
ಬೆಂಗಳೂರು (ಜು.31): ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ, ಹಿಂಸೆ ನೀಡಿದ ಕಾರಣಕ್ಕೆ ಬಸವೇಶ್ವರ ನಗರ ಪೊಲೀಸ್ ಠಾಣೆಯ ಎದುರು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರತಿಭಟನೆ ನಡೆಸಿದರು. ಎಸಿಪಿ ಚಂದನ್ ಕುಮಾರ್ ಅವರೊಂದಿಗೆ ಮಾತನಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದರು. ಇದರ ಬೆನ್ನಲ್ಲೇ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಬಗ್ಗೆ ಮಾತನಾಡಿರುವ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ, ಪೊಲೀಸ್ ಇಲಾಖೆಯಲ್ಲಿ ಯಾರಾದರೂ ಸಲಿಂಗಕಾಮಿ ಇದ್ದಾರಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿಯನ್ನು ಬಂಧನ ಮಾಡಿದ್ದನ್ನು ಒಪ್ಪಿಕೊಳ್ಳೋಣ. ಅವರನ್ನು ಬೆತ್ತಲು ಮಾಡಿ ಹಿಂಸೆ ಕೊಟ್ಟಿದ್ದಕ್ಕೆ ಇಲಾಖೆ ಕಾರಣ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಜುಲೈ 26ಕ್ಕೆ ಜೈಪುರದಿಂದ ಅಕ್ರಮ ಮಾಂಸ ಬರುತ್ತಿದೆ ಎನ್ನುವ ಇನ್‌ಪುಟ್ ಸಿಕ್ಕಿತ್ತು. ಆ ಮಾಂಸದ ಬಗ್ಗೆ ಅನುಮಾನಗಳಿದ್ದವು. ಇದರ ಬಗ್ಗೆ 6 ತಿಂಗಳ ಹಿಂದೆಯೇ ದೂರು ನೀಡಲಾಗಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಕಾರಣಕ್ಕಾಗಿ ಪುನೀತ್ ಕೆರೆಹಳ್ಳಿ ಸ್ಥಳಕ್ಕೆ ಹೋಗಿದ್ದರು. ಆರೋಗ್ಯಾಧಿಕಾರಿಗಳು ಕೂಡ ಬಂದಿದ್ದರು. ಈ ವೇಳೆ ಸಡನ್ ಆಗಿ ಅಬ್ದುಲ್ ರಜಾಕ್ ಅಲ್ಲಿಗೆ ಆಗಮಿಸಿ ಗಲಾಟೆ ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಆದರೆ, ಪುನೀತ್ ಕೆರೆಹಳ್ಳಿಯನ್ನು ಮಾತ್ರವೇ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು. ಠಾಣೆಗೆ ಕರೆದುಕೊಂಡು ಹೋಗಿ ಬೆತ್ತಲೆ ಗೊಳಿಸಿ ಹಲ್ಲೆಮಾಡಿದ್ದಾರೆ. ಖುದ್ದು ಎಸಿಪಿ ಚಂದನ್ ಈ ರೀತಿ ಮಾಡಿದ್ದಾರೆ. ಈ ಬಗ್ಗೆ ಪುನೀತ್ ಕೆರೆಹಳ್ಳಿಯವರೇ ಹೇಳಿದ್ದಾರೆ. ಅಬ್ದುಲ್ ರಜಾಕ್ ಮಾಧ್ಯಮದ ಮೇಲೆ ರೌಡಿಸಂ ಮಾಡಿದ್ದರು. ಆದ್ರೆ ರಜಾಕ್ ಮೇಲೆ ಕ್ರಮ ಮಾತ್ರ ಕೈ ಗೊಂಡಿಲ್ಲ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹ ಬಂದಿದ್ದರು ಎಂದು ಹೇಳಿದ್ದಾರೆ.
ಚಂದನ್ ಮೇಲೆ ಇಲಾಖಾ ತನಿಖೆ ಆಗಬೇಕು. ರಜಾಕ್ ಮೇಲೆ ಎಫ್‌ಐಆರ್ ಆಗಬೇಕು. ಚಂದನ್ ಬಗ್ಗೆ ನನಗೆ ವೈಯಕ್ತಿಕ ದ್ವೇಷ ಏನಿಲ್ಲ. ಪೊಲೀಸರು ಹೀರೋಯಿಸಂ ತೋರಿಸೋಕೆ ಈ ರೀತಿ ಮಾಡುತ್ತಾರೆ. ಇದು ತಪ್ಪು. ಪೊಲೀಸರು ಇನ್ನೂ ವರದಿ ಬಂದಿಲ್ಲ ಎಂದಿದ್ದಾರೆ. ಫುಡ್ ಇನ್ಸ್ ಪೆಕ್ಟರ್ ಕೊಟ್ಟಿರುವ ವರದಿಯನ್ನು ಕೊಡಿ. ಹಂದಿ ಮಾಂಸ ತಿನ್ನಿಸ್ತಿದ್ದಾರೆ ಅಂದ್ರೆ ಉರಿಯಲ್ವಾ? ಅದೇ ರೀತಿ ನಾಯಿ ಮಾಂಸ ಅಂದಾಗ ತನಿಖೆ ಆಗ್ಬೇಕು ಅಲ್ವಾ? ಎಂದು ಕೇಳಿದ್ದಾರೆ.
ಪುನೀತ್ ಕೆರೆಹಳ್ಳಿ ಬೆತ್ತಲೆಗೊಳಿಸಿ ಹಲ್ಲೆ ಆರೋಪ; ಎಸಿಪಿ ಚಂದನ್ ಭೇಟಿಗೆ ಬಂದ ಮಾಜಿ ಸಂಸದ ಪ್ರತಾಪ್ ಸಿಂಹ
ಪೊಲೀಸ್ ಇಲಾಖೆಯಲ್ಲಿ ಏನಾದ್ರೂ ಸಲಿಂಗಕಾಮಿ ಇದಾರಾ..!? ಯಾಕ್ ಪುನೀತ್ ಕೆರೆಹಳ್ಳಿ ಬಟ್ಟೆ ಬಿಚ್ಚಿಸ್ಬೇಕಿತ್ತು ಅಬ್ದುಲ್ ರಜಾಕ್ ಹತ್ತಿರ ಟ್ರೇಡ್ ಲೈಸೆನ್ಸ್ ಇಲ್ಲ. ಕೈ ಬೆರಳಿಗೆ ಶಾಹಿ ಹಚ್ಕೊಂಡು ಯಾವ್ದೋ ರಿಪೋರ್ಟ್ ತಂದಿದಾನೆ. ಕುರಿಗಾಗಿ ರಾಜಸ್ಥಾನಕ್ಕೆ ಯಾಕೆ ಹೋಗ್ಬೇಕು. ನಮ್ಮ ಬನ್ನೂರಿನಲ್ಲಿಯೇ ಒಳ್ಳೆಯ ಕುರಿಗಳು ಸಿಗುತ್ತವೆಯಲ್ಲ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.
ಪುನೀತ್ ಕೆರೆಹಳ್ಳಿಗೆ ಟಾರ್ಚರ್ ಆರೋಪ; ಪೊಲೀಸ್ ದೌರ್ಜನ್ಯ ಖಂಡಿಸಿ ನಾಳೆ ಪ್ರತಾಪ್ ಸಿಂಹ ಪ್ರತಿಭಟನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ