ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: ಪೊಲೀಸ್, ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡ!

By Ravi JanekalFirst Published Sep 12, 2024, 9:10 AM IST
Highlights

ನಾಗಮಂಗಲ ಗಣೇಶ ಮೆರವಣಿಗೆ ಮೇಲೆ ಮುಸ್ಲಿಂ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಲ್ಲು ತೂರಾಟ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಚಲುವನಾರಾಯಣಸ್ವಾಮಿ ಕಾರಣ. ಪೊಲೀಸ ಇಲಾಖೆ ವೈಫಲ್ಯ ಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹರಿಹಾಯ್ದಿದ್ದಾರೆ

ಧಾರವಾಡ (ಸೆ.12): ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಹಿಂದೂಗಳ ಮನೆ ಮೇಲೆ ಕಲ್ಲು ತೂರಿ, ಅಂಗಡಿಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ  ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ  ಧಾರವಾಡದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಮುಸ್ಲಿಂ ಸಮಾಜದವರು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ. ಮಸೀದಿ ಒಳಗಡೆ ಕಲ್ಲು ಹೇಗೆ ಬಂತು? ಮಸೀದಿ ಸೀಜ್ ಮಾಡಿ ಬುಲ್ಡೋಜರ್ ಹಚ್ಚಬೇಕು ಎಂದು ಕಿಡಿಕಾರಿದ್ದಾರೆ.

ಈ ಪ್ರಕರಣದಲ್ಲಿ ಹಿಂದೂಗಳ ತಪ್ಪಿಲ್ಲ. ಇದು ಮುಸ್ಲಿಂರೇ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆದರೆ ಪೊಲೀಸ್ ಇಲಾಖೆ ಸ್ವಲ್ಪ ಜನ ಹಿಂದೂಗಳನ್ನ ಬಂಧಿಸೋದು ಸ್ವಲ್ಪ ಜನ ಮುಸ್ಲಿಂ ಯುವಕರನ್ನ ಬಂಧಿಸೋದು ಮೊದಲು ಬಿಡಬೇಕು. ಇಂತಹ ಘಟನೆಗಳಿಗೆ ಪೊಲೀಸ್ ಇಲಾಖೆ ವೈಫಲ್ಯವೇ ಕಾರಣ. ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿರುವ ಇಂತಹ ಹೇಯ ಕೃತ್ಯಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವ ನಾರಾಯಣಸ್ವಾಮಿ ಕಾರಣ ಎಂದು ಆರೋಪಿಸಿದ್ದಾರೆ.

Latest Videos

ನಾಗಮಂಗಲ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ 144 ಸೆಕ್ಷನ್ ಜಾರಿ!

ಇಂತವರನ್ನು ಮುಂದೆ ಕೂಡಿಸಿಕೊಂಡು ಶಾಂತಿ ಸಭೆ ಮಾಡಿ ಏನು ಪ್ರಯೋಜನ? ಇವರು ಗಣಪತಿ ಮೇಲೆ ಚಪ್ಪಲಿ ಎಸೆದಿದ್ದೀರಿ, ಪೆಟ್ರೋಲ್ ಬಾಂಬ್ ಎಸೆದಿದ್ದೀರಿ. ಇದೆಲ್ಲ ನೋಡಿಕೊಂಡು ಪೊಲೀಸ್ ಇಲಾಖೆ ಅಸಹಾಯಕವಾಗಿ ನಿಂತಿದೆ. ಇದಕ್ಕೆ ವೋಟ್ ಬ್ಯಾಂಕ್, ಕಾಂಗ್ರೆಸ್‌ ಪಕ್ಷದ ಕುಮ್ಮಕ್ಕಿನಿಂದಲೇ ಮುಸ್ಲಿಂ ಸಮುದಾಯದವರು ಈ ರೀತಿ ಮಾಡುತ್ತಿದ್ದಾರೆ. ನಮ್ಮದೇ ಸರ್ಕಾರ ಇದೆ. ನಾವು ಏನು ಮಾಡಿದ್ರೂ ನಡೆಯುತ್ತೆ ಎಂದು ಭಾವಿಸಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರು ಅಧಿಕಾರದಲ್ಲಿದ್ದವರ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳು ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು?

'ಕಲ್ಲು' ಭಯೋತ್ಪಾದಕರಿಂದ ವಿಘ್ನ ವಿನಾಶಕನ ಮೇಲೆ ಕಲ್ಲು ತೂರಾಟ, ನಾಗಮಂಗಲ ಉದ್ವಿಗ್ನ!

ಮಂಡ್ಯ ಜಿಲ್ಲೆಯಲ್ಲಿ ಮುಸ್ಲಿಮರು, ಮುಲ್ಲಾ, ಮೌಲ್ವಿಗಳನ್ನ ಬಹಿಷ್ಕರಿಸಿ, ನಮ್ಮ‌ದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಂದೂಗಳು ಗಣಪತಿಯನ್ನ ಪ್ರಥಮ ದೇವರು ಎಂದು ಭಾವಿಸುತ್ತಾರೆ. ಗಣೇಶ ಉತ್ಸವದಲ್ಲಿ ಕಲ್ಲು, ಚಪ್ಪಲಿ ತೂರುವ ಮೂಲಕ ಮುಸ್ಲಿಂ ಕಿಡಿಗೇಡಿಗಳು ನಮ್ಮ ನಂಬಿಕೆಗೆ ಘಾಸಿ ಮಾಡಿ ಕೆರಳಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮತಾಂಧ ಕೃತ್ಯಗಳು ಹೆಚ್ಚಾಗಿವೆ. ಇದನ್ನೆಲ್ಲ ಸಹಿಸಿಕೊಂಡು ಕೂಡಲ್ಲ. ರಾಜ್ಯದಲ್ಲಿ ಉಗ್ರವಾದ ಹೋರಾಟ ನಡೆಸುತ್ತೇವೆ. ನಾಳೆ ನಾಡಿದ್ದು ನಾಗಮಂಗಲಕ್ಕೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

click me!