೆಂಟ್ ಕಮಾಂಡೆಂಟ್ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಕೆಲ ಗಂಟೆಯಲ್ಲಿಯೇ ಇವರ ಬಂಧನವಾಗಿ ಅದೇ ದಿನ ಸಿಐಡಿ ಇವರನ್ನು ಸಂಜೆ ಕಸ್ಟಡಿಗೆ ಪಡೆದಿತ್ತು.
ಡಿವೈಎಸ್ಪಿ ವೈಜನಾಥ್ ರೇವೂರ್ ಇದೀಗ ತಮ್ಮ ಧರ್ಮಪತ್ನಿ ಕಲಬುರಗಿ ಜೈಲಾಧಿಕಾರಿ ಆಗಿರುವ ಜೈಲಲ್ಲೇ ಆರೋಪ ಹೊತ್ತು ಕಂಬಿ ಎಣಿಸುವಂತಾಗಿದೆ. ಪತ್ನಿ ಜೈಲರ್ ಆಗಿ ಕೆಲಸ ಮಾಡುವ ಕಾರಾಗೃಹಕ್ಕೆ ಅಸಿಸ್ಟೆಂಟ್ ಕಮಾಂಡೆಂಟ್ ಆರೋಪ ಹೊತ್ತಿರುವ ಅತಿಥಿಯಾಗಿ ಸೇರಿರೋದು ಸುದ್ದಿಗೆ ಗ್ರಾಸವಾಗಿದೆ.
ದಿವ್ಯಾಳ ಗಂಡನಿಗೆ, ಆರ್.ಡಿ ಅಣ್ಣನಿಗೆ ಜೈಲೇ ಗತಿ, 13 ಆರೋಪಿಗಳ ಬೇಲ್ ರಿಜೆಕ್ಟ್
ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಪೊಲೀಸ್(Police) ಅಧಿಕಾರಿಗಳು ಇದೀಗ ಜೈಲು ಸೇರಿದ್ದಾರೆ. ಅಮಾನತುಗೊಂಡ ಅಸಿಸ್ಟೆಂಟ್ ಕಮಾಂಡೆಂಟ್ ಹಾಗೂ ಸಿಪಿಐ ಇಬ್ಬರನ್ನು ಕಲಬುರಗಿ ಸೆಂಟ್ರಲ್ ಜೈಲಿಗೆ ರವಾನಿಸಲಾಗಿದೆ. ಇವರ ಕಸ್ಟಡಿ ಅವಧಿ ಅಂತ್ಯವಾಗಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಡಿವೈಎಸ್ಪಿ 1 ಮತ್ತು ಡಿವೈಎಸ್ಪಿ 2
ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ ಶಿಫ್ಟ್ ಆಗಿರುವ ಡಿವೈಎಸ್‌ಪಿ ವೈಜನಾಥ ರೇವೂರ್. ಇವರನ್ನು ಜೈಲು ಸಿಬ್ಬಂದಿ ಸಂಪೂರ್ಣ ತಪಾಸಮೆಗೊಳಪಡಿಸಿ ಒಳಗೆ ಕರೆದುಕೊಂಡರು. ಇದೇ ಕಾರಾಗೃಹದಲ್ಲಿ ವೈಜನಾಥ ಪತ್ನಿ ಸುನಂದಾ ಜೈಲರ್ ಆಗಿದ್ದಾರೆ.