ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ, ಜೈಲಿನಲ್ಲಿ ದರ್ಶನ್ ಭೇಟಿಯಾಗಿರುವ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದ 'ಅಭಿಮಾನಿ..' ಸಿದ್ಧಾರೂಢಗೆ ಮತ್ತೆ ಜೈಲುವಾಸವಾಗುವ ಸಾಧ್ಯತೆ ಇದೆ.
ಬೆಂಗಳೂರು (ಜು.31): ಬರೋಬ್ಬರಿ 21 ವರ್ಷಗಳ ಜೈಲುವಾಸದ ಬಳಿಕ ಇತ್ತೀಚೆಗೆ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದ ಸಿದ್ದಾರೂಢ, ಜೈಲಿನಿಂದ ಹೊರಬಂದವನೇ ಫುಲ್ ವೈರಲ್ ಆಗಿ ಬಿಟ್ಟಿದ್ದ. ಎಲ್ಲಾ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಸಿದ್ಧಾರೂಢ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ರನ್ನು ನಾನು ಭೇಟಿಯಾಗಿದ್ದೇನೆ. ಅವರಿಗೆ ಧ್ಯಾನವನ್ನು ಹೇಳಿಕೊಟ್ಟಿದ್ದೆ. ಅವರು ಕೂಡ ನನ್ನ ಬಗ್ಗೆ, ನನ್ನ ಕೇಸ್‌ನ ಬಗ್ಗೆ ವಿಚಾರಿಸಿದ್ದರು ಎಂದು ಮಾಧ್ಯಮಗಳಿಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡಿದ್ದ. ಆದರೆ, ಜೈಲು ಅಧಿಕಾರಿಗಳು ಮಾತ್ರ ದರ್ಶನ್ ಹಾಗೂ ಸಿದ್ಧಾರೂಢ ಜೈಲಿನಲ್ಲಿ ಭೇಟಿಯೇ ಆಗಿರಲಿಲ್ಲ ಎಂದು ಹೇಳಿದ್ದರು. ಸನ್ನಡತೆ ಆಧಾರದಲ್ಲಿ ಜೈಲಿನಿಂದ ಹೊರಬಂದ ಸಿದ್ಧಾರೂಢನಿಗೆ ಈಗ ಮತ್ತೆ ಜೈಲುವಾಸದ ಆತಂಕ ಎದುರಾಗಿದೆ. ಜೈಲಿನಿಂದ ಹೊರಬಂದ ಬಳಿಕ ಸುಳ್ಳು ಹೇಳಿಕೆಗಳನ್ನು ನೀಡಿ ಕಾರಾಗೃಹ ಇಲಾಖೆಗೆ ಮುಜುಗರ ತಂದ ಆರೋಪದ ಮೇಲೆ ಅವರ ಬಂಧನವಾಗುವ ಸಾಧ್ಯತೆ ಇದೆ.
ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾನು ಧ್ಯಾನವನ್ನು ಹೇಳಿಕೊಟ್ಟಿದ್ದೇನೆ. ವಿಐಪಿ ಸೆಲ್ ಜೈಲಿನಲ್ಲಿದೆ. ಅಲ್ಲಿ ಟಿವಿ ಕೂಡ ಇದೆ ಎಂದು ಸುಳ್ಳು ಗಳನ್ನು ಹೇಳಿದ್ದ. ದರ್ಶನ್ ಕುರಿತಾಗಿ ಮಾಧ್ಯಮಗಳು ಬೇಕಾಬಿಟ್ಟಿಯಾಗಿ ಸುಳ್ಳು ಹೇಳಿ ಬಿಲ್ಡಪ್ ಕೂಡ ನೀಡಿದ್ದ. ಇದನ್ನು ಗಮನಿಸಿರುವ ಕಾರಾಗೃಹದ ಅಧಿಕಾರಿಗಳು ಆತನ ಸನ್ನಡತೆ ಆಧಾರದ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಲು ಮುಂದಾಗಿದ್ದಾರೆ. ಹಾಗೇನಾದರೂ ಆದಲ್ಲಿ ಸಿದ್ಧಾರೂಢಗೆ ಮತ್ತೆ ಜೈಲುವಾಸ ಮುಂದುವರಿಯಲಿದೆ.
ಕಾರಾಗೃಹ ಅಧಿಕಾರಿಗಳು ಹೇಳುವ ಪ್ರಕಾರ, ದರ್ಶನ್ ಹಾಗೂ ಸಿದ್ಧಾರೂಢ ಭೇಟಿಯಾಗಲು ಸಾಧ್ಯವೇ ಇಲ್ಲ. ಏಕೆಂದರೆ, ಸಿದ್ಧಾರೂಢ ಬಳ್ಳಾರಿ ಜೈಲಿನಲ್ಲಿ ತನ್ನ ಸೆರೆವಾಸ ಅನುಭವಿಸಿದ್ದ. ಬಿಡುಗಡೆಯ ಸಂದರ್ಭದಲ್ಲಿ ಮಾತ್ರವೇ ಆತನನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಮರುದಿನವೇ ಸಿದ್ಧಾರೂಢ ಬಿಡುಗಡೆ ಆಗಿದ್ದಾರೆ. ದರ್ಶನ್ ಇರುವ ಸೆಲ್‌ನ ಒಳಗೆ ಈವರೆಗೂ ಯಾರನ್ನೂ ಬಿಟ್ಟಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಿಂದ ಸಿದ್ಧರೂಢ ಹೊರಗೆ ಬರುತ್ತಿದ್ದಂತೆ ಮಾಧ್ಯಮಗಳು ಆತನನ್ನು ಮುತ್ತಿಕೊಂಡಿದ್ದವು. ಮಾಧ್ಯಮಗಳ ಕ್ಯಾಮೆರಾ ಕಂಡ ಕೂಡ ತಾನೂ ಕೂಡ ದರ್ಶನ್ ಅಭಿಮಾನಿ, ಅವರ ಭೇಟಿಗೆ ಅವಕಾಶ ಕೇಳಿದ್ದೆ. ಜೈಲಿನಲ್ಲೇ ನನಗೆ ಅವಕಾಶ ಸಿಕ್ಕಿತು. ಅವರು ನನ್ನ ತಬ್ಬಿಕೊಂಡಿದ್ದರು. ಜೈಲಲ್ಲಿ ಇರುವಾಗ ಧ್ಯಾನ ಮಾಡಿದರೆ, ಒಳ್ಳೆಯದು ಎಂದು ಅದನ್ನು ಹೇಳಿಕೊಟ್ಟೆ. ಅವರು ಕೂಡ ಅದನ್ನು ಕಲಿತುಕೊಂಡರು ಎಲ್ಲರಿಗೂ ಈ ಅವಕಾಶ ಸಿಗೋದಿಲ್ಲ. ಆ ಬಳಿಕ ನನ್ನ ಕೇಸ್‌ನ ಬಗ್ಗೆಯೂ ಅವರು ವಿಚಾರಿಸಿದ್ದರು ಎಂದು ಹೇಳಿಕೊಂಡಿದ್ದ. ಸೋಶಿಯಲ್ ಮೀಡಿಯಾಗಳಲ್ಲೂ ಈತನ ಸಂದರ್ಶನಗಳು ವೈರಲ್ ಆಗಿದ್ದವು.
ಸಿನೆಮಾ ಸ್ಟಾರ್‌ಗಳಿಗೆ ಯೋಗ್ಯತೆ ಮೀರಿ ಬಿಲ್ಡಪ್ ಕೊಡ್ತಿದ್ದಾರೆ: ದರ್ಶನ್ ಕೇಸ್ ಬಗ್ಗೆ ಅಹಿಂಸಾ ಚೇತನ್ ಹೇಳಿಕೆ
ಸುಳ್ಳು ಹೇಳಿದ ಸಿದ್ದಾರೂಢನ ಸನ್ನಡತೆಯನ್ನು ಕ್ಯಾನ್ಸಲ್ ಮಾಡಿ ಪೊಲೀಸ್ ಠಾಣೆಯಿಂದ ಬಂಧಿಸಲು ತೀರ್ಮಾನಿಸಲಾಗಿದೆ. ಈ ಕುರಿತಾಗಿ ಕೆಲವೇ ದಿನಗಳಲ್ಲಿ ರಿಪೋರ್ಟ್ ಕಾರಾಗೃಹ ಇಲಾಖೆಯ ಕೈ ಸೇರಲಿದೆ. ಸಿದ್ಧಾರೂಢನ ಮಾತಿಗೆ ಕಾನೂನು ಮೂಲಕವೇ ಉತ್ತರ ನೀಡಲು ಇಲಾಖೆ ಮುಂದಾಗಿದೆ. ಜೈಲಿನ ಮ್ಯಾನ್ಯುಯೆಲ್ ಪ್ರಕಾರ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ. ಜೈಲಿನಲ್ಲಿ ದರ್ಶನ್ ಹಾಗೂ ಸಿದ್ಧಾರೂಢ ಭೇಟಿಯ ಬಗ್ಗೆ ಕಾರಾಗೃಹ ಇಲಾಖೆಯಿಂದ ಗೃಹ ಇಲಾಖೆ ಕೂಡ ರಿಪೋರ್ಟ್ ಕೇಳಿದೆ.
ದರ್ಶನ್ ಸರ್ ಹೊರಗೆ ಬಂದು ಮೂರು ತಿಂಗಳು ವರ್ಕ್‌ಔಟ್ ಮಾಡಿದ್ರೆ ಸಾಕು, ಫಿಟ್ ಆಗ್ತಾರೆ: ಜಿಮ್ ರವಿ