ಬೆಂಗಳೂರಿಗೆ ರಾಜಸ್ಥಾನದಿಂದ ಬಂದ ಮಾಂಸ ನಾಯಿ ಮಾಂಸವಲ್ಲ, ಇದು ಕುರಿ ಮಾಂಸ; ಆಹಾರ ಇಲಾಖೆ ಅಧಿಕಾರಿ ಪರೀಕ್ಷಾ ವರದಿಯನ್ನು ಬಹಿರಂಗಗೊಳಿಸಿದ್ದಾರೆ.
ಬೆಂಗಳೂರು (ಜು.31): ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಾಂಸ ವಶಕ್ಕೆ ಪಡೆದು ಪರಿಶೀಲನೆ ಮಾಡಿದ ಆಹಾರ ಸುರಕ್ಷತಾ ಇಲಾಖೆಯು ಎಲ್ಲ ಬಾಕ್ಸ್‌ನಲ್ಲಿರುವುದು ಕುರಿ ಮಾಂಸ ಎಂದು ಪರೀಕ್ಷಾ ವರದಿಯನ್ನು ಬಹಿರಂಗ ಮಾಡಿದೆ.
ಬೆಂಗಳೂರಿಗೆ ರೈಲಿನಲ್ಲಿ ಪೂರೈಕೆ ಆಗುತ್ತಿದ್ದ ಮಾಂಸದ ಪರೀಕ್ಷಾ ವರದಿ ಬಗ್ಗೆ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತ ಕೆ. ಶ್ರೀನಿವಾಸ್ ಅವರು, ಮಾಂಸವನ್ನು ವಶಕ್ಕೆ ಪಡೆದು ಪರೀಕ್ಷೆ ಮಾಡಿದಾಗ 84 ಬಾಕ್ಸ್‌ಗಳಲ್ಲಿದ್ದ ಎಲ್ಲ ಮಾಂಸವೂ ಕುರಿಯ ಮಾಂಸ ಎಂದು ತಿಳಿದುಬಂದಿದೆ. ಈ ವರದಿಯನ್ನು ಆಹಾರ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತಾ ಅವರಿಗೆ ವರದಿ ಸಲ್ಲಿಕೆ ಮಾಡಿದ್ದೇವೆ. ಈಗ ಹೈದರಾಬಾದ್‌ಗೆ ಕಳುಹಿಸಲಾಗಿದ್ದ ಲ್ಯಾಬ್ ರಿಪೋರ್ಟ್ ಬಂದಿದ್ದು, ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಿದ ರಿಪೋರ್ಟ್ ಬರುವುದು ಬಾಕಿಯಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ಸರಬರಾಜು ಆಗುತ್ತಿದೆಯೇ ನಾಯಿ ಮಾಂಸ? ರಾಜಸ್ಥಾನದಿಂದ ಬಂದ 4000 ಕೆಜಿ ಉದ್ದಬಾಲದ ಮಾಂಸ ಯಾವುದು?
ರಾಜಸ್ಥಾನದಿಂದ ನಾಯಿ ಮಾಂಸ ಮಾರಾಟ ಪ್ರಕರಣದ ಬಗ್ಗೆ ಆಹಾರ ಮತ್ತು ಗುಣಮಟ್ಟ ಇಲಾಖೆ ವತಿಯಿಂಸ ಸುರಕ್ಷತೆ ಕ್ರಮ ಕೈಗೊಳ್ಳುತ್ತಿದೆ. ರಾಜಸ್ಥಾನದಿಂದ 84 ಬಾಕ್ಸ್ ಮಾಂಸ ಬಂದಿತ್ತು. ಅದೆಲ್ಲವೂ ಕುರಿ ಮಾಂಸ ಅಂತ ವರದಿ ಬಂದಿದೆ. ಈ ಮಾಂಸದಲ್ಲಿ ಯಾವುದೇ ಬೇರೆ ಪ್ರಾಣಿಯ ಮಾಂಸ ಮಿಶ್ರಣವಾಗಿಲ್ಲ ಎಂಬುದು ದೃಢಪಟ್ಟಿದೆ. ಇನ್ನು ಬೆಂಗಳೂರಿನಲ್ಲಿ ಲ್ಯಾಬ್ ರಿಪೋರ್ಟ್ ಬರಬೇಕಿದೆ. ಹೈದರಾಬಾದ್ ನ ರಿಪೋರ್ಟ್ ಇದೀಗ ಬಂದಿದೆ. ಹೈದರಾಬಾದ್ ರಿಪೋರ್ಟ್ ನಲ್ಲಿ ಕುರಿ ಮಾಂಸ ಅಂತ ರಿಪೋರ್ಟ್ ಬಂದಿದೆ ಎಂದು ತಿಳಿಸಿದರು.
ಇನ್ನು ರಾಜಸ್ಥಾನದಿಂದ ಮಾಂಸ ಆಮದು ಮಾಡಿಕೊಳ್ಳಲು ಲೈಸೆನ್ಸ್ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪ್ರಾಥಮಿಕ ಹಂತದಲ್ಲಿ 9 ಜನರಿಗೆ ಲೈಸೆನ್ಸ್ ಪಡೆದಿದ್ದರು ಎಂಬ ಹಿನ್ನಲೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿದೆ. ಎಲ್ಲರ ಬಳಿಯೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಲೈಸೆನ್ಸ್ ಇದೆ. ಹಿಗಾಗಿ, ರಾಜಸ್ಥಾನದಿಂದ ಕುರಿ ಮಾಂಸವನ್ನು ತಂದು ಮಾರಾಟ ಮಾಡುತ್ತಿದ್ದರು. ರಾಜಸ್ಥಾನದಿಂದ ಬಂದ ಮಾಂಸ ನಾಯಿ ಮಾಂಸ ಅಲ್ಲ. ನಾಯಿ ಮಾಂಸ ಅಂತ ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ನಾವು ಪೊಲೀಸರಿಗೆ ವರದಿ ನೀಡುತ್ತೇವೆ. ವದಂತಿ ಮಾಡುವವರ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಪುನೀತ್ ಕೆರೆಹಳ್ಳಿ ಬೆತ್ತಲೆಗೊಳಿಸಿ ಹಲ್ಲೆ ಆರೋಪ; ಎಸಿಪಿ ಚಂದನ್ ಭೇಟಿಗೆ ಬಂದ ಮಾಜಿ ಸಂಸದ ಪ್ರತಾಪ್ ಸಿಂಹ
ಗೃಹ ಸಚಿವ ಮೇಕೆ ಮಾಂಸ ಎಂದಿದ್ದ ಬಗ್ಗೆ ಗೊತ್ತಿಲ್ಲ: ಗೃಹ ಸಚಿವ ಜಿ ಪರಮೇಶ್ವರ್ ಮೇಕೆ ಮಾಂಸ ಎಂದು ಹೇಳಿದ್ದ ವಿಚಾರದ ಬಗ್ಗೆ ಮಾತನಾಡಿ, ಅವರು ವರದಿ ಬರುವ ಮುನ್ನ ಹೇಗೆ ಹೇಳಿದ್ರು ಅಂತ ಗೊತ್ತಿಲ್ಲ. ನಮ್ಮ ಜೊತೆ ಈ ಬಗ್ಗೆ ಕೇಳಿಲ್ಲ. ಅವರು ಯಾಕೆ ಹೇಳಿದ್ರು ಅಂತ ಅವರನ್ನೆ ಕೇಳಬೇಕು. ಹೈದ್ರಾಬಾದ್ ಐಸಿಎಆರ್ ರಿಪೋರ್ಟ್ ಗುಣಮಟ್ಟ ಇಲಾಖೆಯಿಂದ ವರದಿ ಬಂದಿದೆ. ಅಂದರೆ, ಐಸಿಎಆರ್ ರಿಪೋರ್ಟ್ ನಲ್ಲಿ ನಾಯಿ ಮಾಂಸ ಅಲ್ಲ ಕುರಿ ಮಾಂಸ ಅಂತ ವರದಿ ಬಂದಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಹೇಳಿದರು.