
ಬೆಂಗಳೂರು(ಸೆ.12): ರಾಜ್ಯದಲ್ಲಿ ಅರಣ್ಯ ಹೊದಿಕೆ ಪ್ರಮಾಣ ಶೇ.22ರಷ್ಟು ಮಾತ್ರ ಇದ್ದು, ಅದನ್ನು ಶೇ.33ಕ್ಕೆ ಹೆಚ್ಚಿಸ ಬೇಕಿದೆ. ಅದಕ್ಕಾಗಿ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮ ದಿನದ ಅಂಗವಾಗಿ ಅರಣ್ಯ ಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊ೦ಡು ಮಾತನಾಡಿದ ಅವರು, ಅರಣ್ಯ ಸಂರಕ್ಷಣೆ ಎಲ್ಲರ ಕರ್ತವ್ಯ. ನಿಗದಿಯಂತ ರಾಜ್ಯದ ಭೂಪ್ರದೇಶದ ಶೇ.33ರಷ್ಟು ಅರಣ್ಯ ಹೊದಿಕೆಯಿರಬೇಕು. ಆದರೆ, ಕಳೆದ ಹಲವು ವರ್ಷಗಳಿಂದ ಕೇವಲ ಶೇ.22ರಷ್ಟು ಅರಣ್ಯ ಹೊದಿಕೆಯಿದೆ. ಇನ್ನೂ ಶೇ.11ರಷ್ಟು ಅರಣ್ಯ ಹೊದಿಕೆಯನ್ನು ನಿರ್ಮಿಸಬೇಕಿದ್ದು, ಅದಕ್ಕಾಗಿ ಅರಣ್ಯ ಇಲಾಖೆ ಎಲ್ಲ ಕ್ರಮ ಕೈಗೊಳ್ಳಬೇಕು. ಪ್ರಮುಖವಾಗಿ ಅರಣ್ಯ ನಾಶ, ಅರಣ್ಯ ಭೂಮಿ ಒತ್ತುವರಿ ತಡೆ, ಅರಣ್ಯ ಮರು ಸ್ಥಾಪನೆಯಂತಹ ಕೆಲಸ ಗಳನ್ನು ಹೆಚ್ಚಾಗಿ ಮಾಡಬೇಕು ಎಂದರು.
ಹೊಸ ಎಲೆಕ್ಟ್ರಿಕ್ ವಸ್ತು ಖರೀದಿ ಮಾಡುವ ಗ್ರಾಹಕರಿಗೆ ಸರ್ಕಾರದಿಂದ ಬಂಪರ್ ಕೊಡುಗೆ!
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ವನ್ಯಜೀವಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಆನೆ, ಹುಲಿ, ಚಿರತೆಗಳು ಹೆಚ್ಚುತ್ತಿವೆ. ಅವುಗಳ ಸಂರಕ್ಷಣೆಯ ಹೊಣೆ ಸರ್ಕಾರದಷ್ಟೇ ಅಲ್ಲದೆ ಜನರದ್ದೂ ಕೂಡ ಹಾಗೆಯೇ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಈವರೆಗೆ 61 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಪರಿಸರ ರಕ್ಷಿಸುವವರ ರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅವರ ಸಾವಿಗೆ ಬದಲಾಗಿ ಅವರ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ. ಅವರಿಗೆ ಎಷ್ಟು ಪರಿಹಾರ ನೀಡಿದರೂ ಕಡಿಮೆಯೇ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಕ್ಯಾಂಟೀನ್ ಮಾದರಿ ಅರಣ್ಯ ಕ್ಯಾಂಟೀನ್: ಖಂಡ್ರೆ
ಅರಣ್ಯ ಸಂರಕ್ಷಣೆ ಕೆಲಸ ಮಾಡುವ ಸಿಬ್ಬಂದಿಗೆ ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲಿ ಅರಣ್ಯ ಕ್ಯಾಂಟೀನ್ ಸ್ಥಾಪನೆಗೆ ಅಥವಾ ಪೊಲೀಸ್ ಕ್ಯಾಂಟೀನ್ ಬಳಕೆಗೆ ಅವಕಾಶ ನೀಡುವಂತೆ ಬೇಡಿಕೆಯಿದೆ. ಅದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ತಮಿಳುನಾಡಿನ ಎಲಗಿರಿ ಮಾದರಿಯಲ್ಲಿ ಬೆಂಗಳೂರು, ಬೀದರಲ್ಲಿ ತಲೆಯೆತ್ತಲಿವೆ ಹೊಸ ಪಕ್ಷಿಧಾಮ: ಸಚಿವ ಖಂಡ್ರೆ
ಮಾಸಾಂತ್ಯಕ್ಕೆ ಕಸ್ತೂರಿ ರಂಗನ್ ರಾಜ್ಯದ ಅಭಿಪ್ರಾಯ ಸಲ್ಲಿಕೆ:
ಪಶ್ಚಿಮ ವರದಿ ಬಗ್ಗೆ ಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಮೇಲೆ ಕೇಂದ್ರ ಸರ್ಕಾರ 6ನೇ ಬಾರಿ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆ ಕುರಿತು ಚರ್ಚಿಸಲು ಸೆ.19ರಂದು ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ 10 ಜಿಲ್ಲೆಗಳ ಜನಪ್ರತಿನಿಧಿ ಗಳೊಂದಿಗೆ ಸಭೆ ನಡೆಸಲಾಗುವುದು. ಅದಾದ ನಂತರ ಸೆ.20 ರಂದು ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಅಭಿ ಪ್ರಾಯ ಸಂಗ್ರಹಿಸಲಾಗುತ್ತದೆ. ಸೆ.21 ರಂದು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಕೇಂದ್ರದ ಅಧಿಸೂಚನೆ ಕುರಿತು ರಾಜ್ಯದ ಪ್ರತಿಕ್ರಿಯೆ ಸಿದ್ದಪಡಿಸಲಾಗುವುದು. ಸೆ.27ರೊಳೆಗೆ ಕೇಂದ್ರ ಸರ್ಕಾಕ್ಕೆ ರಾಜ್ಯದ ಅಭಿಪ್ರಾಯ ಸಲ್ಲಿಸಲಾಗು ವುದು ಎಂದು ಈಶ್ವರ್ ಖಂಡ್ರೆ ಹೇಳಿದರು.
ಆನೆ ಹಾವಳಿ ತಡೆಗೆ ಆಂಧ್ರದೊಂದಿಗೆ ಒಡಂಬಡಿಕೆ:
ಮಾನವ -ಆನೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಪರಿಹಾ ರೋಪಾಯ ಕಂಡುಕೊಳ್ಳಲು ಹಾಗೂ ಪರಸ್ಪರ ಸಹ ಕಾರ ನೀಡುವ ಸಂಬಂಧ ಕೇರಳ ರಾಜ್ಯದೊಂದಿಗೆ ಈಗಾಗಲೇ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಅದೇ ರೀತಿ ಆಂಧ್ರಪ್ರದೇಶದೊಂದಿಗೂ ಒಪಂದ ಮಾಡಿಕೊ ಳ್ಳಲಾಗುವುದು, ಅದಕ್ಕಾಗಿ ಸೆ.27ರಂದು ಆಂಧ್ರ ಪ್ರದೇಶಕ್ಕೆ ತೆರಳಿ ಅಲ್ಲಿನ ಅರಣ್ಯ ಸಚಿವರೂ ಆಗಿರುವ ಡಿಸಿಎಂ ಪವನ್ ಕಲ್ಯಾಣ್ ಜತೆ ಸಭೆ ನಡೆಸಿ ಒಡಂಬ ಡಿಕೆಗೆ ಸಹಿ ಹಾಕಲಾಗುವುದು ಎಂದು ಖಂಡೆ ಮಾಹಿತಿ ನೀಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ (ಅರಣ್ಯ ಪಡೆ ಮುಖ್ಯಸ್ಥ) ಬ್ರಿಜೇಶ್ ಕುಮಾರ್ ದೀಕ್ಷಿತ್ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ